ವಿಟ್ಲ: ಬಂಟ್ವಾಳ ತಾಲೂಕು ಅಳಿಕೆ ನಿವಾಸಿ ಸನಾತನ ವೈ ಎಸ್. ರವರು ಅಸ್ಸಾಂ ರಾಜ್ಯದ ಗುವಾಹಟಿ ಕೋಟನ್ ವಿಶ್ವವಿದ್ಯಾಲಯದಲ್ಲಿ ಪುರಾತತ್ವ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ| ಮಂಜಿಲೆ ಹಜಾರಿಕಾ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ ‘PRAGYOTISHA – KAMARUPA : AN ARCHAEOLOGICAL INVESTIGATION’ ಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ.
ಸನಾತನ ವೈ ಎಸ್.ರವರು ಅಳಿಕೆಯ ಶ್ರೀ ಸತ್ಯಸಾಯಿ ಲೋಕ ಸೇವಾ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ, ಪ್ರೌಡ, ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿದ್ದಾರೆ. ಭಗವಾನ್ ಶ್ರೀ ಸತ್ಯಸಾಯಿಬಾಬರವರ ಸಮ್ಮುಖ ಪುಟವರ್ತಿಯ ಪ್ರಶಾಂತಿ ನಿಲಯದ ಶ್ರೀ ಸತ್ಯಸಾಯಿ ವಿಶ್ವವಿದ್ಯಾನಿಲಯದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾನಿಲಯದಲ್ಲಿ ಪುರಾತತ್ವ ಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ನವದೆಹಲಿಯ ಕೆಂಪು ಕೋಟೆಯಲ್ಲಿ ಪುರಾತತ್ವ ಶಾಸ್ತ್ರದ ಡಿಪ್ಲೋಮ ತರಬೇತಿ ಪೂರೈಸಿದ್ದಾರೆ. ಪ್ರಸ್ತುತ ಹೈದರಾಬಾದಿನ Pleech india ಸಂಸ್ಥೆಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸನಾತನ ವೈ ಎಸ್.ರವರು ಅಳಿಕೆಯ ನಿವೃತ್ತ ಶಿಕ್ಷಕ ದಂಪತಿಗಳಾದ ರಾಜೀವಿ ಮತ್ತು ಯಶೋಧರ ಬಂಗೇರರವರ ಪುತ್ರರಾಗಿದ್ದಾರೆ.