ಇಂದಿನ ಕಾರ್ಯಕ್ರಮ( 14/03/2025)

0

ಪುತ್ತೂರು ಮುಳಿಯ ಕೇಶವ ಭಟ್ & ಸನ್ಸ್ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಫೆಸ್ಟ್
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಪಂಚಗವ್ಯ, ಪುಣ್ಯಾರ್ಚನೆ, ಆಶ್ಲೇಷ ಬಲಿ, ಬ್ರಹ್ಮಚಾರಿ ಆರಾಧನೆ, ಧಾರ್ಮಿಕ ಕಾರ್ಯಕ್ರಮ
ಪುತ್ತೂರು ಲಕ್ಷ್ಮೀದೇವಿ ಬೆಟ್ಟ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಬೆಳಿಗ್ಗೆ ೬.೨೦ರಿಂದ ಭಜನೆ, ೭ರಿಂದ ಶ್ರೀಕೃಷ್ಣ ಉಪಾಧ್ಯಾಯರಿಂದ ವೇದ ಘೋಷ, ೭.೩೦ರಿಂದ ವಿಶೇಷ ಪೂಜೆ
ಪಡುಮಲೆ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೧ಕ್ಕೆ ಪಡುವನ್ನೂರು ೧ನೇ ವಾರ್ಡ್‌ನ ವಾರ್ಡುಸಭೆ
ಆನಡ್ಕ ಅಂಗನವಾಡಿಯಲ್ಲಿ ಬೆಳಿಗ್ಗೆ ೧೦ಕ್ಕೆ ಶಾಂತಿಗೋಡು ೧ನೇ ವಾರ್ಡ್, ಶಾಂತಿಗೋಡು ಅಂಗನವಾಡಿಯಲ್ಲಿ ೧೧.೩೦ಕ್ಕೆ ಶಾಂತಿಗೋಡು ೨ನೇ ವಾರ್ಡ್, ವೀರಮಂಗಲ ಅಂಗನವಾಡಿಯಲ್ಲಿ ಅಪರಾಹ್ನ ೨.೩೦ಕ್ಕೆ ಶಾಂತಿಗೋಡು ೩ನೇ ವಾರ್ಡ್‌ನ ವಾರ್ಡುಸಭೆ
ಟಿಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಿಗ್ಗೆ ೬ರಿಂದ ಪಂಚಗವ್ಯ ಪುಣ್ಯಾಹ ಪುರಸ್ಸರ ಕಲಶ ಪ್ರತಿಷ್ಠೆ, ಪಂಚಾಮೃತಾಭಿಷೇಕ, ಕಲಶಾಭಿಷೇಕ, ೧೦ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ
ಟಿಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸಂಕ್ರಮಣ ಪ್ರಯುಕ್ತ ರಕ್ತೇಶ್ವರಿ, ಧೂಮಾವತಿ, ಕಲ್ಕುಡ ಕಲ್ಲುರ್ಟಿ ಗುಳಿಗ ದೈವಗಳ ತಂಬಿಲ ಸೇವೆ
ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ, ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಅಗೇಲು ಸೇವೆ
ನರಿಮೊಗರು ಶ್ರೀ ಕ್ಷೇತ್ರ ಧರ್ಮಚಾವಡಿ ಎಲಿಕಾ ಪಾಷಾಣಮೂರ್ತಿ ಸತ್ಯದೇವತೆ ದೈವಸ್ಥಾನದಲ್ಲಿ ಬೆಳಿಗ್ಗೆ ೧೦ರಿಂದ ಸಂಕ್ರಮಣ ಸೇವೆ, ಕಲ್ಲುರ್ಟಿಗೆ ಅಗೇಲು ಸೇವೆ, ದರ್ಶನ ಸೇವೆ
ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ಮೆಚ್ಚಿ ಜಾತ್ರೆ
ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಶ್ರೀ ದೇವರಿಗೆ ಹಸಿರು ಹೊರೆಕಾಣಿಕೆ ಸಮರ್ಪಣೆ, ಸಂಜೆ ಶ್ರೀ ಸತ್ಯನಾರಾಯಣ ಪೂಜೆ
