ಪುತ್ತೂರು: ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಪ್ರತಿಷ್ಠಾ 24ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಂಕ್ರಮಣ ಹುಣ್ಣಿಮೆ ಮಾ.14ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.
ಮಠದ ಪ್ರಧಾನ ಅರ್ಚಕ ಎ ರಾಘವೇಂದ್ರ ಉಡುಪ ಅವರ ನೇತೃತ್ವದಲ್ಲಿ ಬೆಳಿಗ್ಗೆ ಪಂಚಗವ್ಯ ಪುಣ್ಯಾಹ ಕಲಶ ಪ್ರತಿಷ್ಠೆ, ನಂತರ ಪಂಚಾಮೃತಾಭಿಷೇಕ, ಕಲಶಾಭಿಷೇಕ ನಡೆಯಿತು. ಬಳಿಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಮಠದ ಕಾರ್ಯದರ್ಶಿ ಯು ಪೂವಪ್ಪ, ಟ್ರಸ್ಟಿಗಳಾದ ಯನ್ ಸುಬ್ರಹ್ಮಣ್ಯಂ, ಈಶ್ವರ ಭಟ್, ಲೋಕೇಶ್ ಹೆಗ್ಡೆ, ಗಣಪತಿ ನಾಯಕ್ ಮತ್ತು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.