ನೂಜಿಬಾಳ್ತಿಲ ಗ್ರಾ.ಪಂ: ವಿಶೇಷಚೇತನರ ಸಮನ್ವಯ ಗ್ರಾಮಸಭೆ

0

ನೆಲ್ಯಾಡಿ: ನೂಜಿಬಾಳ್ತಿಲ ಗ್ರಾಮ ಪಂಚಾಯತ್‌ನಲ್ಲಿ 2024-25ನೇ ಸಾಲಿನ ವಿಶೇಷಚೇತನರ ಸಮನ್ವಯ ಗ್ರಾಮಸಭೆ ನಡೆಯಿತು.
ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದ ಕಡಬ ತಾ.ಪಂ.ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್‌ರವರು ವಿಶೇಷಚೇತನರಿಗೆ ಸರಕಾರದ ವಿವಿಧ ಯೋಜನೆಗಳಾದ 1ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ವಿದ್ಯಾರ್ಥಿ ವೇತನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ವಿಶೇಷಚೇತನ ವ್ಯಕ್ತಿಯನ್ನು ವಿವಾಹವಾಗುವ ಸಾಮಾನ್ಯ ವ್ಯಕ್ತಿಗೆ ಪ್ರೋತ್ಸಾಹಧನ ಯೋಜನೆ, ವಿಶೇಷಚೇತನ ಆರೈಕೆದಾರರಿಗೆ ಮಾಸಿಕ ಪ್ರೋತ್ಸಾಹಧನ, ನಿರಾಮಯ ಆರೋಗ್ಯ ವಿಮಾ ಯೋಜನೆ, ಸ್ವ-ಉದ್ಯೋಗ ಮಾಡಲು ಆಧಾರ ಯೋಜನೆ, ಉಚಿತ ಸಾಧನ ಸಲಕರಣೆಗಳ ಯೋಜನೆ ಸಹಿತ ಹಲವು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ನೂಜಿಬಾಳ್ತಿಲ ಸಿ.ಆರ್.ಪಿ. ಗಣೇಶ್‌ರವರು ಸರಕಾರಿ ಶಾಲೆಯಲ್ಲಿ ವಿಶೇಷಚೇತನರಿಗಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಸಂಘ ಉದ್ಘಾಟನೆ:
ವಿಶೇಷಚೇತನರ ಸಂಜೀವಿನಿ ಒಕ್ಕೂಟದ ನೂತನ ಸ್ವ-ಸಹಾಯ ಸಂಘ ’ಬೆಳಕು ’ ಇದನ್ನು ಉದ್ಘಾಟಿಸಲಾಯಿತು. ಒಕ್ಕೂಟದ ವಲಯ ಮೇಲ್ವಿಚಾರಕಿ ಸುವಿನರವರು ಸಂಜೀವಿನಿ ಸಂಘದ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷ ಚಂದ್ರಶೇಖರ, ಸದಸ್ಯರಾದ ಇಮಾನ್ಸುವೆಲ್, ಪಿ.ಜೆ. ಜೋಸೆಫ್, ವಿಜಯಲಕ್ಷ್ಮಿ, ಸಮುದಾಯ ಆರೋಗ್ಯ ಅಧಿಕಾರಿ ಅಕ್ಷತಾ, ಪೂರ್ಣಿಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಂಬಿಕೆ ನಿಮಿತ ಸ್ವಾಗತಿಸಿದರು. ನೂಜಿಬಾಳ್ತಿಲ ಗ್ರಾ.ಪಂ.ನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಸಜೀತ್ ಪಿ.ವಿ. ವಂದಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರುವ ಎಸ್., ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು. ಪಂಚಶ್ರೀ ಸಂಜೀವಿನಿ ಒಕ್ಕೂಟದ ಎಲ್.ಸಿ.ಆರ್.ಪಿ.ಗಳಾದ ಶ್ರೀಕಲಾ, ಸರೋಜಿನಿ, ಬಿ.ಸಿ.ಸಖಿ ರಾಜೀವಿ, ಕೃಷಿ ಸಖಿ ದೀಕ್ಷಾ, ಪಶು ಸಖಿ ಶೀಲಾವತಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಪೆರಾಬೆ ಗ್ರಾ.ಪಂ.ನ ಮುತ್ತಪ್ಪ ಬಿ., ಆಲಂಕಾರು ಗ್ರಾ.ಪಂ.ನ ಮೋನಪ್ಪ ಬಿ, ಸವಣೂರು ಗ್ರಾ.ಪಂ.ನ ದೀಪಿಕಾ, ಆಶಾ ಕಾರ್ಯಕರ್ತೆಯರು, ವಿಶೇಷ ಚೇತನರು ಹಾಗೂ ವಿಶೇಷ ಚೇತನರ ಪೋಷಕರು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here