ಕೋಡಿಂಬಾಡಿ ಮಠದಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಗಣಪತಿ ಹೋಮ, ಪಂಚವಿಶಂತಿ ಕಲಶ ಪ್ರತಿಷ್ಠೆ, ಅಧಿವಾಸ ಹೋಮ, ಕಲಶಾಭಿಷೇಕ, ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ಭಜನಾ ಸೇವೆ, ಸಂಜೆ ಲಲಿತಾ ಸಹಸ್ರನಾಮ ಪಾರಾಯಣ, ರಾತ್ರಿ ಶ್ರೀ ದೇವಿಗೆ ಮಹಾ ರಂಗಪೂಜೆ, ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ವಸಂತಕಟ್ಟೆ ಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಬೆಳಿಗ್ಗೆ ಮಖೆ ತೀರ್ಥಸ್ನಾನ, ೭.೩೦ರಿಂದ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಡುವುದು, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೭ರಿಂದ ಉತ್ಸವ
ಕುದ್ಮಾರು ಗ್ರಾಮದ ಕೆಲಂಬೀರಿ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಸುವರ್ಣ ಮಹೋತ್ಸವದ ನೇಮೋತ್ಸವ, ಬೆಳಿಗ್ಗೆ ನಾಗಬ್ರಹ್ಮ ತಂಬಿಲ, ಅಪರಾಹ್ನ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಸಭಾ ಕಾರ್ಯಕ್ರಮ, ಸನ್ಮಾನ, ಸತ್ಯದ ತುಡರ್ ಸಾಂಸ್ಕೃತಿಕ ಕಾರ್ಯಕ್ರಮ
ಪೆರ್ಲಂಪಾಡಿ ಉದಯಗಿರಿಯಲ್ಲಿ ಬೆಳಿಗ್ಗೆ ೭ಕ್ಕೆ ಗಣಹೋಮ, ಕಲಶ ಪ್ರತಿಷ್ಠೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಸಂಜೆ ೬ಕ್ಕೆ ಬಾಯಂಬಾಡಿ ಮಣ್ಣಾಪು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ಬರುವುದು, ರಾತ್ರಿ ೬.೩೦ರಿಂದ ಸಾಂಸ್ಕೃತಿಕ ವೈವಿಧ್ಯ, ನೃತ್ಯ ವೈವಿಧ್ಯ, ೭.೩೦ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ, ಸಾರ್ವಜನಿಕ ಅನ್ನಸಂತರ್ಪಣೆ, ೧೧ಕ್ಕೆ ಕುಳಿಚಟ್ಟು, ೧೨.೩೦ರಿಂದ ಕುಸಲ್ದ ಮಸಾಲೆ-ಸಂಗೀತ ರಸ ಸಂಜೆ
ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ೮ರಿಂದ ಗಣಹೋಮ, ಕಲಶಾಭಿಷೇಕ, ಗೊನೆ ಮುಹೂರ್ತ, ಮಹಾಪೂಜೆ, ರಾತ್ರಿ ೭ರಿಂದ ಧ್ವಜಾರೋಹಣ, ಮಹಾಪೂಜೆ, ಭೂತಬಲಿ
ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಸಾರ್ವಜನಿಕ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ಶ್ರೀ ದುರ್ಗಾಪೂಜೆ, ಭಜನೆ
ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ, ಮಲರಾಯ ದೈವಸ್ಥಾನದಲ್ಲಿ ಬೆಳಿಗ್ಗೆ ಧ್ವಜಾವರೋಹಣ, ಗಣಪತಿ ಹೋಮ, ಕಲಶ ಪ್ರತಿಷ್ಠೆ, ಸಂಪ್ರೋಕ್ಷಣೆ, ಸಂಕ್ರಮಣ ತಂಬಿಲ, ಮಹಾಪೂಜೆ
ಎರುಂಬು ಸಿಂಹಮೂಲೆ ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಬೆಳಿಗ್ಗೆ ಗಣಪತಿ ಹೋಮ, ತ್ರಿಕಾಲಪೂಜೆ, ಅಂಕುರಪೂಜೆ, ಚಂಡಿಕಾ ಹವನ, ಮಧ್ಯಾಹ್ನ ದುರ್ಗಾಪೂಜೆ, ಸಂಜೆ ೬ರಿಂದ ಭಕ್ತಿ-ಭಾವ ಜಾನಪದ ಸಂಗೀತ ವೈಭವ, ರಾತ್ರಿ ದುರ್ಗಾಪೂಜೆ, ಅಂಕುರ ಪೂಜೆ

LEAVE A REPLY

Please enter your comment!
Please enter your name here