ಇರ್ದೆ: ಇಂಡಿಯನ್ ಆಯಿಲ್‌ನವರ ವಿತರಕ ಸಂಸ್ಥೆ ‘ಪೀಜೆ ಪೆಟ್ರೋಲಿಯಂ’ ಶುಭಾರಂಭ

0

ಪುತ್ತೂರು:ಶೈಕ್ಷಣಿಕ ಕ್ಷೇತ್ರದಲ್ಲಿ ಬೆಳೆದಿರುವ ಇರ್ದೆ-ಬೆಟ್ಟಂಪಾಡಿ ಗ್ರಾಮದಲ್ಲಿ ಉದ್ಯಮ ಕ್ಷೇತ್ರದ ಕೊಡುಗೆಯಾಗಿ ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನವರ ವಿತರಕ ಸಂಸ್ಥೆ, ನವ ಮುಂಬಯಿಯ ಪೀಜೆ ಗ್ರೂಪ್ ಆಫ್ ಕಂಪನಿಯವರ ‘ಪೀಜೆ ಪೆಟ್ರೋಲಿಯಂ’ ಮಾ.16ರಂದು ಪುತ್ತೂರು-ಪಾಣಾಜೆ ರಸ್ತೆಯ ಇರ್ದೆಯಲ್ಲಿ ಶುಭಾರಂಭಗೊಂಡಿತು.


ನೂತನ ಪೆಟ್ರೋಲ್ ಪಂಪ್ ಉದ್ಘಾಟಿಸಿ, ಚಾಲನೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಉದ್ಯಮಗಳು ಹೆಚ್ಚು ಹೆಚ್ಚು ಬಂದಂತೆ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಆಗ ರಾಜ್ಯ, ದೇಶದ ಅಭಿವೃದ್ಧಿಯಾಗಲಿದೆ. ಗ್ರಾಮೀಣ ಪ್ರದೇಶಲ್ಲಿ ಪೀಜೆ ಗ್ರೂಪ್‌ನವರು ಉತ್ತಮ ಉದ್ಯಮ ಪ್ರಾರಂಭಿಸಿದ್ದಾರೆ. ಗ್ರಾಮೀಣ ಜನತೆಗೆ ಪೆಟ್ರೋಲಿಯಂ ಉತ್ಪನಗಳ ಜೊತೆಗೆ ಉದ್ಯೋಗವೂ ದೊರೆಯುತ್ತಿದೆ. ಹೊಸ ಉದ್ಯಮಗಳು ಬಂದಾಗ ಜನತೆ ಸಹಕಾರ ದೊರೆತಾಗ ಉದ್ಯಮ ಬೆಳೆಯಲು ಸಾಧ್ಯವಾಗಿದ್ದು ಸ್ಥಳೀಯ ನಾಗರೀಕರ ಸಹಕಾರ ಅಗತ್ಯ. ಪುತ್ತೂರಿಗ ಅಭಿವೃದ್ಧಿಯ ಗರಿಗೆ ಪೀಜೆ ಗ್ರೂಪ್ ಹಾಗೂ ಇಂಡಿಯನ್ ಅಯಿಲ್ ಕಾರ್ಪೋರೇಷನ್ ದೊಡ್ಡ ಕೊಡುಗೆ ನೀಡಿದೆ ಎಂದ ಅವರು ಪೆಟ್ರೋಲ್ ಪಂಪ್‌ಗಳಲ್ಲಿ ಲಾಭ ಕಡಿಮೆ. ಆದರೂ ಎಲ್ಲಿಯೂ ಕಲಬೆರಕೆ ಮಾಡುವುದಿಲ್ಲ. ಗುಣಮಟ್ಟದ ಪೆಟ್ರೋಲ್‌ಗಳೇ ದೊರೆಯುತ್ತದೆ ಎಂದು ಹೇಳಿದರು.


