ಜೇಸಿಐಯಿಂದ ಪುನಶ್ಚೇತನ ತರಬೇತಿ ಕಾರ್ಯಕ್ರಮ

0

ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಘಟಕದ ಸಾಮಾನ್ಯ ಸಭೆ ಮತ್ತು ಪುನಶ್ಚೇತನ ತರಬೇತಿ ಕಾರ್ಯಕ್ರಮ ಉಪ್ಪಿನಂಗಡಿ ರೋಟರಿ ಕ್ಲಬ್ ಸಭಾಭವನದಲ್ಲಿ ನಡೆಯಿತು.


ಜೇಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ನಟೇಶ್ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಪುನಶ್ಚೇತನ ತರಬೇತಿ ಕಾರ್ಯಕ್ರಮವನ್ನು ರಾಷ್ಟ್ರೀಯ ತರಬೇತುದಾರ ಜೇಸಿಐ ಸೆನೆಟರ್ ಕೃಷ್ಣ ಮೋಹನ್ ಪಿ.ಎಸ್ ನಡೆಸಿಕೊಟ್ಟರು. ವಲಯ ತರಬೇತಿದಾರರಾದ ಗೋವಿನಂದ ಪ್ರಸಾದ್ ಕಜೆ brainstorming ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು.

ವಲಯ ‘ಉದಕ’ ಪತ್ರಿಕೆ ಸಂಪಾದಕ ಜೇಸಿ ಮೋಹನ್ ಚಂದ್ರ ತೋಟದ ಮನೆ, ನಿಕಟಪೂರ್ವ ಅಧ್ಯಕ್ಷೆ ಜೇಸಿ ಲವೀನಾ ಪಿಂಟೊ, ಪೂರ್ವ ವಲಯಾಧಿಕಾರಿಗಳಾದ ಪ್ರಶಾಂತ್ ಕುಮಾರ್ ರೈ, ಡಾ. ರಾಜಾರಾಮ್ ಕೆ.ಬಿ., ಪುರುಷೋತ್ತಮ ಮುಂಗ್ಲಿಮನೆ, ಶೇಖರ್ ಗೌಂಡತ್ತಿಗೆ, ಉಮೇಶ್ ಆಚಾರ್ಯ ಸೇರಿದಂತೆ ಘಟಕದ 25 ಮಿಕ್ಕಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಘಟಕದ ಕಾರ್ಯದರ್ಶಿ ಮಹೇಶ್ ಖಂಡಿಗ, ಸುರೇಶ್ , ಡಾ. ಶಿವರಾಮ್ ಪನ್ಯ , ಗಣೇಶ್ ಸಹಕರಿಸಿದರು.

LEAVE A REPLY

Please enter your comment!
Please enter your name here