ಪುತ್ತೂರು:4 ಕಂದಾಯ ಜಿಲ್ಲೆಗಳನ್ನು ಒಳಗೊಂಡ ರೋಟರಿ ಜಿಲ್ಲೆ 3181ರ ಕ್ಲಬ್ ಗಳ ನಡುವಿನ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಕೂಟ ಫೆ. 23 ರಂದು ರೋಟರಿ ಕ್ಲಬ್ ಮಡಿಕೇರಿ ಮಿಸ್ಟಿ ಹಿಲ್ಸ್ ನೇತೃತ್ವದಲ್ಲಿ ಮಡಿಕೇರಿ ಗಾಂಧಿ ಮೈದಾನದ ಮಣ್ಣಿನ ಅಂಗಣದಲ್ಲಿ ನಡೆದಿದ್ದು ಈ ಕಬಡ್ಡಿ ಕೂಟದಲ್ಲಿ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ತೃತೀಯ ಪ್ರಶಸ್ತಿ ಪಡೆಯಿತು.
ಈ ಪಂದ್ಯಕೂಟದಲ್ಲಿ ಪುತ್ತೂರು ಸೆಂಟ್ರಲ್ ತಂಡವನ್ನು ಕ್ಲಬ್ ಸದಸ್ಯರಾದ ಪ್ರದೀಪ್ ಬೊಳ್ವಾರ್, ನವೀನ್ ಚಂದ್ರ ನಾಯ್ಕ್, ಚಂದ್ರಹಾಸ ರೈ, ಜಯಪ್ರಕಾಶ್ ಎ. ಎಲ್., ಮಹೇಶ್ ಚಂದ್ರ ಸಾಲಿಯನ್, ಜಗನ್ನಾಥ ಅರಿಯಡ್ಕ, ಸಂತೋಷ್ ಶೆಟ್ಟಿ ಪ್ರತಿನಿಧಿಸಿದ್ದರು. ವಿಜೇತ ತಂಡವನ್ನು ಫೆ. 25ರಂದು ನಡೆದ ರೋಟರಿ ಪುತ್ತೂರು ಸ್ವರ್ಣ ಮತ್ತು ರೋಟರಿ ಪುತ್ತೂರು ಸೆಂಟ್ರಲ್ ಜಂಟಿಯಾಗಿ ನಡೆಸಿದ ರೋಟರಿ ದಿನ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ವಿಜೇತ ತಂಡವನ್ನು ಗೌರವಿಸಲಾಯಿತು. ವಲಯ 5ರ ಸಹಾಯಕ ಗವರ್ನರ್ ಸೂರ್ಯನಾಥ ಆಳ್ವ ವಿಜೇತ ತಂಡವನ್ನು ಅಭಿನಂದಿಸಿದರು. ಜಂಟಿ ಸಭೆಯ ಮತ್ತು ರೋಟರಿ ಡೇ ಯ ಮಹತ್ವವನ್ನು ರೋಟರಿ ಸೆಂಟ್ರಲ್ ನಿಕಟಪೂರ್ವ ಅಧ್ಯಕ್ಷ ಡಾ. ರಾಜೇಶ್ ಬೆಜ್ಜಂಗಳರವರು ತಿಳಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿ ದಿವಾಕರ ರೈ, ರೋಟರಿ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಅಶ್ರಫ್ ಪಿ. ಎಂ. ರೋಟರಿ ಪುತ್ತೂರು ಸ್ವರ್ಣ ಅಧ್ಯಕ್ಷ ಸುರೇಶ್ ಪಿ. ರೋಟರಿ ಸೆಂಟ್ರಲ್ ಕಾರ್ಯದರ್ಶಿ ವಸಂತ ಶಂಕರ್ ರೋಟರಿ ಸ್ವರ್ಣ ಕಾರ್ಯದರ್ಶಿ ಸೆನೋರಿಟ ಆನಂದ್ ಉಪಸ್ಥಿತರಿದ್ದರು.