ಬಡಗನ್ನೂರು: ಅರಿಯಡ್ಕ ಪನೆಕ್ಕಳ ಶ್ರೀ ಮಹಾಮಾರಿಯಮ್ಮ ಮತ್ತು ಸಹಪರಿವಾರ ದೈವಗಳ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಪುತ್ತೂರು ಶಾಸಕ ಅಶೋಕ್ ರೈ ಭೇಟಿ ನೀಡಿ ನೂತನವಾಗಿ ನಿರ್ಮಾಣಗೊಂಡಿರುವ ದೈವಸ್ಥಾನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ, ಯುವಕರ ಕಾರ್ಯವನ್ನು ಶ್ಲಾಘಿಸಿದರು.
10 ಲಕ್ಷ ಅನುದಾನದ ಭರವಸೆ
ಶಾಸನ ಅಶೋಕ್ ಕುಮಾರ್ ರೈ ಸಮಿತಿಯವರೊಂದಿಗೆ ಮಾತನಾಡಿ ತಮ್ಮ ಕ್ಷೇತ್ರಾಭಿವೃಧ್ಧಿ ಅನುದಾನದಿಂದ 5 ಲಕ್ಷ ಹಾಗೂ ಮುಜರಾಯಿ ಇಲಾಖೆ ವತಿಯಿಂದ 5 ಲಕ್ಷ ಒಟ್ಟು 10 ಲಕ್ಷ ರೂಪಾಯಿ ಅನುದಾನ ನೀಡುವ ಭರವಸೆ ನೀಡಿದರು.