ಈ ಮೇಲಿನ ವಾಕ್ಯವನ್ನು ನೀವು ಒಪ್ಪುತ್ತೀರಿ ಎಂದು ನಾವು ನಂಬಿದ್ದೇವೆ. ನಾವು ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಕಳೆದ ನಲ್ವತ್ತು ವರ್ಷಗಳಿಂದ ನಂ.1 ಪತ್ರಿಕೆ ನಡೆಸಿಕೊಂಡು ಬರುತ್ತಿದ್ದೇವೆ. ನಾವು ತಪ್ಪು ಮಾಡಿಲ್ಲ ಎಂದಲ್ಲ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದೇವೆ ತಿದ್ದಿಕೊಂಡಿದ್ದೇವೆ. ಎಂದೂ ದುರುದ್ದೇಶದಿಂದ ಕೆಲಸ ಮಾಡಿಲ್ಲ. ಯಾರ ಪರವೂ ವಿರೋಧವೂ ನಿಲ್ಲದೆ ಜನಪರವಾಗಿ ಪತ್ರಿಕೆ, ಚಾನೆಲ್ ಮಾಡಿದ್ದೇವೆ. ರಾಜಕೀಯದ ಉದ್ದೇಶ ನಮಗಿಲ್ಲ. ಆದರೆ ರಾಜಕೀಯದವರು ನಮ್ಮನ್ನು ದುರುಪಯೋಗ ಪಡಿಸದಂತೆ ಜಾಗ್ರತೆ ವಹಿಸಿ ಕೆಲಸ ಮಾಡಬೇಕಾಗುತ್ತದೆ. ಅವರ ಮಾತನ್ನು ಕೇಳದಿರುವುದೇ ನಮ್ಮ ಎಷ್ಟೋ ಸಮಸ್ಯೆಗಳಿಗೆ ಕಾರಣ ಎಂದು ತಮಗೆ ಗೊತ್ತಿದೆ. ಅದೇನೇ ಇದ್ದರೂ ನಮಗೆ ಜನತೆಯ ಬೆಂಬಲವಿದೆ. ಆದುದರಿಂದ ನಾವು ವಿರೋಧದ ನಡುವೆಯೂ ಸುಳ್ಯ- ಪುತ್ತೂರು- ಬೆಳ್ತಂಗಡಿಗಳಲ್ಲಿ ನಂ.1 ಪತ್ರಿಕೆಯಾಗಿ ಮುಂದುವರಿದಿದ್ದೇವೆ.
ಬೆಳ್ತಂಗಡಿಯಲ್ಲಿ 37 ವರ್ಷದ ಮೇಲೆ ಅಂದರೆ 2 ವರ್ಷಗಳ ಹಿಂದೆ ನಮ್ಮ ಸಿಬ್ಬಂದಿಗಳಲ್ಲಿ 11 ಜನ ಪ್ರಮುಖರು ಏಕಾಏಕಿ ನಮ್ಮನ್ನು ಬಿಟ್ಟು ಸುದ್ದಿ ಉದಯ ಪತ್ರಿಕೆ ಮಾಡಿರುವುದು ನಿಮಗೆ ಗೊತ್ತಿದೆ. ಅದರ ಹಿಂದಿರುವ ಕಾರಣವೂ ತಿಳಿದಿದೆ. ಆ ಆಘಾತದ ನಂತರವೂ ನಾವು ಹೊಸ ತಂಡ ಕಟ್ಟಿಕೊಂಡು ಬೆಳ್ತಂಗಡಿಯ ನಂ.1 ಪತ್ರಿಕೆಯಾಗಿ ಇತರ ಪತ್ರಿಕೆಗಳಿಗಿಂತ 10 ಪಟ್ಟು ಹೆಚ್ಚು ಪ್ರಸಾರ ಹೊಂದಿದ್ದೇವೆ. ಈಗ ಸುದ್ದಿ ಉದಯದಲ್ಲಿ ನಮ್ಮ ಮೇಲೆ ಗಂಭೀರ ಆಪಾದನೆ ಮಾಡಿದ್ದಾರೆ. ಅದನ್ನು ತಾವು ಓದಿರಬಹುದು. ಅದನ್ನು ನಾವು ಸುಳ್ಳುಗಳ ಮತ್ತು ಅಪಪ್ರಚಾರಗಳ ಕಂತೆ ಎಂದು ಹೇಳಿದ್ದೇವೆ. ಅದು ಹೌದಾಗಿದ್ದರೆ ಸುದ್ದಿ ಉದಯದವರೊಡನೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇವೆ ಎಂದು ಹೇಳಿ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದೇವೆ.
