ಪುತ್ತೂರು: ಬೊಳುವಾರು ಮುಖ್ಯ ರಸ್ತೆಯಿಂದ ವಿಶ್ವಕರ್ಮ ಸಭಾಭವನ ಸಂಪರ್ಕ ರಸ್ತೆಯ ಡಾಮರೀಕರಣಕ್ಕೆ ನಗರಸಭೆಯಿಂದ ಅನುದಾನ ಬಿಡುಗಡೆಗೊಂಡಿದ್ದು, ಗುದ್ದಲಿ ಪೂಜೆ ಮೂಲಕ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಇತ್ತೀಚೆಗೆ ಚಾಲನೆ ನೀಡಲಾಗಿದ್ದು, ಡಾಮರೀಕರಣ ಕಾಮಗಾರಿ ಪ್ರಾರಂಭಗೊಂಡಿತು. ನಗರಸಭಾಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಕಾಮಗಾರಿಗೆ ಚಾಲನೆ ನೀಡಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭಾ ಮಾಜಿ ಅಧ್ಯಕ್ಷ ಜೀವಂಧರ್ ಜೈನ್ , ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು , ನಗರಸಭಾ ಉಪಾಧ್ಯಕ್ಷ ಬಾಲಚಂದ್ರ ಸೊರಕೆ, ನಗರಸಭಾ ಸದಸ್ಯೆ ಗೌರಿ ಬನ್ನೂರು ಹಾಗೂ ಪ್ರೇಮಲತಾ ನಂದಿಲ ,ಮಾಜಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ಬಿಜೆಪಿ ಬೂತ್ ಅಧ್ಯಕ್ಷ ರಾದ ದಯಾಕರ್ , ದಯಾನಂದ್ ಹಾಗೂ ಗಿರೀಶ್ ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್ , ಅನಿಲ್ ಮತ್ತು ಉಪಾಧ್ಯಕ್ಷ ಯುವರಾಜ್ ವಿಶ್ವಕರ್ಮ ಸಭಾಭವನದ ಅಧ್ಯಕ್ಷ ಶ್ರೀಧರ್ ಆಚಾರ್ಯ , ನ್ಯಾಯವಾದಿ ಸುರೇಶ್ ಪಡ್ಡಂಬೈಲು, ದಿನೇಶ್ ಕರ್ಮಲ ಮತ್ತು ರವಿ ಆಚಾರ್ಯ ಕೆಮ್ಮಾಯಿ ಸಹಿತ ಹಲವರು ಹಾಜರಿದ್ದರು.
ನಗರಸಭಾ ಸದಸ್ಯ ಸಂತೋಷ್ ಬೊಳ್ವಾರು ಸಹಕರಿಸಿದರು.