ಅರಿಯಡ್ಕ: ಮೂಲ ಕೆಮ್ಮಣ ಬೈಲು ಅಳದಂಗಡಿ,ನಾಗದೇವರು ಧೂಮಾವತಿ ಮತ್ತು ಪರಿವಾರ ದೈವಗಳ ಮಡ್ಯಂಗಳ ಕರ್ಕೇರ ಕುಟುಂಬಸ್ಥರ ತರವಾಡು ಮನೆಯಲ್ಲಿ ಮಾ.1 ರಂದು ಗಣಪತಿ ಹೋಮ, ಶುದ್ಧಿ ಕಲಶ, ಶ್ರೀ ಸತ್ಯನಾರಾಯಣ ಪೂಜೆ, ವೆಂಕಟ್ರಮಣ ದೇವರಿಗೆ ಹರಿಸೇವೆ, ಮತ್ತು ಗುಳಿಗ ದೈವ, ಸತ್ಯ ದೇವತೆ ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ,ಕಲ್ಲಾಲ್ದ ಗುಳಿಗ,ವರ್ಣರ ಪಂಜುರ್ಲಿ, ಹಾಗೂ ಗ್ರಾಮ ದೈವ ಧೂಮಾವತಿ ದೈವಗಳಿಗೆ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.

ಅನ್ನ ಸಂತರ್ಪಣೆ
ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ಕುಟುಂಬದ ಯಜಮಾನ ಬೇಳ ಸಂಕಪ್ಪ ಪೂಜಾರಿ, ಆಡಳಿತ ಸಮಿತಿ ಸದಸ್ಯರು, ಕುಟುಂಬಸ್ಥರು ಹಾಗೂ ಊರಿನ ಗಣ್ಯರು, ಸಾರ್ವಜನಿಕ ಭಕ್ತಾದಿಗಳು ಉಪಸ್ಥಿತರಿದ್ದರು.