ಅವರು ಚರ್ಚೆಗೆ ಬಾರದೇ ಇದ್ದರೆ ಸುಳ್ಳು ಅಪವಾದ ಹೊರಿಸಿರುವ ಬಗ್ಗೆ ಅವರ ಮೇಲೆ ಕೇಸು ಮಾಡುವುದಲ್ಲದೆ ಅವರ ಸುಳ್ಳು ಆರೋಪಗಳ ವಿರುದ್ದ ಪ್ರತಿಭಟನೆ ಮಾಡುವುದೆಂದು ನಿರ್ಧರಿಸಿದ್ದೇವೆ. ನಾವು ಹೇಳಿದ ಮಾತುಗಳನ್ನು ನೀವು ನಂಬಬೇಕಾಗಿಲ್ಲ. ಅವರು ಹೇಳಿದ್ದು ನಿಮಗೆ ಸರಿಯಾಗಿರಬಹುದು. ಅದಕ್ಕೆ ಪರಿಹಾರವೆಂದರೆ ಸಾರ್ವಜನಿಕವಾಗಿ ಆ ವಿಷಯದಲ್ಲಿ ಚರ್ಚೆಯನ್ನು ನಡೆಸುವುದೇ ಆಗಿರುತ್ತದೆ. ಸುಳ್ಳು ಆಪಾದನೆಗಳು ವಿಜ್ರಂಭಿಸಿ ಯಾರಿಗೂ ಅನ್ಯಾಯವಾಗಬಾರದು ಎಂದು ನಾವು ಪತ್ರಿಕೆಯಲ್ಲಿ ಹೇಳಿದ್ದೇವೆ. ಇತರರಿಗಾಗಿ ಆ ಕೆಲಸ ಮಾಡಿದ್ದೇವೆ. ಇಂದು ನಮಗೆ ಅಂತಹುದೇ ಪರಿಸ್ಥಿತಿ ಬಂದಿದೆ. ಅದನ್ನು ಎದುರಿಸಲು ನ್ಯಾಯಕ್ಕಾಗಿ ನಿಮ್ಮ ಮುಂದೆ ಬಂದಿದ್ದೇವೆ. ಸುಳ್ಳಿಗೆ ಗೆಲುವಾಗದೆ ಸತ್ಯ ಮೇವ ಜಯತೇ ಎಂದಾಗಲು ತಾವುಗಳು ಸುದ್ದಿ ಉದಯ ಮತ್ತು ಸುದ್ದಿ ಬಿಡುಗಡೆ ನಡುವೆ ಸಾರ್ವಜನಿಕ ಚರ್ಚಾಗೋಷ್ಠಿ ಏರ್ಪಡಿಸಲು ಸಹಕಾರ ನೀಡಬೇಕಾಗಿ ಬಯಸುತ್ತೇವೆ. ಜನತೆ ನಿರ್ಧರಿಸುವ ಸಮಯ ಮತ್ತು ದಿನಾಂಕದಲ್ಲಿ ಚರ್ಚೆಯಲ್ಲಿ ಭಾಗವಹಿಸಲಿದ್ದೇವೆ. ತಾವು ಸಹಕರಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.
