ಗೆಜ್ಜೆಗಿರಿ ಶ್ರೀ ಕ್ಷೇತ್ರದ ಜಾತ್ರಾ ಮಹೋತ್ಸವ ಆರಂಭ, ಸಾವಿರಾರು ಭಕ್ತರ ಸಮಾಗಮ

0

ಸಹಸ್ರ ಸಂಖ್ಯೆಯಲ್ಲಿ ತಾಯಂದಿರಿಂದ ‘ಅಮ್ಮನ ಮಡಿಲ ಪ್ರಸಾದ’ ಸ್ವೀಕಾರ

ಪುತ್ತೂರು: ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ನಂದನಬಿತ್ತ್‌ಲ್ ಶ್ರೀ ಕ್ಷೇತ್ರ ಗೆಜ್ಜೆಗಿರಿ ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.2ರಂದು ಅದ್ಧೂರಿಯಾಗಿ ಜರಗಿತು. ಊರು ಪರವೂರುಗಳಿಂದ ಸಹಸ್ರ ಸಂಖ್ಯೆಯಲ್ಲಿ ಜನಸಾಗರ ಗೆಜ್ಜೆಗಿರಿಯತ್ತ ಹರಿದು ಬಂದು ಶ್ರೀ ಕೋಟಿ ಚೆನ್ನಯ,ದೇಯಿ ಬೈದ್ಯೆತಿಯ ಅನುಗ್ರಹಕ್ಕೆ ಪಾತ್ರವಾಯಿತು. ವಿಶೇಷವಾಗಿ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ‘ಅಮ್ಮನ ಮಡಿಲ ಪ್ರಸಾದ’ ಎಂಬ ಶ್ರೀಮಾತೆ ದೇಯಿ ಬೈದ್ಯೆತಿ ಅಮ್ಮನವರ ಮಹಾ ಸಂಕಲ್ಪದಂತೆ ನಾಡಿನ ಎಲ್ಲಾ ಮಾತೆಯರಿಗೆ ಅಮ್ಮನ ಪ್ರೀತಿ ತುಂಬಿದ ಆಶೀರ್ವಾದ ರೂಪದಲ್ಲಿ ಮಡಿಲು ತುಂಬಿಸುವ ಕಾರ್ಯಕ್ರಮ ಸತ್ಯಧರ್ಮ ಚಾವಡಿಯಲ್ಲಿ ನಡೆಯಿತು. ನಾಡಿನ ಮೂಲೆಮೂಲೆಗಳಿಂದ ಸಹಸ್ರ ಸಂಖ್ಯೆಯಲ್ಲಿ ಮಾತೆಯರು ಆಗಮಿಸಿ ಅಮ್ಮನ ಮಡಿಲ ಪ್ರಸಾದ ಸ್ವೀಕರಿಸಿ ಪಾವನರಾದರು.


ಮೂಡಬಿದ್ರೆ ಶಿವಾನಂದ ತಂತ್ರಿಯವರ ನೇತೃತ್ವದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಗುರುಪೂಜೆ, ತೋರಣ ಮುಹೂರ್ತ, ನಾಗದೇವರ ಸಾನಿಧ್ಯದಲ್ಲಿ ಗಣಹೋಮ, ನವಕ ಕಲಶಾಭಿಷೇಕ, ಆಶ್ಲೇಷ ಬಲಿ ಸೇವೆ ನಡೆದು ಮಂಗಳಾರತಿ ಮತ್ತು ಧೂಮವತಿ ಸಾನಿಧ್ಯ ಹಾಗೂ ಎಲ್ಲಾ ಪರಿವಾರ ಸಾನಿಧ್ಯದಲ್ಲಿ ಶುದ್ಧಿ ನವಕ ಕಲಶಾಭಿಷೇಕ ನಡೆಯಿತು. ಬೆಳಿಗ್ಗೆ 11.28 ರ ವೃಷಭ ಲಗ್ನದಲ್ಲಿ ಧ್ವಜಾರೋಹಣ ಪರ್ವ ಸೇವೆ, ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. 12 ಗಂಟೆಯಿಂದ ಅಮ್ಮನ ಮಡಿಲ ಪ್ರಸಾದ ವಿತರಣೆ ಆರಂಭಗೊಂಡಿತು ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಧೂಮಾವತಿ ಬಲಿ ಉತ್ಸವ, ಧರ್ಮಚಾವಡಿಯಲ್ಲಿ ಭಗವತೀ ಸೇವೆ ಮಹಾಪೂಜೆ ನಡೆಯಿತು.


ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಬೆಳಿಗ್ಗೆ ಸ್ವರ ಮಾಧುರ್ಯ ಸಂಗೀತ ಬಳಗ ಪುತ್ತೂರು ಇವರಿಂದ ಬಾಲಪ್ರತಿಭೆ ಸೋನಿಕಾ ಜನಾರ್ದನ್ ಬಳಗದವರಿಂದ ಭಕ್ತಿ ಗಾಯನ ನಡೆಯಿತು.


ಇತಿಹಾಸ ಸೃಷ್ಟಿಸಿದ ‘ಅಮ್ಮನ ಮಡಿಲ ಪ್ರಸಾದ’ ಕಾರ್ಯಕ್ರಮ
ಶ್ರೀ ಕ್ಷೇತ್ರದಲ್ಲಿ ಆರಾಧನೆ ಪಡೆಯುತ್ತಿರುವ ಶ್ರೀಮಾತೆ ದೇಯಿ ಬೈದ್ಯೆತಿ ಅಮ್ಮನವರ ಸಂಕಲ್ಪದಂತೆ ನಾಡಿನ ಎಲ್ಲಾ ಮಾತೆಯರಿಗೆ ಅಮ್ಮನ ಪ್ರೀತಿ ತುಂಬಿದ ಆಶೀರ್ವಾದ ರೂಪದಲ್ಲಿ ಮಡಿಲು ತುಂಬಿಸುವ ಕಾರ್ಯಕ್ರಮ ‘ಅಮ್ಮನ ಮಡಿಲ ಪ್ರಸಾದ’ ವಿತರಣೆ ಸತ್ಯಧರ್ಮ ಚಾವಡಿಯಲ್ಲಿ ನಡೆಯಿತು. ದಕ್ಷಿಣ ಭಾರತದ ಇತಿಹಾಸದಲ್ಲೇ ಇಂದೊಂದು ವಿಶೇಷ ಕಾರ್ಯಕ್ರಮವಾಗಿ ಮೂಡಿಬಂತು. ಅಮ್ಮನ ಮಡಿಲ ಪ್ರಸಾದ ಸ್ವೀಕಾರಕ್ಕೆ ಜಿಲ್ಲೆಯಿಂದಲೇ ಜನ ಸಾಗರ ಹರಿದು ಬಂದಿತ್ತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ ಮಾತೆಯರು ಸರತಿ ಸಾಲಿನಲ್ಲಿ ನಿಂತು ಸತ್ಯಧರ್ಮ ಚಾವಡಿಯಲ್ಲಿ ಅಮ್ಮನ ಮಡಿಲ ಪ್ರಸಾದ ಸ್ವೀಕರಿಸಿದರು. ಪ್ರಸಾದ ಸ್ವೀಕರಿಸಿ ಮಾತೆ ದೇಯಿ ಬೈದೆತಿಯ ಆಶೀರ್ವಾದಕ್ಕೆ ಪಾತ್ರರಾದರು.

ತಾಯಂದಿರಿಗೆ ಸಂಸಾರ, ಸಮಾಜವನ್ನು ತಿದ್ದುವ ಅದ್ಭುತ ಶಕ್ತಿ ಇದೆ: ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕನ್ಯಾಡಿ
ಗೆಜ್ಜೆಗಿರಿ ಕ್ಷೇತ್ರಕ್ಕೆ ಆಗಮಿಸಿದ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನ ಕನ್ಯಾಡಿ ಪೀಠಾಧಿಪತಿಗಳು ,1008 ಮಹಾ ಮಂಡಲೇಶ್ವರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಮಾತೆ ದೇಯಿ ಬೈದೆತಿಯ ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಾತೆಯರು ಸೇರಿರುವುದನ್ನು ಕಂಡಾಗ ಬಹಳಷ್ಟು ಖುಷಿಯಾಗುತ್ತಿದೆ. ತಾಯಂದಿರಿಗೆ ಈ ಸಮಾಜವನ್ನು, ಸಂಸಾರವನ್ನು ತಿದ್ದುವ ಅದ್ಭುತ ಶಕ್ತಿ ಇದೆ. ತಾಯಂದಿರಿಂದಲೇ ಯಜ್ಞವನ್ನು ಕೂಡ ಮಾಡಿ ತೋರಿಸಿದ್ದೇವೆ. ಬಿಲ್ಲವರಿಗೆ ಇರುವ ಶಕ್ತಿಯನ್ನು ತೋರಿಸುವ ಕೆಲಸವನ್ನು ಗೆಜ್ಜೆಗಿರಿ ಮಾಡುತ್ತಿದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ನಾರಾಯಣ ಗುರುಗಳ ಸಿದ್ಧಾಂತ ಹಾಗೇ ಕೋಟಿ ಚೆನ್ನಯರ ಸಿದ್ದಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜ್ಞಾವಂತ ನಾಗರೀಕರಾಗಿ ಬದುಕೋಣ ಎಂದು ಹೇಳಿ ಶುಭಾಶೀರ್ವಚನ ನೀಡಿದರು.


ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಕಾರ್ಯದರ್ಶಿ ಡಾ.ರಾಜಾರಾಮ್ ಬಿ.ಕೆ, ಗೌರವ ಅಧ್ಯಕ್ಷ ಪಿತಾಂಭರ ಹೇರಾಜೆ, ಗೌರವ ಅಧ್ಯಕ್ಷ ಜಯಂತ ನಡುಬೈಲ್, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಮೊಕ್ತೇಸರ ಶ್ರೀಧರ ಪೂಜಾರಿ, ಕೋಶಾಧಿಕಾರಿ ಮೋಹನದಾಸ ಬಂಗೇರ, ಉಪಾಧ್ಯಕ್ಷ ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್ ಗುರುಪುರ, ಸಂಜೀವ ಪೂಜಾರಿ ಕೂಚಿಗುಡ್ಡೆ, ಚಂದ್ರಹಾಸ ಅಮೀನ್, ಅಜಿತ್ ಪಾಲೇರಿ, ಸುಧಾಕರ ಪೂಜಾರಿ, ಶಶಿಧರ ಕಿನ್ನಿಮಜಲು,ಡಾ.ಗೀತಾ ಪ್ರಕಾಶ್, ಆನಂದ ಪೂಜಾರಿ ಸರ್ವೆದೋಳ, ರಾಜೇಂದ್ರ ಚಿಲಿಂಬಿ, ನಾರಾಯಣ ಮಚ್ಚಿನ, ಜಯವಿಕ್ರಮ್ ಕಲ್ಲಾಪು, ವರದರಾಜ್ ಎಂ, ಸುಧಾಕರ ಪೂಜಾರಿ ಕೇಪು, ಪದ್ಮನಾಭ ಪೂಜಾರಿ ಅಳಿಕೆ, ವಿಶ್ವಜಿತ್ ಅಮ್ಮುಂಜ, ಅಶೋಕ್ ಕುಮಾರ್ ಪಡ್ಪು, ಮಾಧವ ಪೂಜಾರಿ ವಿಟ್ಲ, ಎಲ್ಯಣ್ಣ ಪೂಜಾರಿ ಮೈರುಂಡ, ಕರುಣಾಕರ ಸುವರ್ಣ ಉಪ್ಪಿನಂಗಡಿ, ವಿನೋದ್ ಕುಂಡಡ್ಕ, ಮೋಹನ್ ಗುರ್ಜಿನಡ್ಕ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಗೆಜ್ಜೆಗಿರಿತ ಅಮರ್ ಬೊಳ್ಳಿಲು ಆಲ್ಪಂ ಸಾಂಗ್ ಬಿಡುಗಡೆ
ಸ್ವರ ಮಾಧುರ್ಯ ಸಂಗೀತ ಬಳಗದ ಸಾರಥ್ಯದಲ್ಲಿ ಪ್ರಜ್ಞಾ ಮತ್ತು ಅಜಿತ್ ಕುಮಾರ್ ಗೋಳಿತೊಟ್ಟು ಇವರ ನಿರ್ಮಾಣದಲ್ಲಿ ಕಾವ್ಯಶ್ರೀ ಗಡಿಯಾರ ಮತ್ತು ಬಾಲ ಪ್ರತಿಭೆ ಸೋನಿಕಾ ಜನಾರ್ದನ್ ಇವರ ಮಧುರ ಕಂಠದಲ್ಲಿ ಮೂಡಿ ಬಂದಿರುವ ಇತಿಹಾಸ ಪ್ರಸಿದ್ಧ ಗೆಜ್ಜೆಗಿರಿ ಕ್ಷೇತ್ರದ ಕುರಿತು “ಗೆಜ್ಜೆ ಗಿರಿತ ಅಮರ್ ಬೊಳ್ಳಿಲು” ತುಳು ವೀಡಿಯೋ ಆಲ್ಬಂ ಸಾಂಗ್ ಅನ್ನು ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನ ಕನ್ಯಾಡಿ ಪೀಠಾಧಿಪತಿಗಳಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಪುತ್ತೂರುರವರ ಸಾಹಿತ್ಯವಿರುವ ಈ ಹಾಡಿಗೆ ಸವಿತಾ ಅವಿನಾಶ್ ಪುತ್ತೂರು ರಾಗ ಸಂಯೋಜನೆ , ಹಿನ್ನಲೆ ಸಂಗೀತ ಮತ್ತು ರೆಕಾರ್ಡಿಂಗ್ ಅಶ್ವಿನ್ ಬಾಬಣ್ಣ ಸವಿ ಸಂಗೀತ್ ಸ್ಟುಡಿಯೋ ಪುತ್ತೂರು ,ವಿಡಿಯೋ ಎಡಿಟಿಂಗ್ ಸಂಗೀತ ಪುತ್ತೂರು ಹಾಗೂ ಸಿಶೇ. ಕಜೆಮಾರ್ ಮಾಧ್ಯಮ ಸಹಕಾರ ನೀಡಿದ್ದಾರೆ. ಗೆಜ್ಜೆಗಿರಿತ ಅಮರ್ ಬೊಳ್ಳಿಲು ಹಾಡಿಗೆ 5 ರ ಹರೆಯದ ಪುಟ್ಟ ಬಾಲೆ ಸೋನಿಕಾ ಜನಾರ್ದನ್ ಧ್ವನಿ ನೀಡಿದ್ದು ವಿಶೇಷವಾಗಿದೆ. ಇವರು ಈಗಾಗಲೇ ಮಂಗಳೂರು ದಸರಾ, ಗೋಕರ್ಣನಾಥೇಶ್ವರ, ಉಡುಪಿ ಕೃಷ್ಣ ಮಠ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಕ್ಷೇತ್ರ ಹೀಗೆ ಹಲವು ಕಡೆಗಳಲ್ಲಿ ಭಕ್ತಿ ಸಂಗೀತ ಗಾಯನ ನೀಡಿದ್ದಾರೆ. ಮಂಗಳೂರಿನ ಬೆಸೆಂಟ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಯುಕೆಜಿ ವಿದ್ಯಾರ್ಥಿನಿಯಾಗಿರುವ ಸೋನಿಕಾರವರು ಮೈಸೂರು ಸಿಜೆಎಂ ನ್ಯಾಯಾಲಯದಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾಗಿರುವ ಜನಾರ್ದನ್ ಪುತ್ತೂರು ಮತ್ತು ಪ್ರಮೀಳಾ.ಕೆರವರ ಪುತ್ರಿಯಾಗಿದ್ದಾರೆ.


