ಪುತ್ತೂರು: ನೆಹರುನಗರದಲ್ಲಿರುವ ವಿವೇಕಾನಂದ ಸೆಂಟ್ರಲ್ ಸ್ಕೂಲಿನಲ್ಲಿ ಇದೇ ಮಾರ್ಚ್ 2ರಂದು ಚಿಣ್ಣರ ಚಿತ್ತಾರ ಕಾರ್ಯಕ್ರಮವನ್ನು ಸಮಾಜದ 3ರಿಂದ 6 ವರ್ಷದೊಳಗಿನ ಆಸಕ್ತ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿವೇಕಾನಂದ ಶಿಶು ಮಂದಿರದ ಶಿಕ್ಷಕಿ ಜ್ಯೋತಿ ಕುಮಾರಿ ಇವರು ಮಕ್ಕಳ ಕಲಿಕೆಯ ಪ್ರಾರಂಭಿಕ ಹಂತ ಸದೃಢವಾಗಿ ಇರಬೇಕಾದರೆ ಪೋಷಕರ ಪಾತ್ರ ಹೇಗಿರಬೇಕೆಂಬುದನ್ನು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ವಿವೇಕಾನಂದ ಬಿ.ಎಡ್. ಕಾಲೇಜಿನ ಪ್ರಾಂಶುಪಾಲರಾದ ಶೋಭಿತ ಸತೀಶ್ ಮತ್ತು ಶಾಲಾ ಚಿತ್ರಕಲಾ ಶಿಕ್ಷಕಿ ಸುಮನ.ಬಿ ಇವರು ಮಕ್ಕಳಿಗೆ ಮತ್ತು ಮಕ್ಕಳೊಂದಿಗೆ ಭಾಗವಹಿಸಿದ ಪೋಷಕರಿಗೆ ತಮ್ಮ ವೈವಿಧ್ಯಮಯ ಕಥೆ ಹಾಗೂ ಚಟುವಟಿಕೆಗಳಿಂದ ಮನರಂಜಿಸಿದರು. ಶಾಲಾ ಪ್ರಾಂಶುಪಾಲರಾದ ಸಿಂಧು ವಿ.ಜಿ. ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ಕಿಟ್ ವಿತರಿಸಲಾಯಿತು. ಶಿಕ್ಷಕಿ ಲಕ್ಷೀ ಭಟ್ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕಿ ಗೀತಾ ವಂದಿಸಿದರು. ನರ್ಸರಿ ವಿಭಾಗದ ಸಂಯೋಜಕಿ ವಿನಯ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.