ಕಚೇರಿ ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪೀಜೆ ಗ್ರೂಪ್‌ನವರು ಗ್ರಾಮೀಣ ಪ್ರದೇಶದ ಜನತೆಗ ಅನುಕೂಲವಾಗುವ ನಿಟ್ಟಿನಲ್ಲಿ ಮನೆ ಬಾಗಿಲಲ್ಲಿ ಪೆಟ್ರೋಲ್ ಪಂಪ್ ಪ್ರಾರಂಭಿಸುವ ಮೂಲಕ ಗಡಿ ಭಾಗದ ಜನರ ಬೇಡಿಕೆ ಈಡೇರಿಸಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಜನತೆ ದೂರದ ಪೇಟೆಗೆ ಹೋಗಬೇಕಾಗಿಲ್ಲ. ಹಳ್ಳಿ ಪ್ರದೇಶಲ್ಲಿ ಉದ್ಯಮ ಪ್ರಾರಂಭಿಸಿದಾಗ ಜನ ಪ್ರೀತಿಯಿಂದ ಜನ ಸ್ವೀಕರಿಸುತ್ತಾರೆ. ಗಡಿ ಭಾಗದ ಜನತೆ ಇಂಧನವನ್ನು ಇಲ್ಲಿಯೇ ಪಡೆಯುವ ಮೂಲಕ ಸಹಕಾರ ನೀಡಬೇಕು ಎಂದರು.


ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪಡ್ರೆ ಶ್ರೀ ಜಟಾಧಾರಿ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ವಾಸುದೇವ ಭಟ್ ತಡೆಗಲ್ಲು ಮಾತನಾಡಿ, ಗ್ರಾಮೀಣ ಪ್ರದೇಶಲ್ಲಿ ಹುಟ್ಟಿ ಬೆಳೆದು ಬಂದಿರುವ ಪೀಜೆ ಗ್ರೂಪ್ ಕೃಷ್ಣ ನಾಕ್‌ರವರು ಕಠಿಣ ಪರಿಶ್ರಮದಿಂದ ಬೆಳೆದವರು. ಮುಂದೆ ಉದ್ಯಮ ಪ್ರಾರಂಭಿಸಿ ಯಶಸ್ಸು ಸಾಧಿಸಿದವರು. ತನ್ನದೇ ಅನುಭವದಲ್ಲಿ ಯಶಸ್ವಿಯಾಗಿ ಬೆಳೆದಿರುವ ಕೃಷ್ಣ ನಾಯ್ಕ್ ಸಣ್ಣ ಗ್ರಾಮದಲ್ಲಿ ಪೆಟ್ರೋಲ್ ಪಂಪ್ ಪ್ರಾರಂಭಿಸಿದ್ದು ಯಶಸ್ವಿಯಾಗಿ ಬೆಳೆಯಲಿ ಎಂದು ಶುಭಹಾರೈಸಿದರು.


ಅಧ್ಯಕ್ಷತೆ ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ದ,ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಆರ್ಥಿಕ ಕ್ರೂಡೀಕರಣದ ಮೂಲ ಉದ್ಯಮವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪೆಟ್ರೋಲ್ ಪಂಪ್ ಪ್ರಾರಂಭಿಸಿರುವುದು ಈ ಭಾಗದ ಅಭಿವೃದ್ಧಿಗೆ ಮುಕುಟು ಪ್ರಾಯವಾಗಿದೆ. ಪೀಜೆ ಗ್ರೂಪ್‌ನವರು ಈ ಭಾಗದ ಜನರ ಬೇಡಿಕೆ ಈಡೇರಿಸಿದ್ದಾರೆ ಎಂದರು.


ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ರಂಗನಾಥ ರೈ ಗುತ್ತು ಮಾತನಾಡಿ, ಇರ್ದೆಯಲ್ಲಿ ಪ್ರಾರಂಭಗೊಂಡ ಪೆಟ್ರೋಲ್ ಪಂಪ್ ಪರಿಸರದ ಹಲವು ಗ್ರಾಮಗಳ ಜನತೆಗೆ ಸಹಕಾರಿಯಾಗಲಿದೆ. ಪೈಪೋಟಿ ಜಗತ್ತಿನಲ್ಲಿ ಪೀಜೆ ಗ್ರೂಪ್‌ನ ಕೃಷ್ಣ ನಾಯ್ಕರವರು ಗ್ರಾಮೀಣ ಪ್ರದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದು ಎಲ್ಲರೂ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.


ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ, ಶೈಕ್ಷಣಿಕ, ಧಾರ್ಮಿಕ ಬೆಳೆಯುತ್ತಿರುವ ಇರ್ದೆ, ಬೆಟ್ಟಂಪಾಡಿಯಲ್ಲಿ ಪೆಟ್ರೋಲ್ ಪಂಪ್ ಪ್ರಾರಂಭಿಸಿರುವುದು ಶಾಸಕರ ಅಭಿವೃದ್ಧಿ ವೇಗಕ್ಕೆ ಕೊಡುಗೆಯಾಗಿದೆ. ನಗುಮೊಗದ ಸೇವೆಯೊಂದಿಗೆ ಗ್ರಾಹಕರ ವಿಶ್ವಾಸನೀಯ ಸಂಸ್ಥೆಯಾಗಿ ಬೆಳೆಯಲಿ ಎಂದರು.