ನಾಳೆ(ಮಾ.3) ಶ್ರೀ ಕ್ಷೇತ್ರದಲ್ಲಿ ಧೂಮಾವತಿ ನೇಮೋತ್ಸವ
ಮಾ.3 ರಂದು ಬೆಳಿಗ್ಗೆ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆದು ಬೆಳಿಗ್ಗೆ 9 ಗಂಟೆಯಿಂದ ಶ್ರೀ ಧೂಮಾವತಿ ದೈವದ ನೇಮೋತ್ಸವ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಧೂಮಾವತಿ ಬಲಿ ಉತ್ಸವ, ಮಹಾಪೂಜೆ, ರಾತ್ರಿ ಕುಪ್ಪೆ ಪಂಜುರ್ಲಿ ದೈವದ ಭಂಡಾರ ಇಳಿಯುವುದು, ಸತ್ಯ ಧರ್ಮ ಚಾವಡಿಯಲ್ಲಿ ಮಹಾಪೂಜೆ ಬಳಿಕ ಕುಪ್ಪೆ ಪಂಜುರ್ಲಿ ನೇಮೋತ್ಸವ, ಕಲ್ಲಲ್ತಾಯ ದೈವದ ನೇಮೋತ್ಸವ, ಕೊರತಿ ದೈವದ ನೇಮೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here