ಪುತ್ತೂರು: ಯುವ ಜನತೆಗೆ ಉದ್ಯೋಗಾವಕಾಶ ನೀಡುವ ಶೈಕ್ಷಣಿಕ ಕೋರ್ಸ್ ಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದ್ದು, ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕು ಚೆಲ್ಲಿದ ಪುತ್ತೂರಿನ ಖ್ಯಾತ ವಿದ್ಯಾಸಂಸ್ಥೆ ಪ್ರಗತಿ ಸ್ಟಡಿ ಸೆಂಟರ್ 2025-26ನೇ ಸಾಲಿನಲ್ಲಿ ಮತ್ತೊಂದು ಶೈಕ್ಷಣಿಕ ಕೋರ್ಸನ್ನು ಪರಿಚಯಿಸಲು ಎಲ್ಲಾ ಸಿದ್ಧತೆ ನಡೆಸಿದೆ.

ನಗರಪ್ರದೇಶದಲ್ಲಿ ಹೆಚ್ಚುತ್ತಿರುವ ಬಹುಮಹಡಿ ಕಟ್ಟಡಗಳ, ಕೈಗಾರಿಕಾ ಸಂಸ್ಥೆಗಳ ಮತ್ತು ಇನ್ನಿತರ ವಲಯದ ಕಟ್ಟಡ, ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪೈಯರ್ & ಸೇಪ್ಟಿ ತರಬೇತಿಯ ಮಹತ್ವವೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ದೇಶ-ವಿದೇಶದಲ್ಲಿ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಹೆಚ್ಚಿರುವ ಕಾರಣಕ್ಕೆ ಪೈಯರ್ & ಸೇಪ್ಟಿ ವೃತ್ತಿಪರರ ಅವಶ್ಯಕತೆಯೂ ಏರಿಕೆಯಾಗಿದೆ. ಈ ನಿಟ್ಟಿನಲ್ಲಿ ಪ್ರಗತಿ ಸ್ಟಡಿ ಸೆಂಟರ್ ಪೈಯರ್ & ಸೇಪ್ಟಿ ಕೋರ್ಸನ್ನು ಪರಿಚಯಿಸಲು ಮುಂದಾಗಿದೆ. ಕಳೆದ 18 ವರ್ಷಗಳಿಂದ 21 ಸಾವಿರಕ್ಕಿಂತಲೂ ಹೆಚ್ಚು ಯುವಕರಿಗೆ ಉದ್ಯೋಗಾವಕಾಶ ನೀಡಿದ ಭಾರತದ ನಂ.1 ವೃತ್ತಿಪರ ಸಂಸ್ಥೆ ಮಂಗಳೂರಿನ ಮೀಪ್ಸ್- ಮಿನರ್ವ ಕಾಲೇಜಿನೊಂದಿಗೆ ಪ್ರಗತಿ ಸ್ಟಡಿ ಸೆಂಟರ್ ಒಡಂಬಡಿಕೆ ಮಾಡಿಕೊಂಡಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಗರದ ಧರ್ಮಸ್ಥಳ ಬಿಲ್ಡಿಂಗ್ ನ ಪ್ರಥಮ ಮಹಡಿಯಲ್ಲಿ ನೂತನ ವ್ಯವಸ್ಥೆಯೊಂದಿಗೆ ಪೈಯರ್ & ಸೇಪ್ಟಿ ತರಬೇತಿ ಸಂಸ್ಥೆ ಕಾರ್ಯಾಚರಿಸಲಿದೆ. ಕಟ್ಟಡ ಅಥವಾ ಕಾರ್ಖಾನೆಗಳ ಸುರಕ್ಷತಾ ಉಲ್ಲಂಘನೆಗಳ ಪರಿಶೀಲನೆ ನಡೆಸುವ ಶಿಕ್ಷಣದೊಂದಿಗೆ ಈ ವಿಶೇಷ ಕ್ಷೇತ್ರದ ಕಲಿಕೆಯಲ್ಲಿ ಇಂಡಸ್ಟ್ರೀಯಲ್ ಸೇಪ್ಟಿ, ಕಸ್ಟ್ರಕ್ಷನ್ ಡಿಸೈನ್ ಮತ್ತು ಇನ್ಸ್ಟಾಲೇಶನ್ ಪ್ರೊಡ್ಯುಸಸ್ ಮತ್ತು ಪೈಯರ್ ಟೆಕ್ನಾಲಜಿ ಪ್ರಮುಖ ವಿಷಯವಾಗಿದೆ.
