ಪುತ್ತೂರು: ಬಾರ್‌ನಲ್ಲಿ ಊಟ ಮಾಡುತ್ತಿದ್ದ ವೇಳೆ ಸಾಲ ಕೇಳಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಬಿಳಿನೆಲೆ ಗ್ರಾಮದ ವಾಲ್ತಾಜೆ ನಿವಾಸಿ ಪಿ.ವಿ.ವರ್ಗೀಸ್ ಎಂಬವರು ನೀಡಿದ ದೂರಿನಂತೆ ನೆಟ್ಟಣ ನಿವಾಸಿ ಸಿಜಿ ಎಂಬಾತನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರು ಪಿ.ವಿ.ವರ್ಗೀಸ್ ಅವರು ನೀಡಿದ ದೂರಿನಂತೆ ಕೇಸು ದಾಖಲಾಗಿದೆ. ಮಾ.6ರಂದು ಸಂಜೆ 7 ಗಂಟೆಗೆ ನೆಟ್ಟಣ ವಿ.ವಿ.ಎಸ್ ಬಾರ್‌ನಲ್ಲಿ ಊಟ ಮಾಡುತ್ತಿರುವ ಸಮಯ ಅಲ್ಲಿಗೆ ಬಂದ ಬಿಳಿನೆಲೆ ಗ್ರಾಮದ ನೆಟ್ಟಣ ನಿವಾಸಿ ಸಿಜಿ ಎಂಬಾತ ಸ್ವಲ್ಪ ಹಣ ಸಾಲ ನೀಡುವಂತೆ ಕೇಳಿದ್ದು, ನನ್ನಲ್ಲಿ ಹಣವಿಲ್ಲ ಊಟ ಮಾಡಬೇಕಾದರೆ ಮಾಡು ಊಟದ ಹಣ ಕೊಡುತ್ತೇನೆಂದು ಹೇಳಿದ್ದೇನೆ. ಇದರಿಂದ ಕೋಪಗೊಂಡ ಸಿಜಿ ಅವಾಚ್ಯವಾಗಿ ಬೈದು ಟೇಬಲ್ ಮೇಲಿದ್ದ ನೀರಿನ ಸ್ಟೀಲ್ ಜಗ್‌ನಿಂದ ತಲೆಯ ಬಲಬದಿಗೆ ಹೊಡೆದಿರುತ್ತಾನೆ. ಇದರಿಂದ ಗಾಯವಾಗಿರುತ್ತದೆ. ಕೂಡಲೇ ಬಾರ್‌ನ ಮ್ಯಾನೇಜರ್ ಹರ್ಷಿತ್ ಮತ್ತು ಕೆಲಸಗಾರ ರಮೇಶ್ ಆರೈಕೆ ಮಾಡಿದ್ದು ನಂತರ ಹರ್ಷಿತ್‌ರವರು ದೂರವಾಣಿ ಮೂಲಕ ಪತ್ನಿ ರೋಸಮ್ಮರವರಿಗೆ ಘಟನೆಯ ಬಗ್ಗೆ ತಿಳಿಸಿದ್ದು, ಪತ್ನಿ ಬಂದು ಆಟೋ ರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಕಡಬ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.