ಪುತ್ತೂರು: ಕರ್ನಾಟಕ ಮುಸ್ಲಿಮ್ ಜಮಾತ್ (KMJ)ಬೆಳ್ತಂಗಡಿ ಝೋನ್ ಇದರ ವಾರ್ಷಿಕ ಮಾಹಾಸಭೆ ಮಾ.1ರಂದು ಜಮಾತುಲ್ ಫಲಾಹ್ ಸಭಾಂಗಣದಲ್ಲಿ ಸಯ್ಯದ್ SM ತಂಙಳ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಯ್ಯದ್ ಶರಫುದ್ದೀನ್ ತಂಙಳ್ ರವರು ದುಆದೊಂದಿಗೆ ನೆರವೇರಿಸಿದರು. ಉಸ್ತುವಾರಿ ಕಾಸಿಮ್ ಪದ್ಮುಂಜೆ ಉದ್ಘಾಟಿಸಿದರು. SYS ರಾಜ್ಯ ಕಾರ್ಯದರ್ಶಿ ಸ್ವಾದಿಕ್ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತಾಡಿದರು.
ಝೋನ್ ಕಾರ್ಯದರ್ಶಿ ಮಹಮ್ಮದ್ ರಫಿ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು.ಬಳಿಕ ಹೊಸ ಸಮಿತಿ ರಚಿಸಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಸಯ್ಯದ್ SM ಕೋಯ ತಂಙಳ್, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಮ್ ಕಕ್ಕಿಂಜೆ, ಖಜಾಂಜಿಯಾಗಿ ಮಹಮ್ಮದ್ ರಫಿ,ಉಪಾಧ್ಯಕ್ಷರಾಗಿ ಅಬ್ಬೋನು ಮದ್ದಡ್ಕ ಹಾಗೂ ಕಾರ್ಯದರ್ಶಿಗಳಾಗಿ ದಅವಾ: PU ಅಬ್ದ್ರಹ್ಮಾನ್ ಮುಸ್ಲಿಯಾರ್,ಮೀಡಿಯಾ: ಹಮೀದ್ ಮುಸ್ಲಿಯಾರ್ ಅಲ್ ಫುರ್ಖಾನ್ ಉಲ್ತೂರ್, ಸ್ವಯಂ ಸೇವೆ :ಅಬ್ದುರಹ್ಮಾನ್ ಲಾಡಿ, ಸಹಾಯ್: ಮಯ್ಯದ್ದಿ ಉಜಿರೆ, ಸಂಪರ್ಕಾಧಿಕಾರಿ: ಹೈದರ್ ಮದನಿ ಉಜಿರೆ, ಸಂಘಟನೆ: ಖಾಲಿದ್ ಮುಸ್ಲಿಯಾರ್ ಬುಸ್ತಾನಿ ಆಯ್ಕೆಯಾದರು.
ಆಯ್ಕೆ ಪ್ರಕ್ರಿಯೆಗಳನ್ನು ನಡೆಸಿಕೊಟ್ಟ ಚುನಾವಣಾಧಿಕಾರಿ(RO)ಯಾಗಿ ಅಬ್ಬಾಸ್ ಬಟ್ಲಡ್ಕ ಸಹಕರಿಸಿದರು. ನೂತನ ಕಾರ್ಯದರ್ಶಿ ಇಬ್ರಾಹಿಮ್ ಕಕ್ಕಿಂಜೆ ವಂದಿಸಿದರು.