ಪುಣಚ: ಕೋಟಿ ಚೆನ್ನಯ ಬಿಲ್ಲವ ಸಂಘ (ರಿ) ಪುಣಚ ಹಾಗೂ ಬಿಲ್ಲವ ಮಹಿಳಾ ಸಮಿತಿ ಪುಣಚ ಇದರ ವತಿಯಿಂದ ಪುಣಚ ಮೂರಿಬೆಟ್ಟು ಸದಾನಂದ ಅಂಚನ್ ಅವರ ನೂತನ ಮನೆ ನಿರ್ಮಾಣದ ಅಡಿಪಾಯ ಕೆಲಸದ ಶ್ರಮದಾನ ಮಾ.16ರಂದು ನಡೆಸಲಾಯಿತು.
ಶ್ರಮದಾನದಲ್ಲಿ ಪುಣಚ ಕೋಟಿ ಚೆನ್ನಯ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಕೋಡಂದೂರು, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಎಸ್ ಸಂಕೇಶ, ಜೊತೆ ಕಾರ್ಯದರ್ಶಿ ಚಂದ್ರಶೇಖರ ಮಲ್ಲಿಕಟ್ಟೆ, ಕ್ರೀಡಾ ಕಾರ್ಯದರ್ಶಿ ಸುಜನ್ ಎ ಅಜ್ಜಿನಡ್ಕ, ಮಹಿಳಾ ಬಿಲ್ಲವ ಸಮಿತಿಯ ಅಧ್ಯಕ್ಷೆ ಭವ್ಯ ಮೋಹನ ಹಿತ್ತಿಲು, ಕಾರ್ಯದರ್ಶಿ ದಿವ್ಯ ಕೆ ಬಳಂತಿಮೊಗರು. ಸಂಘಟನಾ
ಕಾರ್ಯದರ್ಶಿಗಳಾದ ಸುರೇಶ್ ಪೂಜಾರಿ ದಲ್ಕಜೆ, ದಯಾನಂದ ಪೂಜಾರಿ ಮೂಡಾಯಿಬೆಟ್ಟು, ಜಯಂತ ಪೂಜಾರಿ ಮೂಡಾಯಿಬೆಟ್ಟು. ಸಂಘದ ಸದಸ್ಯರಾದ ಮೋಹನ ಎಚ್ ಹಿತ್ತಿಲು, ರಮೇಶ್ ಮೂರಿಬೆಟ್ಟು, ಮನೋಹರ ಮಲ್ಲಿಕಟ್ಟೆ, ದಿವಾಕರ ಮಲ್ಲಿಕಟ್ಟೆ, ಕೌಶಿಕ್ ಮಲ್ಲಿಕಟ್ಟೆ, ಅಶ್ವಿತ್ ಮೂರಿಬೆಟ್ಟು ಪಾಲ್ಗೊಂಡಿದ್ದರು.