ಕೊಣಾಲು ಕಡೆಂಬಿಲತ್ತಾಯ ಗುಡ್ಡೆ ದೈವಸ್ಥಾನದ ಮಾಜಿ ಕೋಶಾಧಿಕಾರಿ ಧರ್ಣಪ್ಪ ಗೌಡ ನಿಧನ

0

ನೆಲ್ಯಾಡಿ: ಕೊಣಾಲು ಗ್ರಾಮದ ಕೋಲ್ಪೆ ನಿವಾಸಿ, ಕೊಣಾಲು ಕಡೆಂಬಿಲತ್ತಾಯ ಗುಡ್ಡೆ ಚಕ್ರವರ್ತಿ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ಆಡಳಿತ ಸಮಿತಿ ಮಾಜಿ ಕೋಶಾಧಿಕಾರಿ ಧರ್ಣಪ್ಪ ಗೌಡ (79ವ.)ರವರು ಅನಾರೋಗ್ಯದಿಂದ ಮಾ.9ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.


ಕೃಷಿಕರಾಗಿದ್ದ ಧರ್ಣಪ್ಪ ಗೌಡರವರು ಕಳೆದ ಒಂದೂವರೇ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೊಣಾಲು ಬೊಳ್ಳಿಗುಡ್ಡೆ ದೈವಸ್ಥಾನದ ಆಡಳಿತ ಸಮಿತಿಯ ಕೋಶಾಧಿಕಾರಿಯಾಗಿಯೂ ಇವರು ಸೇವೆ ಸಲ್ಲಿಸಿದ್ದರು. ಊರಗೌಡರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ದಶಮಾನೋತ್ಸವದ ಸಂದರ್ಭ 50ವರ್ಷ ದಾಂಪತ್ಯ ಜೀವನ ನಡೆಸಿದ ಧರ್ಣಪ್ಪ ಗೌಡ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಗಿತ್ತು. ಮೃತರು ಪತ್ನಿ ಪುಷ್ಪಾವತಿ, ಪುತ್ರ ದಿನೇಶ, ಪುತ್ರಿಯರಾದ ಕುಸುಮಾವತಿ, ವಿಮಲ, ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here