- ವಿವಿಧ ಕ್ಷೇತ್ರದಲ್ಲಿ ಸಾಧನೆ- ಮಣಿ ಯಂ.ರೈ
- ಮತ್ತಷ್ಟು ಸಮಾಜಮುಖಿ ಕಾರ್‍ಯಕ್ರಮ- ಗೀತಾ ಮೋಹನ್ ರೈ
- ಸಾಧಿಸುವ ಛಲ ಮುಖ್ಯ- ಮಮತಾ ಪಿ.ಶೆಟ್ಟಿ
- ಬಂಟ ಮಹಿಳೆಯರಲ್ಲಿ ವಿಶೇಷವಾದ ಪ್ರತಿಭೆ ಇದೆ- ಹೇಮನಾಥ ಶೆಟ್ಟಿ
- ಸಮಾಜಕ್ಕೆ ಮಾದರಿಯಾಗುವ ಕಾರ್‍ಯಕ್ರಮ – ಸೀತಾರಾಮ ರೈ
- ಉನ್ನತವಾದ ಶಿಕ್ಷಣವನ್ನು ಪಡೆಯಬೇಕು- ಮಲ್ಲಿಕಾ ಪ್ರಸಾದ್
ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ, ಬಂಟರ ಸಂಘ ಪುತ್ತೂರು ತಾಲೂಕು ಇದರ ಮಾರ್ಗದರ್ಶನದೊಂದಿಗೆ ಮಹಿಳಾ ಬಂಟರ ವಿಭಾಗದ ಸಾರಥ್ಯದಲ್ಲಿ ಯುವ ಬಂಟರ ವಿಭಾಗ, ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದೊಂದಿಗೆ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮಾ.11ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು.

ವಿವಿಧ ಕ್ಷೇತ್ರದಲ್ಲಿ ಸಾಧನೆ- ಮಣಿ ಯಂ.ರೈ
ಮಂಗಳೂರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ತುಳು ಉಪನ್ಯಾಸಕಿ ಮಣಿ ಯಂ.ರೈರವರು ಸಭಾ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿ ತುಳುನಾಡಿನ ಬಂಟ ಮಹಿಳೆಯವರು ಸ್ವಾತ್ರಂತ್ರ ಹೋರಾಟದಲ್ಲಿ ಭಾಗಿಗಳಾದ ಅನೇಕ ಉದಾಹರಣೆಗಳು ಇದೆ, ಬಂಟ ಮಹಿಳೆಯವರು ಕೃಷಿ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ, ಬಂಟ ಸಮಾಜಕ್ಕೆ ಗೌರವವನ್ನು ತಂದಿದ್ದಾರೆ ಎಂದು ಹೇಳಿದ ಅವರು ಪುತ್ತೂರು ಬಂಟ ಸಮಾಜಕ್ಕೆ ಬಹುದೊಡ್ಡ ಹೆಸರನ್ನು ತಂದಿತ್ತ ಊರಾಗಿದೆ ಎಂದು ಸಂತಸವ್ಯಕ್ತಪಡಿಸಿದರು.

ಮತ್ತಷ್ಟು ಸಮಾಜಮುಖಿ ಕಾರ್‍ಯಕ್ರಮ- ಗೀತಾ ಮೋಹನ್ ರೈ
ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ಅಧ್ಯಕ್ಷತೆ ವಹಿಸಿ, ಮಾತನಾಡಿ ಎಲ್ಲರ ಸಹಕಾರ ಮತ್ತು ಪ್ರೋತ್ಸಾಹದಿಂದ ಮಹಿಳಾ ಬಂಟರ ನೇತ್ರತ್ವದ ಮಹಿಳಾ ದಿನಾಚರಣೆ ಯಶಸ್ಸಿಯಾಗಿ ನಡೆದಿದೆ, ಐಸಿರಿ ಯೋಜನೆಯಡಿ ಮಹಿಳಾ ಬಂಟರ ವಿಭಾಗದಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್‍ಯಕ್ರಮ ನಡೆಯಲಿದ್ದು, ಎಲ್ಲರೂ ಸಹಕಾರವನ್ನು ನೀಡುವಂತೆ ವಿನಂತಿಸಿದರು.

