ಕೆ.ಎಸ್.ಆರ್.ಟಿ.ಸಿ ಪುತ್ತೂರು ಘಟಕದ ವ್ಯವಸ್ಥಾಪಕರಾಗಿ ಸುಬ್ರಹ್ಮಣ್ಯ ಪ್ರಕಾಶ ಯಂ.

0

ಪುತ್ತೂರು: ಕೆ.ಎಸ್.ಆರ್.ಟಿ.ಸಿ ಪುತ್ತೂರು ಘಟಕದ ವ್ಯವಸ್ಥಾಪಕರಾಗಿ ಸುಬ್ರಹ್ಮಣ್ಯ ಪ್ರಕಾಶ ಯಂ. ರವರನ್ನು ನೇಮಕಗೊಳಿಸಲಾಗಿದೆ.

ಸುಬ್ರಹ್ಮಣ್ಯ ಪ್ರಕಾಶ ಯಂ ಅವರು ಕ.ರಾ.ರ.ಸಾ. ಸಂಸ್ಥೆಯಲ್ಲಿ 16 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ತಾಂತ್ರಿಕ ಮೇಲ್ವಿಚಾರಕ ಸಿಬ್ಬಂದಿಯಾಗಿ ದಾಂಡೇಲಿ, ಶಿರಸಿ ಘಟಕ 2 ವರ್ಷಗಳ ಕಾಲ ಮತ್ತು 4 1/2 ವರ್ಷಗಳ ಕಾಲ ಮಡಿಕೇರಿ ಘಟಕದಲ್ಲಿ ಕರ್ತವ್ಯ ನಿರ್ವಹಿಸಿದ್ದು, ನಂತರ ಸಹಾಯಕ ಕಾರ್ಯಾಧೀಕ್ಷರಾಗಿ 4 1/2 ವರ್ಷ ಧರ್ಮಸ್ಥಳ ಘಟಕ ಮತ್ತು 4 1/2 ವರ್ಷ ಪ್ರಾದೇಶಿಕ ತರಬೇತಿ ಕೇಂದ್ರ ಹಾಸನದಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ಘಟಕ ವ್ಯವಸ್ಥಾಪಕರಾಗಿ ಪದೋನ್ನತಿ ಹೊಂದಿ ಫೆ.28 ರಂದು ಪುತ್ತೂರು ಘಟಕದಲ್ಲಿ ಘಟಕ ವ್ಯವಸ್ಥಾಪಕರಾಗಿ ಕರ್ತವ್ಯ ವಹಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here