ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನ 3ನೇ ಹುಣ್ಣಿಮೆ ಮಖೆಕೂಟ ಸಂಪನ್ನ

0

ಉಪ್ಪಿನಂಗಡಿ: ಇಲ್ಲಿನ ಪುರಾಣ ಪ್ರಸಿದ್ದ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಅಮ್ಮನವರ ದೇವಳದಲ್ಲಿ ಮೂರನೇ ಮಖೆಜಾತ್ರೆಯಾದ ಹುಣ್ಣಿಮೆ ಮಖೆ ಜಾತ್ರೆಯು ಮೇ.ಮೂ. ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಪವಿತ್ರಪಾಣಿ ಶ್ರೀ ಕರಾಯ ವಿಷ್ಣುಮೂರ್ತಿ ಕುದ್ದಣ್ಣಾಯರ ಉಪಸ್ಥಿತಿಯಲ್ಲಿ ಜರಗಿತು.


ಹುಣ್ಣಿಮೆ ಮಖೆ ಜಾತ್ರೆಯ ಪ್ರಯುಕ್ತ ಗುರುವಾರ ರಾತ್ರಿ ಬಲಿ ಹೊರಟು ಉತ್ಸವವಾಗಿ ರಥಬೀದಿಯಲ್ಲಿ ಭವ್ಯ ರಥೋತ್ಸವವು ನಡೆಯಿತು. ಈ ಬಾರಿ ವಿಶೇಷವಾಗಿ ನಡೆದ ಬ್ರಹ್ಮ ರಥಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದರು. ವಿಶ್ವಹಿಂದೂ ಪರಿಷತ್ ಉಪ್ಪಿನಂಗಡಿ ಪ್ರಖಂಡದ ಅಧ್ಯಕ್ಷ ಸುದರ್ಶನ್‌ರವರ ನೇತೃತ್ವದಲ್ಲಿ ಆಕರ್ಷಕ ಸಿಡಿಮದ್ದು ಪ್ರದರ್ಶನ ಈ ಸಂದರ್ಭ ನಡೆಯಿತು. ಶುಕ್ರವಾರ ಪ್ರಾತಃ ಕಾಲದಿಂದಲೇ ನೇತ್ರಾವತಿ ಕುಮಾರಧಾರ ನದಿ ಸಂಗಮ ಸ್ಥಳದಲ್ಲಿ ಮಖೆ ತೀರ್ಥ ಸ್ನಾನದಲ್ಲಿ ಭಕ್ತರು ಭಾಗಿಯಾದರು. ಬಳಿಕ ದೇವಳದಲ್ಲಿ ಬಲಿ ಹೊರಟು ಉತ್ಸವ ದರ್ಶನ ಬಲಿ ಬಟ್ಟಲು ಕಾಣಿಕೆ ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿ ಅಕ್ಕಿ ಕೊಡುವ ಮೂಲಕ ಮಹಾಪೂಜೆ ಅನ್ನಪ್ರಸಾದ ವಿತರಣೆ ನಡೆಯಿತು.


ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್ , ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ, ಪ್ರಧಾನ ಅರ್ಚಕರಾದ ಹರೀಶ್ ಉಪಾಧ್ಯಾಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅರ್ತಿಲ ಕೃಷ್ಣರಾವ್ ಜಿ., ಬಿ. ಗೋಪಾಲಕೃಷ್ಣ ರೈ, ಸೋಮನಾಥ, ಜಿ. ಕೃಷ್ಣರಾವ್ ಆರ್ತಿಲ, ದೇವಿದಾಸ್ ರೈ ಬಿ., ಅನಿತಾ ಕೇಶವ ಗೌಡ, ಎಂ.ವೆಂಕಪ್ಪ ಪೂಜಾರಿ, ನಿಕಟ ಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಪ್ರಮುಖರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಸಚಿನ್, ನಿತೇಶ್ ಗಾಣಿಗ, ತಿಮ್ಮಪ್ಪ ಗೌಡ, ಕೈಲಾರ್ ರಾಜಗೋಪಾಲ ಭಟ್, ಪ್ರತಾಪ್ ಪೆರಿಯಡ್ಕ, ಕರಾಯ ರಾಘವೇಂದ್ರ ನಾಯಕ್, ರಾಮಚಂದ್ರ ಮಣಿಯಾಣಿ, ವಿದ್ಯಾಧರ ಜೈನ್, ಸದಾನಂದ ನೆಕ್ಕಿಲಾಡಿ, ಪ್ರಶಾಂತ್ ಎನ್., ಸುಧಾಕರ ಶೆಟ್ಟಿ, ಸುರೇಶ್ ಅತ್ರಮಜಲು, ಧನಂಜಯ , ಜಯವಿಕ್ರಂ ಕಲ್ಲಾಪು, ಶ್ರೀನಿಧಿ ಉಪಾಧ್ಯಾಯ, ಯು.ರಾಮ, ಎನ್.ಪ್ರಭಾತ್ ಪೈ, ಸುಜೀರ್ ಗಣಪತಿ ನಾಯಕ್, ವೈ., ಸುನೀಲ್ ಕುಮಾರ್ ದಡ್ಡು, ಅನಂತ ಶೆಣೈ , ಕರಾಯ ಗಿರೀಶ್ ನಾಯಕ್, ಕೇಪುಳು ರಾಜೇಶ್ ನಾಯಕ್, ಹರಿರಾಮಚಂದ್ರ, ಸುನಿಲ್ ಅನಾವು, ರಾಜೇಶ. ಪೈ, ಎನ್. ಗೋಪಾಲ ಹೆಗ್ಡೆ, ನಾರಾಯಣ ಹೇರಳೆ, ದಿನೇಶ್ ಬೊಳ್ಳಾರ್, ನರಸಿಂಹ ಪಡಿಯಾರ್, ರವೀಂದ್ರ ಪೈ ವ್ಯವಸ್ಥಾಪಕ ವೆಂಕಟೇಶ ರಾವ್, ಗುಮಾಸ್ತ ಬಡಿಲ ಕೃಷ್ಣ ಪ್ರಸಾದ್, ದಿವಾಕರ ಗೌಡ, ಪದ್ಮನಾಭ ಕುಲಾಲ್, ಕೆ ಸುಧಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here