ಬದಿಯಡ್ಕ ನೀರ್ಚಾಲು ಸಮೀಪದ ಶ್ರೀ ಮಹಾವಿಷ್ಣು ಕ್ಷೇತ್ರ ಕಾರ್ಮಾರು ಮಾನ್ಯ ಇಲ್ಲಿ ಮಾ.4 ರಂದು ಮಧ್ಯಾಹ್ನ ಘಂಟೆ 1 ರಿಂದ 5ರ ತನಕ ಕಾರ್ಮಾರು ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಲುವಾಗಿ ಶ್ರೀ ಎಡನೀರು ಮಠಾಧೀಶರುಗಳಾದ ಜಗದ್ಗುರು ಶಂಕರಾಚಾರ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳ ಉಪಸ್ಥಿತಿಯಲ್ಲಿ ಶಾಂತಾ ಕುಂಟಿನಿ ಸಾರಥ್ಯದ ಸತ್ಯ ಶಾಂತ ಪ್ರತಿಷ್ಠಾನ ರಿ. ಪುತ್ತೂರು ಇವರಿಂದ ಸಂಗೀತ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ನಾಗೇಂದ್ರ ಮಂಗಳೂರು, ಹರೀಶ್ ಆಲದಪದವು, ಅನಿಲ್ ಹೆಚ್ ಬಿ ಹಾಂದಿ, ದಿನೇಶ್ ಕುಮಾರ್, ಅಭಿಷೇಕ್ ಕೋಳಿಕ್ಕಜೆ,ಪ್ರತಿಭಾ ಪುದುಕೋಳಿ, ಅಶ್ವಿಜ್ ಆತ್ರೇಯ ಸುಳ್ಯ, ಶ್ರೇಯಾ ಎಂ.ಜಿ ಸುಳ್ಯ, ಅವನಿ ಎಂ.ಎಸ್ ಸುಳ್ಯ, ಸೋನಾ ಅಡ್ಕಾರ್, ಸ್ವರ ಸುಳ್ಯ, ಹಾರ್ದಿಕಾ ಕೆರೆಕ್ಕೋಡಿ, ಉದಯ್ ಶಂಕರ್,
ಸತ್ಯಾತ್ಮ ಭಟ್, ಸತ್ಯಕಾಮ ಭಟ್ ತಮ್ಮ ನೃತ್ಯ ಹಾಗೂ ಹಾಡಿನ ಮೂಲಕ ಪ್ರೇಕ್ಷಕರ ಮನರಂಜಿಸಲಿದ್ದಾರೆ. ಶ್ರೀ ಪುದುಕೋಳಿ ಕೃಷ್ಣ ಮೂರ್ತಿ ಇವರು ನಿರೂಪಣೆ ಮಾಡಲಿದ್ದಾರೆ.