ನೆಲ್ಯಾಡಿ; ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರು ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಗ್ರಾಮದ ರೈಲ್ವೆ ಬ್ರಿಡ್ಜ್ ಸಮೀಪ ಮಾ.8ರಂದು ಮಧ್ಯಾಹ್ನ ನಡೆದಿದೆ.
ಹಾಸನ ಅರಕಲಗೂಡು ನಿವಾಸಿಗಳಾದ ಮೋಹನ್ ಹಾಗೂ ಪ್ರತೀಪ್ ಬಿ.ಆರ್.ಗಾಯಗೊಂಡವರಾಗಿದ್ದಾರೆ. ಇವರು ಕೆಎ 13 ಇಎಕ್ಸ್ 0751 ನೋಂದಣಿ ನಂಬ್ರದ ಬೈಕ್‌ನಲ್ಲಿ ಮಾ.7ರಂದು ಸಂಜೆ ಧರ್ಮಸ್ಥಳಕ್ಕೆ ಬಂದು ಪೂಜೆ ಮಾಡಿಸಿ ಅಲ್ಲಿಯೇ ಉಳಿದುಕೊಂಡು ಮಾ.8ರಂದು ಮಧ್ಯಾಹ್ನ ಸುಬ್ರಹ್ಮಣ್ಯಕ್ಕೆ ಬೈಕ್‌ನಲ್ಲಿ ಹೊರಟು ಬಂದಿದ್ದರು. ಮೋಹನ್ ಅವರು ಬೈಕ್ ಚಲಾಯಿಸಿಕೊಂಡು ಪ್ರತೀಪ್‌ರವರು ಹಿಂಬದಿ ಸವಾರನಾಗಿ ಬರುತ್ತಿದ್ದು ಮಧ್ಯಾಹ್ನ 3.30ಕ್ಕೆ ಬಿಳಿನೆಲೆ ಗ್ರಾಮದ ರೈಲ್ವೆ ಬ್ರಿಡ್ಜನ ಬಳಿ ತಲುಪುತ್ತಿದ್ದಂತೆ ಸುಬ್ರಹ್ಮಣ್ಯ ಕಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಘಟನೆಯಲ್ಲಿ ಬೈಕ್ ಸವಾರ ಮೋಹನ ಹಾಗೂ ಪ್ರತೀಪ್‌ರವರು ಡಾಮರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸುಬ್ರಹ್ಮಣ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅಲ್ಲಿಂದ ಪುತ್ತೂರು, ಬಳಿಕ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.