| ಡಾ. ಯು.ಪಿ. ಶಿವಾನಂದ , ಅದ್ಯಕ್ಷರು, ಸುದ್ದಿ ಸಮೂಹ ಸಂಸ್ಥೆಗಳು
________________________________________________________________________________________________
23-03-2023ರ ಸುದ್ದಿಬಿಡುಗಡೆಯಲ್ಲಿ ಬಂದ ವರದಿ
ಸುದ್ದಿ ಬಿಡುಗಡೆ ಬಗ್ಗೆ ಸುದ್ದಿ ಉದಯದ ಅಪಪ್ರಚಾರವನ್ನು ನಂಬುವವರು ಗಮನಿಸಿ
ಸುದ್ದಿಗೆ ಸೇರುವಾಗ ಮತ್ತು ಸುದ್ದಿಬಿಡುಗಡೆ ಬಿಡುವಾಗ ದೊರಕುತ್ತಿದ್ದ ಸಂಭಾವನೆ…
ಅದು ಕಡಿಮೆ ಎಂದು ಹೇಳಿ ಹೋಗಬೇಕಾದರೆ ಪೂಂಜರು ಎಷ್ಟು ಕೊಟ್ಟಿರಬೇಕು?…
ಸಂತೋಷ್ ಕೋಟ್ಯಾನ್ 2009ರಲ್ಲಿ ಕೆಲಸಕ್ಕೆ ಸೇರುವಾಗ 3ರಿಂದ 4 ಸಾವಿರ ಸಂಬಳ ಇದ್ದಿರಬಹುದು. ಬಿಡುವಾಗ ತಿಂಗಳಿಗೆ ಹೆಚ್ಚು ಕಡಿಮೆ 70 ಸಾವಿರದಿಂದ 1 ಲಕ್ಷದವರೆಗೂ ಸಂಪಾದನೆ ಮಾಡುತ್ತಿದ್ದರು. 2000 ಇಸವಿಯಲ್ಲಿ ಸೇರಿದ ತುಕಾರಾಮ್ಗೆ ಆಗ 1ರಿಂದ 2 ಸಾವಿರ ಸಂಬಳವಿತ್ತು. ಬಿಡುವಾಗ ತಿಂಗಳಿಗೆ 50ರಿಂದ 60 ಸಾವಿರ ಸಂಪಾದನೆ ಮಾಡಿದ್ದರು. 1997ರಲ್ಲಿ ರೂ. 500 ಸಂಬಳಕ್ಕೆ ಸೇರಿದ ತಿಮ್ಮಪ್ಪರಿಗೆ ಬಿಡುವಾಗ 40ರಿಂದ 50 ಸಾವಿರ ಸಂಪಾದನೆ ಇತ್ತು. ಸೇರುವಾಗ 2ರಿಂದ 3 ಸಾವಿರ ಸಂಬಳವಿದ್ದಿರಬಹುದಾದ ಕುಲಾಲ್ರಿಗೆ 40ರಿಂದ 50 ಸಾವಿರದವರೆಗೆ ಸಂಪಾದನೆ ಇತ್ತು.

ಹೀಗಿದ್ದರೂ ಸಂಪಾದನೆ ಸಾಕಾಗಲಿಲ್ಲವೆಂಬ ಕಾರಣಕ್ಕೆ ಅಥವಾ ಕಚೇರಿಯಲ್ಲಿ ಗೌರವವಿಲ್ಲ ಎಂಬ ಕಾರಣಕ್ಕೆ ಅವರು ಹೋದದ್ದಲ್ಲ ಎಂಬುವುದು ನಮಗೆ ಸ್ಪಷ್ಟವಾಗಿದೆ. ಹಾಗಿದ್ದರೆ ಅವರುಗಳು ಈ ವಯಸ್ಸಿನಲ್ಲಿ ಸ್ವಂತ ಪತ್ರಿಕೆ ಮಾಡಿ ಸಂಪಾದನೆ ಮಾಡುತ್ತೇವೆಂಬ ಕಾರಣ ನೀಡಿ ಹೊರಗೆ ಹೋಗಿರುವುದು ಒತ್ತಡಕ್ಕೆ ಮತ್ತು ಆಮಿಷಕ್ಕೆ ಒಳಗಾಗಿ ಆಗಿದೆ. ಸುದ್ದಿ ಪತ್ರಿಕೆ ನಿಯಂತ್ರಿಸಲಿಕ್ಕಾಗಿ ಸುದ್ದಿ ಆಪರೇಷನ್ ಪ್ರಯತ್ನ ನಡೆದಿದೆ ಎಂದು ನಾನು ನಂಬಿದ್ದೇನೆ.