ಸಾಧಿಸುವ ಛಲ ಮುಖ್ಯ- ಮಮತಾ ಪಿ.ಶೆಟ್ಟಿ
ಅಭಿಮತ ಟಿ.ವಿ. ಆಡಳಿತ ಪಾಲುದಾರರಾದ ಡಾ. ಮಮತಾ ಪಿ. ಶೆಟ್ಟಿರವರು ತಮ್ಮ ಆಶಯ ಭಾಷಣದಲ್ಲಿ ಭಾರತದೇಶದಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನವಿದ್ದು, ಸಮಾಜದಲ್ಲಿ ಹೆಣ್ಣು ಅಬಲೆಯಲ್ಲ, ಸಾಧಿಸುವ ಛಲ ಮುಖ್ಯವಾಗಿದ್ದು, ಯಾವುದೇ ಕೊಂಕು ನುಡಿಗಳು ಬಂದರೂ, ಎದೆಗುಂದದೆ ಸಮಾಜದಲ್ಲಿ ಸಾಧಿಸುವ ಛಲವನ್ನು ಮಹಿಳೆಯರು ಹೊಂದಬೇಕು ಎಂದು ಹೇಳಿದರು.

ಬಂಟ ಮಹಿಳೆಯರಲ್ಲಿ ವಿಶೇಷವಾದ ಪ್ರತಿಭೆ ಇದೆ- ಹೇಮನಾಥ ಶೆಟ್ಟಿ
ಬಂಟರ ಸಂಘ ಪುತ್ತೂರು ತಾಲೂಕು ಅಧ್ಯಕ್ಷ ಹೇಮನಾಥ ಶೆಟ್ಟಿರವರು ಮಾತನಾಡಿ ಬಂಟ ಸಮಾಜದಲ್ಲಿ ಮಹಿಳೆಯರಿಗೆ ವಿಶೇಷವಾದ ಪ್ರಾತಿನಿಧ್ಯವಿದ್ದು, ಬಂಟ ಮಹಿಳೆಯರಲ್ಲಿ ವಿಶೇಷವಾದ ಪ್ರತಿಭೆ ಇದೆ, ಬಂಟ ಸಮಾಜದ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ, ಆಮೂಲಕ ಬಂಟ ಸಮಾಜಕ್ಕೆ ವಿಶೇಷ ಶಕ್ತಿಯನ್ನು ಮಹಿಳೆಯರು ತುಂಬಿದ್ದಾರೆ. ಸಂಘಟನೆಯ ಮೂಲಕ ತಾಲೂಕು ಮಹಿಳಾ ಬಂಟರ ವಿಭಾಗದಲ್ಲಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌ರವರು ಸ್ಥಾಪಕಾಧ್ಯಕ್ಷರಾಗಿದ್ದರು, ಅ ಬಳಿಕ ಎಲ್ಲಾ ಅಧ್ಯಕ್ಷರು ಮತ್ತು ತಂಡ ಉತ್ತಮ ಕೆಲಸವನ್ನು ಮಾಡಿದೆ, ಪ್ರಸ್ತುತ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ಪ್ರಧಾನ ಕಾರ್ಯದರ್ಶಿ ಕುಸುಮಾ ಶೆಟ್ಟಿ ಹಾಗೂ ಕೋಶಾಧಿಕಾರಿ ಅರುಣಾ ಡಿ.ರೈಯವರ ನೇತೃತ್ವದ ತಂಡ ಉತ್ತಮವಾದ ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಸಮಾಜಕ್ಕೆ ಮಾದರಿಯಾಗುವ ಕಾರ್‍ಯಕ್ರಮ – ಸೀತಾರಾಮ ರೈ
ಮಾಜಿ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ರವರು ಮಾತನಾಡಿ . ಕಳೆದ ೨೪ ವರ್ಷಗಳ ಹಿಂದೆ ಮಲ್ಲಿಕಾ ಪ್ರಸಾದ್ ರವರ ನೇತ್ರತ್ವದಲ್ಲಿ ಸ್ಥಾಪನೆಯಾದ ಮಹಿಳಾ ಬಂಟರ ವಿಭಾಗದವರು ಈ ಸಾಲಿನ ಅಧ್ಯಕ್ಷೆ ಗೀತಾ ಮೋಹನ್ ರೈ ನೇತ್ರತ್ವದಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು, ಸಮಾಜಕ್ಕೆ ಮಾದರಿಯಾಗುವ ಕಾರ್‍ಯಕ್ರಮವನ್ನು ನಡೆಸುತ್ತಿದ್ದಾರೆ ಎಂದು ಹೇಳಿ, ಶುಭಕೋರಿದರು

ಉನ್ನತವಾದ ಶಿಕ್ಷಣವನ್ನು ಪಡೆಯಬೇಕು- ಮಲ್ಲಿಕಾ ಪ್ರಸಾದ್
