ಮಾ.14:ಮೊಟ್ಟೆತ್ತಡ್ಕ-ಮಣ್ಣಾಪು ಕೊರಗಜ್ಜ, ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದ ಸಂಕ್ರಮಣ ಸೇವೆ

0

ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ-ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಮಾ.14 ರಂದು ಸಂಕ್ರಮಣದ ಪ್ರಯುಕ್ತ ಅಗೇಲು ಸೇವೆ ಜರಗಲಿದೆ.


ಪ್ರತೀ ಸಂಕ್ರಮಣದಂದು ಶ್ರೀ ಕ್ಷೇತ್ರದಲ್ಲಿ ಅಗೇಲು ಸೇವೆ(ಅಗೇಲು ಬಾಬ್ತು ರೂ.1200) ನಡೆಯಲಿದ್ದು, ಅಗೇಲು ಸೇವೆ ರಾತ್ರಿ ಗಂಟೆ 8ರ ನಂತರ ನಡೆಯಲಿದೆ. ಆದಿತ್ಯವಾರ, ಮಂಗಳವಾರ, ಶುಕ್ರವಾರ ಭಕ್ತಾಧಿಗಳಿಗೆ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1ರ ವರೆಗೆ ಸಂಜೆ 4 ರಿಂದ 8.30ರ ತನಕ ಪ್ರಾರ್ಥನೆ ಸಲ್ಲಿಸಲು ಶ್ರೀ ಕ್ಷೇತ್ರದಲ್ಲಿ ಅವಕಾಶವಿದೆ. ಅಗೇಲು ಸೇವೆ ನೀಡುವ ಭಕ್ತಾಧಿಗಳು ಎರಡು ದಿನ ಮುಂಚಿತವಾಗಿ ತಿಳಿಸತಕ್ಕದ್ದು. ಹೆಚ್ಚಿನ ವಿವರಗಳಿಗೆ ಶ್ರೀ ಕ್ಷೇತ್ರ ಮಣ್ಣಾಪು ಆಡಳಿತ ಸಮಿತಿ(ಮೊ:9591546107, 7349237945, 7760580714)ಯನ್ನು ಸಂಪರ್ಕಿಸಬಹುದು ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here