ಯುವವಾಹಿನಿ ಉಪ್ಪಿನಂಗಡಿ ಘಟಕದಿಂದ ಯುವ ಬಾಂಧವ್ಯ-2025

0

ಯುವವಾಹಿನಿಯ ಸೇವಾ ಕೈಂಕರ್ಯ ಎಲ್ಲರಿಗೂ ಮಾದರಿ-ತನಿಯಪ್ಪ ಪೂಜಾರಿ

ಪುತ್ತೂರು: ಯುವವಾಹಿನಿ ಸಂಸ್ಥೆಯ ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದು, ಇದರ ಸದಸ್ಯರ ಶಿಸ್ತುಬದ್ದ ಸೇವಾ ಚಟುವಟಿಕೆ, ಬದ್ಧತೆಯಿಂದಾಗಿ ಯುವಕರು ಯುವವಾಹಿನಿಯತ್ತ ಒಲವು ತೋರಿಸುತ್ತಿದ್ದಾರೆ, ಅಲ್ಲದೆ ಇತರ ಸೇವಾ ಸಂಸ್ಥೆಗಳಿಗೆ ಮಾದರಿಯಾಗಿ ಕೆಲಸ ಮಾಡುತ್ತಿದೆ ಎಂದು ಪೆರ್ನೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಪೆರ್ನೆ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ತನಿಯಪ್ಪ ಪೂಜಾರಿರವರು ಹೇಳಿದರು.

ಅವರು ಯುವವಾಹಿನಿ ಉಪ್ಪಿನಂಗಡಿ ಘಟಕದ ವತಿಯಿಂದ ಲೀಲಾವತಿ ಕೊರಗಪ್ಪ ಪೂಜಾರಿ ಹತ್ತು ಕಳಸೆ ಇವರ ಮನೆಯಲ್ಲಿ ನಡೆದ “ಯುವ ಭಾಂದವ್ಯ-2025”  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉಪ್ಪಿನಂಗಡಿ ಯುವವಾಹಿನಿ ಘಟಕದ ಅಧ್ಯಕ್ಷರಾದ ನಾಣ್ಯಪ್ಪ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಬಿಳಿಯೂರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾದ ರಮೇಶ್ ಸಾಂತ್ಯ, ಘಟಕದ ಮಾಜಿ ಅಧ್ಯಕ್ಷರಾದ ರವೀಂದ್ರ ದಲ್ಕಾಜೆ, ವಿಶ್ವನಾಥ ಹತ್ತು ಕಳಸೆ ಉಪಸ್ಥಿತರಿದ್ದರು.

ಸಭೆಯಲ್ಲಿ ಬಿರುವೆರ್ ಬಿಳಿಯೂರು ಸಂಘಟನೆಯ ರವೀಂದ್ರ ಪೂಜಾರಿ, ಬೆಳ್ಳಿಪ್ಪಾಡಿ ಗ್ರಾಮ ಸಮಿತಿ ಅಧ್ಯಕ್ಷರಾದ ವಸಂತ ಕುಂಡಾಪು, ಉದ್ಯಮಿ ಹರೀಶ್ ಪೂಜಾರಿ ನಿರಾಳ, ಯಶೋಧರ್, ಘಟಕದ ಮಾಜಿ ಅಧ್ಯಕ್ಷರುಗಳಾದ ಅಜಿತ್ ಕುಮಾರ್ ಪಾಲೇರ್, ಅಶೋಕ್ ಕುಮಾರ್ ಪಡ್ಪು, ಚಂದ್ರಶೇಖರ ಕೆ ಸನಿಲ್ , ಮನೋಹರ್ ಕುಮಾರ್, ಕುಶಾಲಪ್ಪ ಹತ್ತು ಕಳಸೆ , ನಿರ್ದೇಶಕರುಗಳಾದ ಪುನೀತ್ ವಿ ಡಿ, ಲಕ್ಷ್ಮೀಶ ನಿಡ್ಡೆಂಕಿ , ವಿದ್ಯಾ ನಿಡ್ಡೆಂಕಿ , ಮನೋಹರ್ ಹಾಗೂ ಸದಸ್ಯರುಗಳು ಮತ್ತಿತರರು ಉಪಸ್ಥಿತರಿದ್ದರು.

ಅಧ್ಯಕ್ಷ ನಾಣ್ಯಪ್ಪ ಕೋಟ್ಯಾನ್ ಸ್ವಾಗತಿಸಿ, ಶಶಿಕಲಾ ವಂದಿಸಿದರು.ರಾಜೀವ ಕೋಟ್ಯಾನ್ ನಿರೂಪಿಸಿದರು.

LEAVE A REPLY

Please enter your comment!
Please enter your name here