ನೆಲ್ಯಾಡಿ: ನೆಲ್ಯಾಡಿ ಪೇಟೆ ಸಮೀಪ ಕೌಕ್ರಾಡಿ ಗ್ರಾಮದ ಹೊಸಮಜಲು ಎಂಬಲ್ಲಿ, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯ ಗುಡ್ಡಕ್ಕೆ ಬೆಂಕಿ ಬಿದ್ದ ಘಟನೆ ಮಾ.10ರಂದು ಮಧ್ಯಾಹ್ನ ನಡೆದಿದೆ.
ಬೆಂಕಿ ಬಿದ್ದ ಪರಿಣಾಮ ಗುಡ್ಡದಲ್ಲಿದ್ದ ಮೂರ್ನಾಲ್ಕು ತೆಂಗಿನಮರಗಳು ಹಾಗೂ ಗಿಡ ಬಳ್ಳಿಗಳು ಸುಟ್ಟುಹೋಗಿವೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದರು. ಬಳಿಕ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿದ್ದಾರೆ.