ಪುತ್ತೂರು: ಸ್ವಚ್ಛ ಸಂಸ್ಕೃತಿ ನಮ್ಮ ಸಂಸ್ಕೃತಿ ಎಂಬ ಧ್ಯೇಯದೊಂದಿಗೆ ತಾ.ಪಂ. ಕಾರ್ಯನಿರ್ವಾಕ ಅಧಿಕಾರಿ ನವೀನ್ ಭಂಡಾರಿಯವರು ಆರಂಭಿಸಿದ ಸ್ವಚ್ಚತಾ ಶ್ರಮದಾನ ಅಭಿಯಾನವನ್ನು ನನಸು ಮಾಡುವ ನಿಟ್ಟಿನಲ್ಲಿ ಕೆಯ್ಯೂರು ಗ್ರಾಮ ಪಂಚಾಯತ್‌ನಿಂದ ಪ್ರತಿ ತಿಂಗಳ ಎರಡನೇ ಆದಿತ್ಯವಾರ ಎಲ್ಲಾ ಸಂಘ ಸಂಸ್ಥೆ ಗಳ ಸಹಕಾರದಲ್ಲಿ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ.
ಮಾರ್ಚ್ ತಿಂಗಳ ಎರಡನೇ ಆದಿತ್ಯವಾರ ನಡೆದ ಸ್ವಚ್ಚತಾ ಶ್ರಮದಾನ ಅಭಿಯಾನದಲ್ಲಿ ಪಂಚಾಯತ್ ಅಧ್ಯಕ್ಷರಾದ ಶರತ್ ಕುಮಾರ್ ಮಾಡಾವು, ಸದಸ್ಯರಾದ ಜಯಂತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟ ದ ಪದಾಧಿಕಾರಿಗಳು, ಪೊರ್ಲುದ ಕೆಯ್ಯೂರು ಘಟಕ, ವರ್ತಕರ ಸಂಘ, ಅಭಿನವ ಕೇಸರಿ ಮಾಡಾವು, ಮಾಜಿ ಪಂಚಾಯತ್ ಅಧ್ಯಕ್ಷರಾ ಬಾಬು ಬೊಮ್ಮನಗುಂಡಿ ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.