ಪುತ್ತೂತು:ಸಾಲ ಮುಕ್ತಾಯಗೊಳಿಸುವುದಾಗಿ ಹೇಳಿ ತನ್ನಿಂದ ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನ ಮೇರೆಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮುಡ್ನೂರು ಗ್ರಾಮದ ಮೂಡಾಯೂರು ವಿಷ್ಣು ನಿಲಯದ ರಾಜ ಭಟ್.ಕೆ (63 ವ.)ಎಂಬವರು ಈ ಕುರಿತು ದೂರು ನೀಡಿದ್ದಾರೆ. ಪುತ್ತೂರಿನಲ್ಲಿ ಪತ್ನಿ ವಿಜಯ ಕುಮಾರಿಯವರ ಹೆಸರಿನಲ್ಲಿ ತಾವು ಆರ್.ಜೆ.ಅಯ್ಯಂಗಾರ್ಸ್ ಹೋಂ ಮೇಡ್ ಕಂಪೆನಿ ಹೊಂದಿದ್ದು, ಅದರಲ್ಲಿ ಸೋನ್ ಪಪಡಿ ತಯಾರಿಸುವುದು ಹಾಗೂ ವಿತರಿಸುವುದು ಮಾಡುತ್ತಿರುವುದಾಗಿದೆ.ತಾನು ಪತ್ನಿ ವಿಜಯಕುಮಾರಿಯವರ ಹೆಸರಿನಲ್ಲಿ ಲೆಂಡಿಂಗ್ಕಾರ್ಟ್ ಎಂಬ ಫೈನಾನ್ಸ್ ಕಂಪೆನಿಯಲ್ಲಿ 2023ನೇ ಅಕ್ಟೋಬರ್ ತಿಂಗಳಲ್ಲಿ ರೂ.6,28,೦೦೦ ಲೋನ್ ತೆಗೆದಿದ್ದು, ಅದರಲ್ಲಿ ಇನ್ಸುರೆನ್ಸ್ ಹಾಗೂ ಇನ್ನಿತರ ಚಾರ್ಜಸ್ ಕಡಿತಗೊಳಿಸಿ ಬಾಕಿ ಉಳಿದ ರೂ.5,75,000 ಹಣವನ್ನು ಪತ್ನಿ ಹೆಸರಿನಲ್ಲಿರುವ ಕಂಪೆನಿಯ ಬ್ಯಾಂಕ್ ಖಾತೆಗೆ ಹಾಕಿರುತ್ತಾರೆ.2023ನೇ ನವೆಂಬರ್ ತಿಂಗಳಿನಿಂದ ಪ್ರತಿ ತಿಂಗಳ 3ನೇ ತಾರೀಕಿನಂದು ರೂ.34,646 ಇಎಂಐ ಕಟ್ಟಿಕೊಂಡು ಬಂದಿದ್ದೆ.14-01-2025ರಂದು ಬಾಕಿ ಉಳಿದ ಲೋನಿನ ಎಲ್ಲಾ ಮೊತ್ತವನ್ನು ಪಾವತಿಸುವ ಸಲುವಾಗಿ ಲೆಂಡಿಂಗ್ಕಾರ್ಟ್ ಎಂಬ ಪೈನಾನ್ಸ್ ಕಂಪೆನಿಯನ್ನು ಸರ್ಚ್ ಮಾಡಿದಾಗ ಟೋಲ್ ಫ್ರೀ ದೊರೆತಿದ್ದು, ಸದ್ರಿ ನಂಬರ್ಗೆ ಕರೆ ಮಾಡಿ ಲೋನ್ ಪಾವತಿ ಬಗ್ಗೆ ವಿಚಾರಿಸಿದಾಗ ಮೊಬೈಲ್ ನಂಬರ್ಗೆ ಕರೆ ಮಾಡಲು ತಿಳಿಸಿದ್ದರು.ಅದರಂತೆ ತಾನು ಮೊಬೈಲ್ಗೆ ಕರೆ ಮಾಡಿದಾಗ ಸದ್ರಿಯವರು, ಲೋನ್ ಮುಕ್ತಾಯಗೊಳಿಸಲು ಕೊಟಕ್ ಮಹೀಂದ್ರ ಬ್ಯಾಂಕ್ ಖಾತೆಗೆ ಹಣ ಕಳುಹಿಸಲು ತಿಳಿಸಿದ್ದರು.ಅದರಂತೆ 16-01-2025ರಂದು ರೂ.1,61,522 ಹಣವನ್ನು ಫೆಡರಲ್ ಬ್ಯಾಂಕ್ ಖಾತೆಗೆ ಕಳುಹಿಸಲಾಗಿತ್ತು.ಆದರೆ, 20-02-2025 ರಂದು ಲೆಂಡಿಂಗ್ಕಾರ್ಟ್ ಪೈನಾನ್ಸ್ ಕಂಪೆನಿಯವರು ಕರೆ ಮಾಡಿ ಲೋನ್ ಇಎಂಐ ಕಟ್ಟಲು ಬಾಕಿ ಇರುವುದಾಗಿ ಹಾಗೂ ಇಎಂಐ ಕಟ್ಟಬೇಕೆಂದು ತಿಳಿಸಿರುತ್ತಾರೆ.ಆದರೆ ಎಲ್ಲಾ ಲೋನ್ ಮೊತ್ತವನ್ನು ಕೊಟಕ್ ಮಹೀಂದ್ರ ಬ್ಯಾಂಕ್ಗೆ ಕಟ್ಟಿರುವುದಾಗಿ ತಿಳಿಸಿದಾಗ ಅದು ಫೇಕ್ ಎಂದು ತಿಳಿಸಿರುತ್ತಾರೆ.ಆದುದರಿಂದ ಲೋನ್ ಮುಕ್ತಾಯಗೊಳಿಸುವುದಾಗಿ ಹೇಳಿ ನನ್ನಿಂದ ರೂ. 1,61,522 ಹಣ ಪಡೆದುಕೊಂಡು ವಂಚಿಸಿರುವುದಾಗಿದೆ ಎಂದು ರಾಜ ಭಟ್ ಕೆ.ಅವರು ನೀಡಿದ ದೂರಿನ ಮೇರೆಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ 66(ಸಿ),66(ಡಿ)ಐಟಿ ಆಕ್ಟ್ 318(4 ),319(2 )ಬಿಎನ್ಎಸ್ ಕಾಯ್ದೆಯಂತೆ ಪ್ರಕರಣ(ಅ.ಕ್ರ.:15/2025) ದಾಖಲಾಗಿರುತ್ತದೆ.