ಪುತ್ತೂರು: ತಾಜುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಗಟ್ಟಮನೆ ಸಾರೆಪುಣಿ ಇದರ ವತಿಯಿಂದ ಕೆಎಂಜೆ, ಎಸ್ವೈಎಸ್, ಎಸ್ಎಸ್ಎಫ್ ಗಟ್ಟಮನೆ ಶಾಖೆಯ ಸಹಕಾರದೊಂದಿಗೆ ಪ್ರತೀ ವರ್ಷ ವಿತರಿಸುವ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ ಮಾ.15ರಂದು ಗಟ್ಟಮನೆ ತಾಜುಲ್ ಉಲಮಾ ನಗರದಲ್ಲಿ ನಡೆಯಿತು.
ಗಟ್ಟಮನೆ ಜಮಾಅತ್ ವ್ಯಾಪ್ತಿಯ 29 ಅರ್ಹ ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು. ಈ ಸಂಧರ್ಭದಲ್ಲಿ ತಾಜುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಎ.ಎಸ್ ಅಬೂಬಕ್ಕರ್ ಸಾರೆಪುಣಿ, ಕೆಎಂಜೆ, ಎಸ್ವೈಎಸ್ ಗಟ್ಟಮನೆ ಶಾಖೆಯ ಅಧ್ಯಕ್ಷ ಇಬ್ರಾಹಿಂ ಸಿ.ಎಂ, ಎಸ್ಎಸ್ಎಫ್ ಗಟ್ಟಮನೆ ಶಾಖೆಯ ಅಧ್ಯಕ್ಷ ಹಾಫಿಲ್ ಶಫೀಖ್ ಹಾಶಿಮಿ ಅಲ್ಮದೀನಿ, ತಾಜುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ನ ಪ್ರ.ಕಾರ್ಯದರ್ಶಿ ಅಬ್ದುಲ್ ಖಾದರ್ ಗಟ್ಟಮನೆ, ಹಾಜಿ ಅಬೂಬಕ್ಕರ್ ಮುಸ್ಲಿಯಾರ್ ಗಟ್ಟಮನೆ, ಇಸ್ಮಾಯಿಲ್ ನೂಜಿ, ಆಲಿಕುಂಞಿ, ಬಾತಿಷ ಗಟ್ಟಮನೆ ಉಪಸ್ಥಿತರಿದ್ದರು.