ಇಂಡಿಯಲ್ ಆಯಿಲ್ ಕಾರ್ಪೋರೇಷನ್‌ನ ವಿಭಾಗೀಯ ವ್ಯವಸ್ಥಾಪಕ ಯೋಗೀಶ್ ಪಡಿದಾರ್, ರಿಟೈಲ್ ಸೇಲ್ಸ್ ಮ್ಯಾನೇಜರ್ ದುರ್ಗೇಶ್ ತಿವಾರಿ, ಸೇಲ್ಸ್ ಆಫೀಸರ್ ಕೊರು ದಿನೇಶ್, ಕಾಸರಗೋಡು ಸೇಲ್ಸ್ ಆಫೀಸರ್ ಅಭಿನವ್‌ನಾಥ್, ಇಂಜಿನಿಯರ್ ರಾಮಕೃಷ್ಣ ಶೆಣೈ, ಬೆಟ್ಟಂಪಾಡಿ ಗ್ರಾ.ಪಂ ಪಿಡಿಓ ಸೌಮ್ಯ, ಪ್ರಗತಿಪರ ಕೃಷಿಕರಾದ ರಾಧಾಕೃಷ್ಣ ಭಟ್ ಪತ್ತಡ್ಕ, ಗಣಪತಿ ಭಟ್ ಪತ್ತಡ್ಕ, ಕೊರಿಂಗಿಲ ತಂಞಲ್ ಸಯ್ಯದ್ ಬಹಲವಿ ಹಸೀಮ್, ಬೆಳಿಯೂರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹರಿಪ್ರಕಾಶ್ ಬೈಲಾಡಿ ಮಾತನಾಡಿ ಸಂಸ್ಥೆಯ ಯಶಸ್ಸಿಗೆ ಶುಭಹಾರೈಸಿದರು.


ಅಂಗನವಾಡಿ ನೀರಿನ ಟ್ಯಾಂಕ್ ಕೊಡುಗೆ:
ನೂತನ ಪೆಟ್ರೋಲ್ ಪಂಪ್‌ನ ಉದ್ಘಾಟನಾ ಸಮಾರಂಭದಲ್ಲಿ ಬೆಟ್ಟಂಪಾಡಿ ಗ್ರಾ.ಪಂ ಸದಸ್ಯರಾದ ಮೊದು ಕುಂಞಿ ಹಾಗೂ ಮಹಾಲಿಂಗ ನಾಯ್ಕ ಅಂಗನವಾಡಿ ಕೇಂದ್ರಕ್ಕೆ ನೀರಿನ ಟ್ಯಾಂಕ್‌ನ್ನು ಕೊಡುಗೆ ನೀಡಿದರು. ಶಾಸಕ ಅಶೋಕ್ ಕುಮಾರ್ ರೈಯವರು ಅಂಗನವಾಡಿ ಕಾರ್ಯಕರ್ತೆಗೆ ಟ್ಯಾಂಕ್ ಹಸ್ತಾಂತರಿಸಿದರು.


ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಬೀಡು, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬಾಲ್ಯೊಟ್ಟುಗುತ್ತು, ರೆಂಜ ಫಾರೂಕ್ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ಬಾಸ್ ಹಾಜಿ ಮಣ್ಣಾಪು, ಮಹಮ್ಮದ್ ಕುಂಞಿ ಕೊರಿಂಗಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಬ್ರೈಟ್ ವೇ ಇಂಡಿಯಾ ಲಿಮಿಟೆಡ್‌ನ ನಿರ್ದೇಶಕ ಮನಮೋಹನ್ ರೈ ಚೆಲ್ಯಡ್ಕ, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಚಂದ್ರಶೇಖರ ರೈ, ಸುಮಲತಾ,ರಮ್ಯ, ಪಿಎಲ್‌ಡಿ ಬ್ಯಾಂಕ್‌ನ ಉಪಾಧ್ಯಕ್ಷ ಪ್ರವೀಣ್ ರೈ ಪಂಜೊಟ್ಟು, ಮೆಸ್ಕಾಂ ನಿರ್ದೇಶಕ ಬಾಬು ರೈ ಕೋಟೆ, ಪಾಣಾಜೆ ಗ್ರಾ.ಪಂ ಸದಸ್ಯ ನಾರಾಯಣ, ನಿಡ್ಪಳ್ಳಿ ಗ್ರಾ.ಪಂ ಸದಸ್ಯೆ ಗ್ರೆಟ್ಟಾ ಡಿ’ ಸೋಜ, ಕೊರಿಂಗಿಲ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಕೊರಿಂಗಿಲ, ರಾಯಲ್ ಗ್ರೂಪ್ ಶರೀಪ್ ರಾಯಲ್, ಪುಷ್ಪರಾಜ ಶೆಟ್ಟಿ ಬೈಲಾಡಿ, ಅಬ್ದುಲ್ ರಹಮಾನ್ ಮಣ್ಣಾಪು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಪೆಟ್ರೋಲ್ ಪಂಪ್ ಪ್ರಾರಂಭಿಸಿದ ಸಹಕರಿಸಿದ ಬೆಟ್ಟಂಪಾಡಿ ಗ್ರಾ.ಪಂ ಸದಸ್ಯರಾದ ಮೊದು ಕುಂಞಿ ಹಾಗೂ ಮಹಾಲಿಂಗ ನಾಯ್ಕರವರನ್ನು ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಗೌರವಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಪೀಜೆ ಗ್ರೂಪ್‌ನ ಆಡಳಿತ ನಿರ್ದೇಶಕ ಕೃಷ್ಣ ನಾಕ್ ಅತಿಥಿಗಳನ್ನು ಶಾಲು ಹಾಕಿ, ಹೂಗುಚ್ಚ ನೀಡಿ ಸ್ವಾಗತಿಸಿದರು. ಸೇಸಪ್ಪ ನಾಯ್ಕ್, ನಾರಾಯಣ ನಾಯ್ಕ್, ಡಾ.ಧರ್ಮರಾಜ್, ಮನೋಹರ್, ಮಹಾಲಿಂಗ ನಾಯ್ಕ, ಮೊದುಕುಂಞಿ, ವೆಂಕಪ್ಪ ನಾಯ್ಕ್, ಅಭಿಷೇಕ್ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿದರು.

ಗಡಿ ಭಾಗದಲ್ಲಿರುವ ಗ್ರಾಮೀಣ ಪ್ರದೇಶದ ಜನತೆಯ ಅನುಕೂಲಕ್ಕಾಗಿ ಪೆಟ್ರೋಲ್ ಪಂಪ್ ಪ್ರಾರಂಭಿಸುವ ಮುಖಾಂತರ ಈ ಭಾಗದ ಜನರ ಬಹು ಕಾಲದ ಬೇಡಿಕೆ ಈಡೇರಿಸಲಾಗಿದೆ. ಇಂಡಿಯನ್ ಆಯಿಲ್‌ನ ಪೆಟ್ರೋಲ್, ಡೀಸೆಲ್, ಆಯಿಲ್‌ಗಳ ಜೊತೆಗೆ ಎಲ್ಲಾ ರೀತಿಯ ಇಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಪಾಯಿಂಟ್ ಸೌಲಭ್ಯವಿದೆ. ವಾಹನಗಳ ಟಯರ್‌ಗಳಿಗೆ ಉಚಿತ ಏರ್, ಗ್ರಾಹಕರಿಗೆ ಶುದ್ದು ಕುಡಿಯುವ ನೀರು, ಶೌಚಾಲಯಗಳ ಸೌಲಭ್ಯಗಳಿವೆ. ಅಲ್ಲದೆ ರಾತ್ರಿ ವೇಳೆ ವಾಹನಗಳಿಗೆ ತಂಗಲು ವ್ಯವಸ್ಥೆಗಳಿವೆ. ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯ ತನಕ ಪೆಟ್ರೋಲ್ ಪಂಪ್ ಕಾರ್ಯನಿರ್ವಹಿಸಲಿದ್ದು ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸುತ್ತೇವೆ.
-ಕೃಷ್ಣ ನಾಯ್ಕ್, ಆಡಳಿತ ನಿರ್ದೇಶಕರು ಪೀಜೆ ಗ್ರೂಪ್ ಆಪ್ ಕಂಪನೀಸ್

LEAVE A REPLY

Please enter your comment!
Please enter your name here