ಪುತ್ತೂರು:ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮಾ.14 ರಂದು ಸಂಕ್ರಮಣ ತಂಬಿಲ ಸೇವೆ ನಡೆಯಲಿದೆ.
ಸಂಕ್ರಮಣ ತಂಬಿಲ ಸೇವೆಯ ಪ್ರಯುಕ್ತ ಬೆಳಿಗ್ಗೆ ದೇವರ ಪೂಜೆಯ ಬಳಿಕ ದೇವಸ್ಥಾನದ ರಕ್ತೇಶ್ವರಿ ಧೂಮಾವತಿ ದೈವಗಳಿಗೆ ಹಾಗೂ ಮಾಡಂತಾರು ಮೈಲ್(ಗೋಲೆಕ್ಸ್ ಫ್ಯಾಕ್ಟರಿ ಬಳಿ) ನಲ್ಲಿನ ಕಲ್ಕುಡ ಕಲ್ಲುರ್ಟಿ ಗುಳಿಗ ದೈವಗಳಿಗೆ ತಂಬಿಲ ಸೇವೆ ನಡೆಯಲಿರುವುದು. ಪ್ರತಿ ತಿಂಗಳ ಸಂಕ್ರಮಣದಂದು ದೈವಗಳಿಗೆ ತಂಬಿಲ ಸೇವೆ ನಡೆಯಲಿರುವುದು. ತಂಬಿಲ ಸೇವೆ ಮಾಡಲಿಚ್ಛಿಸುವವರು 9980223709 ನಂಬರಿಗೆ ಸಂಪರ್ಕಿಸಬಹುದು.
ಈ ಶ್ರದ್ಧಾ ಭಕ್ತಿಯ ಧಾರ್ಮಿಕ ಕಾರ್ಯದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.