ಕಡಬ: ಕೊಯಿಲ ಗ್ರಾಮದ ವಳಕಡಮ ಅಂಗನವಾಡಿಯಿಂದ ಗುಂಡಿಗದ್ದೆಗೆ ಹೋಗುವ ಸಾರ್ವಜನಿಕ ರಸ್ತೆಯ ವಳಕಡಮ ಎಂಬಲ್ಲಿ ಸ್ಥಳೀಯ ನಿವಾಸಿಯೊಬ್ಬರು ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿ ವಾಸ್ತವ್ಯದ ಮನೆಗೆ ಕಂಪೌಂಡ್ ನಿರ್ಮಾಣ ಮಾಡುತ್ತಿರುವ ಬಗ್ಗೆ ವಳಕಡಮ ನಿವಾಸಿಗಳು ಕಡಬ ತಹಶೀಲ್ದಾರ್, ಕೊಯಿಲ ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದಾರೆ.
ವಳಕಡಮ ನಿವಾಸಿ ಗುರುಪ್ರಸಾದ್ ಎಂಬವರು ಸರಕಾರಿ ಸ್ಥಳದಲ್ಲಿ ಅನಧಿಕೃತವಾಗಿ ವಾಸ್ತವ್ಯದ ಮನೆ ನಿರ್ಮಾಣ ಮಾಡಿರುವುದಲ್ಲದೇ ವಳಕಡಮ ಅಂಗನವಾಡಿಯಿಂದ ಗುಂಡಿಗದ್ದೆಗೆ ಹೋಗುವ ಸಾರ್ವಜನಿಕ ರಸ್ತೆಯನ್ನು ಬದಲಾಯಿಸಿ ರಸ್ತೆಯ ಜಾಗದಲ್ಲಿ ಅನಧಿಕೃತವಾಗಿ ವಾಸ್ತವ್ಯದ ಮನೆ ನಿರ್ಮಿಸಿರುತ್ತಾರೆ. ಅಲ್ಲದೆ ಸರಕಾರಿ ಸ್ಥಳದಲ್ಲಿ ಹಾದು ಹೋಗುವ ಬದಲಿ ರಸ್ತೆಯನ್ನೂ ಸಹ ಅತಿಕ್ರಮಿಸಿ ತನ್ನ ಮನೆಯ ಅಂಗಳ ವಿಸ್ತರಿಸುವ ಉದ್ದೇಶದಿಂದ ಕಂಪೌಂಡ್ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಜಾಗವೇ ಇಲ್ಲದ ಪರಿಸ್ಥಿತಿ ಉದ್ಭವವಾಗಲಿದೆ. ಆದ್ದರಿಂದ ರಸ್ತೆ ಜಾಗ ಅತಿಕ್ರಮಿಸಿ ಕಂಪೌಂಡ್ ಮಾಡುತ್ತಿರುವುದನ್ನು ತಕ್ಷಣ ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ವಿಶ್ವನಾಥ ಗೌಡ ವಳಕಡಮ, ಪ್ರವೀಣ ಬಿ.ಬಲ್ತಕುಮೇರು, ಮನೋಹರ ವಳಕಡಮ, ಶಿವರಾಮ ವಳಕಡಮ ಹಾಗೂ ಇತರರು ಕಡಬ ತಹಶೀಲ್ದಾರ್‌ಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ವಳಕಡಮ: ಸಾರ್ವಜನಿಕ ರಸ್ತೆ ಅತಿಕ್ರಮಿಸಿ ವಾಸ್ತವ್ಯದ ಮನೆಗೆ ಕಂಪೌಂಡ್ ನಿರ್ಮಾಣ-ಗ್ರಾಮಸ್ಥರಿಂದ ದೂರು