ಮಹಿಳಾ ಬಂಟರ ವಿಭಾಗದ ಗೌರವಾಧ್ಯಕ್ಷೆ ಮಲ್ಲಿಕಾ ಪ್ರಸಾದ್‌ರವರು ಮಾತನಾಡಿ ಬಂಟ ಮಹಿಳೆಯರು ಧೈರ್ಯದಿಂದ ಮುಂದೆ ಬಂದು ಉನ್ನತವಾದ ಶಿಕ್ಷಣವನ್ನು ಪಡೆಯಬೇಕು ಎಂದು ಹೇಳಿದರು
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಪುತ್ತೂರು ತಾಲೂಕು ಸಂಚಾಲಕ ದುರ್ಗಾಪ್ರಸಾದ್ ರೈ ಕುಂಬ್ರ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹಾಗೂ ಗೌರವ ಉಪಸ್ಥಿತರಾದ ಮಹಿಳಾ ಬಂಟರ ವಿಭಾಗದ ವಿಶೇಷ ಆಹ್ವಾನಿತರಾದ ಸುಮಾ ಅಶೋಕ್ ಕುಮಾರ್ ರೈ ,ಮಹಿಳಾ ಬಂಟರ ವಿಭಾಗದ ಮಾಜಿ ಅಧ್ಯಕ್ಷರುಗಳಾದ ಕುಮುದಾ ಎಲ್.ಎನ್. ಶೆಟ್ಟಿ, ಮೀರಾ ಭಾಸ್ಕರ ರೈ, ಸಬಿತಾ ಭಂಡಾರಿ,ವಿಶೇಷ ಆಹ್ವಾನಿತರಾದ ಮಾಲಿನಿ ಮುತ್ತು ಶೆಟ್ಟಿ, ಯುವ ಬಂಟರ ವಿಭಾಗದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು, ವಿದ್ಯಾರ್ಥಿ ಬಂಟರ ವಿಭಾಗದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳದಡ್ಡರವರುಗಳು ಉಪಸ್ಥಿತರಿದ್ದರು.
ಸನ್ಮಾನಿತರು:
ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಉಪನ್ಯಾಸಕಿ ಮತ್ತು ಪೆಥಲಜಿ ವಿಭಾಗದದ ಎಚ್‌ಓಡಿ ಡಾ. ಸತ್ಯವತಿ ಆಳ್ವ, ನಿವೃತ್ತ ಮುಖ್ಯ ಶಿಕ್ಷಕಿ ವಾರಿಜಾ ರಘುನಾಥ ರೈ ನುಳಿಯಾಲು, ನಾಟಿವೈದ್ಯೆ ವಾರಿಜ ಯಂ. ಶೆಟ್ಟಿ ಬರೆಮೇಲು ಕೋಡಿಂಬಾಡಿ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯೆ ಡಾ. ರಶ್ಮಾ ಎಂ. ಶೆಟ್ಟಿ, ಬಹುಮುಖ ಪ್ರತಿಭೆ ಕ್ರೀಡಾಪಟು ದೀಕ್ಷಾ ರೈ ಪಟ್ಟೆರವರಿಗೆ ಸನ್ಮಾನ ಹಾಗೂ ಬಾಲ ಪ್ರತಿಭೆ ಬೇಬಿ ಶಾನ್ವಿ ವಿ. ಶೆಟ್ಟಿ ಕೈಕಾರ ರವರಿಗೆ ಗೌರವಾರ್ಪಣೆ ನಡೆಯಿತು. ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೊಶಾಧಿಕಾರಿ ಅರುಣಾ ಡಿ. ರೈ ವಂದಿಸಿದರು. ಸಾಂಸ್ಕೃತಿಕ ವಿಭಾಗದ ಹರಿಣಾಕ್ಷಿ ಜೆ.ಶೆಟ್ಟಿ ಮತ್ತು ಮಾಧವಿ ಮನೋಹರ್ ರೈ ಕಾರ್‍ಯಕ್ರಮ ನಿರೂಪಿಸಿದರು. ಅನಿತಾ ಹೇಮನಾಥ ಶೆಟ್ಟಿ, ಸ್ವರ್ಣಲತಾ ಜೆ.ರೈ, ನಳಿನಿ ರೈ ಕುತ್ಯಾಡಿ, ಶ್ಯಾಮಲ ಪಿ.ಶೆಟ್ಟಿ, ಕೃಷ್ಣವೇಣಿ ರೈ ಹಾಗೂ ವಾಣಿ ಶೆಟ್ಟಿರವರುಗಳು ಸನ್ಮಾನ ಪತ್ರ ವಾಚಿಸಿದರು. ಭವ್ಯ ರೈ, ಶಕುಂತಳಾ ಶೆಟ್ಟಿ ಹಾಗೂ ಮೈತ್ರಿ ರೈ ಪ್ರಾರ್ಥನೆಗೈದರು. ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಸಹಭೋಜನ ನಡೆಯಿತು.
