ಸ್ವಸ್ತಿಕ್ ಸಂಭ್ರಮ ಪುರಸ್ಕಾರಕ್ಕೆ ಅಂಕಣಕಾರ ಆದರ್ಶ್ ಶೆಟ್ಟಿ ಆಯ್ಕೆ

0

ಪುತ್ತೂರು: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಬಂಟ್ವಾಳ ತಾಲೂಕು ಇದರ ವತಿಯಿಂದ ಮಾ.16ರಂದು ಪುಂಜಾಲಕಟ್ಟೆಯಲ್ಲಿ ನಡೆಯುವ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪ್ರತಿ ವರ್ಷದಂತೆ ನಡೆಯುವ ‘ಸ್ವಸ್ತಿಕ್ ಸಂಭ್ರಮ’ ಪುರಸ್ಕಾರಕ್ಕೆ ಈ ಬಾರಿ ಯುವ ಅಂಕಣಕಾರ ಆದರ್ಶ್ ಶೆಟ್ಟಿ ಉಪ್ಪಿನಂಗಡಿ ಆಯ್ಕೆಯಾಗಿದ್ದಾರೆ.


ಉಪ್ಪಿನಂಗಡಿ ಗ್ರಾಮದ ಕಜೆಕ್ಕಾರು ದಿ.ಸುಂದರ ಶೆಟ್ಟಿ ಹಾಗೂ ಗಿರಿಜಾ ಶೆಟ್ಟಿ ದಂಪತಿಯ ಪುತ್ರ ಆದರ್ಶ ಶೆಟ್ಟಿ ಬಾಲ್ಯದಿಂದಲೇ ಆರೆಸ್ಸೆಸ್ಸ್ ಸ್ವಯಂಸೇವಕರಾಗಿದ್ದು ಕಾಲೇಜು ಜೀವನದಲ್ಲಿ ಎಬಿವಿಪಿ ಉಪ್ಪಿನಂಗಡಿ ನಗರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ದ್ವಿತೀಯ ವರ್ಷ ಸಂಘ ಶಿಕ್ಷಾ ವರ್ಗ ಪೂರೈಸಿರುವ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಡಬ ತಾಲೂಕಿನ ವಿವಿಧ ಜವಾಬ್ದಾರಿ ನಿರ್ವಹಿಸಿ ಪರಿವಾರ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.


ಪುತ್ತೂರು ಸುದ್ದಿ ಬಿಡುಗಡೆ, ಬೆಳ್ತಂಗಡಿ ಸುದ್ದಿ ಬಿಡುಗಡೆಯ ಅಂಕಣಕಾರರಾಗಿರುವ ಇವರು ಜಯಕಿರಣ, ಹೊಸದಿಗಂತ, ವಿಶ್ವವಾಣಿ, ಉದಯ ಕಾಲ ಮತ್ತು ವಿಜಯವಾಣಿ ಪತ್ರಿಕೆಗಳಲ್ಲಿಯೂ ಸಾಮಾಜಿಕ ಸಮಸ್ಯೆಗಳು, ಶಿಕ್ಷಣ, ಮೂಲಭೂತ ಸೌಕರ್ಯ,ಭ್ರಷ್ಟಾಚಾರದ ವಿರುದ್ಧ, ತುಳುನಾಡಿನ ಜನಪದ ಕ್ರೀಡೆ ಕಂಬಳ, ಯಕ್ಷಗಾನ, ರಂಗಭೂಮಿ ತುಳುನಾಡಿನ ಸಂಸ್ಕೃತಿ, ಸಾಧಕರ ಯಶೋಗಾಥೆ, ಪ್ರಚಲಿತ ರಾಜಕೀಯ ಸೇರಿದಂತೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅಂಕಣಗಳನ್ನು ಬರೆಯುತ್ತಿದ್ದಾರೆ. ಜೊತೆಗೆ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದಾರೆ.
ರಾಜ್ಯಶಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸಹಕಾರಿ ಹೆಚ್.ಡಿ.ಸಿ.ಎಂ. ಕೋರ್ಸ್ ಪೂರೈಸಿದ್ದಾರೆ.


ಪುತ್ತೂರು ವಿಜಯ ಸಾಮ್ರಾಟ್ ಸಂಸ್ಥೆಯ ಸದಸ್ಯರಾಗಿ ಸೇರಿದಂತೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಆದರ್ಶ್ ಶೆಟ್ಟಿ ಅವರು ಪ್ರಸ್ತುತ ಮಂಗಳೂರು ಕೆ.ಎಂ.ಎ-.ನ ಆಡಳಿತ ವಿಭಾಗದಲ್ಲಿ ಉದ್ಯೋಗಿಯಾಗಿದ್ದು ಒಕ್ಕೂಟದ ಅಧ್ಯಕ್ಷರ ಆಪ್ತ ಸಹಾಯಕರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋಡಿಂಬಾಡಿಯ ಮಠಂತಬೆಟ್ಟು
ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ್ದ ಇವರು ರೈ ಎಸ್ಟೇಟ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ವ್ಯವಸ್ಥಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here