ಸದ್ಯ ಇಲ್ಲಿ ಪೈಯರ್ & ಸೇಪ್ಟಿ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮ ಮತ್ತು ಸ್ನಾತಕೋತ್ತರ ಪದವಿ, ಹೆಲ್ತ್ ಸೇಪ್ಟಿ ಮತ್ತು ಎನ್ವಿರಾಲ್ಮೆಂಟ್ ( ಹೆಚ್.ಎಸ್.ಇ), ಮ್ಯಾನೇಜ್ಮೆಂಟ್ ನಲ್ಲಿ ಡಿಪ್ಲೋಮ ಮತ್ತು ಸ್ನಾತಕೋತ್ತರ ಪದವಿ, ಲಾಜಿಸ್ಟಿಕ್ & ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ನಲ್ಲಿ ಅಂತರಾಷ್ಟ್ರೀಯ ಡಿಪ್ಲೋಮ, ಏರೋನಾಟಿಕಲ್ ಮತ್ತು ಮರೈನ್ ಸೇಪ್ಟಿಯಲ್ಲಿ ಡಿಪ್ಲೋಮ, ಲಾಜಿಸ್ಟಿಕ್ & ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ನಲ್ಲಿ ಡಿಪ್ಲೋಮ ಮತ್ತು ಸ್ನಾತಕೋತ್ತರ ಪದವಿ ಎಂಬಿಎ ಕೋರ್ಸ್ ಲಭ್ಯವಿದೆ. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪೂರ್ಣಗೊಳಿಸಿರುವವರು ಪೈಯರ್ & ಸೇಪ್ಟಿ ಕೋರ್ಸ್ ಮಾಡಬಹುದಾಗಿದೆ. ಕೋರ್ಸ್ ಪಡೆದವರಿಗೆ ಎಂ.ಎನ್.ಸಿ, ತೈಲ ಸಂಸ್ಕರಣಾ ಘಟಕ, ರಾಸಾಯನಿಕ ಕಾರ್ಖಾನೆ, ಶುದ್ಧೀಕರಣ ಘಟಕ, ವಿದ್ಯುತ್ ಮಂಡಳಿ, ತಯಾರಿಕಾ ಕೈಗಾರಿಕೆ, ನಿರ್ಮಾಣ ಸಂಸ್ಥೆ, ವಿಮಾನ ನಿಲ್ದಾಣ, ಶಿಪ್ಪಿಂಗ್ ಕಂಪೆನಿ ಸೇರಿದಂತೆ ಹಲವು ಉದ್ಯಮಗಳಲ್ಲಿ ಉದ್ಯೋಗಾವಕಾಶ ದೊರಕಲಿದೆ. ಸಂಸ್ಥೆಯು ಪ್ಲೇಸ್ಮೆಂಟ್ ಸೆಲ್ ಹೊಂದಿದ್ದು, ಕ್ಯಾಂಪಸ್ ಇಂಟರ್ ವ್ಯೂವ್ ಮೂಲಕ ಪರಿಣಿತಿ ಪಡೆದ ವಿದ್ಯಾರ್ಥಿಗಳಿಗೆ ಆಯಾ ವಿಭಾಗದಲ್ಲಿ, ದೇಶ-ವಿದೇಶದ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ದೊರಕಲಿದೆ.
2025-26ನೇ ಸಾಲಿನ ದಾಖಲಾತಿ ಆರಂಭಗೊಂಡಿದ್ದು, ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಸಂಸ್ಥೆಯ ಸಂಚಾಲಕ ಪಿ.ವಿ. ಗೋಕುಲ್ ನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448536143, 9900109490, 8123899490 ನಂಬರನ್ನು ಸಂಪರ್ಕಿಸಬಹುದಾಗಿದೆ.