ಕೆಯ್ಯೂರು:ಮಾ 21 ರಿಂದ ಮಾ.28ರವರೆಗೆ ನಡೆಯುವ ಕೆಯ್ಯೂರು ಗ್ರಾಮದ ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರ ಕೆಯ್ಯೂರು ಜಾತ್ರೋತ್ಸವದ ಪ್ರಯುಕ್ತ ಮಾ11ರಂದು ಚಪ್ಪರ ಮುಹೂರ್ತದ ಪ್ರಯುಕ್ತ ವಿಶೇಷ ಪೂಜೆಯನ್ನು , ದೇವಾಲಯದ ಪ್ರದಾನ ಆರ್ಚಕ ಶ್ರೀನಿವಾಸ ರಾವ್ ಪೂಜೆ ಸಲ್ಲಿಸಿ ಚಪ್ಪರ ಮುಹೂರ್ತಕ್ಕೆ ಚಾಲನೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ದೇವಾಲಯದ ಮಾಜಿ ಆಡಳಿತ ಮೊಕ್ತೇಸರ ಶಶಿಧರ ರಾವ್ ಬೊಳಿಕಲ, ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು, ಸದಸ್ಯರಾದ ಉಮಾಕಾಂತ್ ಬೈಲಾಡಿ, ಕೆ.ಎಸ್ ಚಂದ್ರಶೇಖರ ಪೂಜಾರಿ ಕಣಿಯಾರು, ಅಶೋಕ ರೈ ದೇರ್ಲ, ಹರಿನಾಥ ಇ, ಕೆಯ್ಯೂರು ಶ್ರೀ ದುರ್ಗಾ ಭಜನಾ ಮಂಡಳಿ ಅಧ್ಯಕ್ಷ ದೇವಣ್ಣ ನಾಯ್ಕ , ಚಪ್ಪರ ಸಮಿತಿ ಸಂಚಾಲಕ ಬೇಬಿ ಪೂಜಾರಿ ದೇರ್ಲ, ದೇವಾಲಯದ ಮಾಜಿ ವ್ಯವಸ್ಥಾಪನ ಸಮಿತಿಯ ಸದಸ್ಯರಾದ , ಪಿ.ಎಸ್ ಪದ್ಮನಾಭ ಪೂಜಾರಿ ಪಲ್ಲತ್ತಡ್ಕ, ಬಾಬು ಪಾಟಳಿ ದೇರ್ಲ, ಕೆಯ್ಯೂರು ಗ್ರಾ.ಪಂ.ಅದ್ಯಕ್ಷ ಶರತ್ ಕುಮಾರ್ ಮಾಡಾವು, ಮಾಜಿ ಚಪ್ಪರ ಸಮಿತಿ ಸಂಚಾಲಕ ಚಂದ್ರಶೇಖರ ರೈ ಇಳಂತಾಜೆ, ವೈದಿಕ ಸಮಿತಿ ಸದಸ್ಯ ಗಣೇಶ್ ಭಟ್ ಕೈತ್ತಡ್ಕ, ಶಿವಶ್ರೀ ರಂಜನ್ ರೈ ದೇರ್ಲ, ಶಶಿ ಪಾಟಾಳಿ ಮೇರ್ಲ, ಉದಯ ಕೆಂಗುಡೇಲು, ವಿನಯ ಕೋಡ್ಲೆ, ಪ್ರಜ್ವಲ್ ಕೊಡ್ಲೆ, ರಘುನಾಥ ಗೌಡ ಕೆಯ್ಯೂರು, ಕೃಷ್ಣಸಾಮಾನಿ ಕೆಯ್ಯೂರು, ಕೊರಗಪ್ಪ ರೈ ಸಣಂಗಳ, ಸತೀಶ್ ರೈ ದೇರ್ಲ, ಯಶೋಧ ರೈ ನೆಟ್ಟಾಳ, ದಿವಾಕರ್ ರೈ ನೆಟ್ಟಾಳ, ಗಣೇಶ್ ಕೆಯ್ಯೂರು ದೇವಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.