ಕಾರ್‍ಯಕ್ರಮ ಸಂಪೂರ್ಣ ಯಶಸ್ಸು
ಮಾ. ೧೧ ರಂದು ಮಹಿಳಾ ಬಂಟರ ವಿಭಾಗದ ಮಹಿಳಾ ದಿನಾಚರಣೆ ಅದ್ದೂರಿಯಾಗಿ ನಡೆಯಿತು. ಕಾರ್‍ಯಕ್ರಮದ ಯಶಸ್ವಿಗೆ ಮಹಿಳಾ ಬಂಟರ ವಿಭಾಗದವರು ಪೂರ್ಣ ರೀತಿಯ ಸಹಕಾರವನ್ನು ನೀಡಿದ್ದಾರೆ.ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ಮಾರ್ಗದರ್ಶನ, ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿ, ಯುವ ಹಾಗೂ ವಿದ್ಯಾರ್ಥಿ ಬಂಟ ವಿಭಾಗದವರು ಪ್ರೋತ್ಸಾಹವನ್ನು ನೀಡಿದ್ದಾರೆ. ಕಾರ್‍ಯಕ್ರಮದಲ್ಲಿ ಬಂಟ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ, ಮುಂದೆಯೂ ತಮ್ಮ ಸಹಕಾರ ಅಗತ್ಯ
ಗೀತಾ ಮೋಹನ್ ರೈ , ಅಧ್ಯಕ್ಷರು ಮಹಿಳಾ ಬಂಟರ ವಿಭಾಗ
ಮನರಂಜಿಸಿದ ಮಹಿಷಮರ್ದಿನಿ ಯಕ್ಷಗಾನ ಪೂರ್ವಾಹ್ನ ಪುತ್ತೂರು ಮಹಿಳಾ ಬಂಟರ ವಿಭಾಗದ ಭಜನಾ ತಂಡದ ಉದ್ಘಾಟನೆ ಮತ್ತು ಭಜನಾ ಕಾರ್ಯಕ್ರಮ ಸೌಪರ್ಣಿಕಾ ಗುರುರಾಜ್ ರೈ ಈಶ್ವರಮಂಗಲ ಇವರಿಂದ
ಗಣಪತಿ ತಾಳಂ ಜಾನಪದ ನೃತ್ಯ ನಡೆಯಿತು. ಮಹಿಳಾ ಬಂಟರ ಸಂಘದ ಸದಸ್ಯರಿಂದ ನೃತ್ಯ ವೈಭವ ಜರಗಿತು. ಅಪರಾಹ್ನ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಪೂರ್ಣಿಮಾ ಯತೀಶ್ ರೈ ಚೆಲ್ಯಡ್ಕ, ನುಳಿಯಾಲು ಇವರ ನಿರ್ದೇಶನದಲ್ಲಿ ಮಹಿಳಾ ಬಂಟರ ವಿಭಾಗ ಪುತ್ತೂರು ಹಾಗೂ ಅತಿಥಿ ಕಲಾವಿದೆಯರ ಕೂಡುವಿಕೆಯಲ್ಲಿ ಜರಗಿದ ‘ಮಹಿಷಮರ್ದಿನಿ’ ಯಕ್ಷಗಾನ ಮನರಂಜಿಸಿತು.