ಮಂಗಳೂರು ವಿ.ವಿ ಅಂತರ್-ಕಾಲೇಜು ವೈಟ್ ಲಿಪ್ಟಿಂಗ್ ಚಾಂಪಿಯನ್ ಶಿಪ್ : ಫಿಲೋಮಿನಾ ಕಾಲೇಜಿನ ಮಹಿಳೆಯರ ವಿಭಾಗ ರನ್ನರ್ಸ್, ಪುರುಷರ ವಿಭಾಗ ತೃತೀಯ

0

ಪುತ್ತೂರು: ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಮಾ.14 ಹಾಗೂ 15 ರಂದು ಜರಗಿದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್-ಕಾಲೇಜು ವೈಟ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಮಹಿಳೆಯರ ವಿಭಾಗವು ರನ್ನರ್ಸ್ ಪ್ರಶಸ್ತಿಗೆ ಭಾಜನರಾಗಿದ್ದು, ಪುರುಷರ ವಿಭಾಗವು ತೃತೀಯ ಪ್ರಶಸ್ತಿಯನ್ನು ಗಳಿಸಿಕೊಂಡಿದೆ.


ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಎಂಕಾಂನ ಬ್ಯೂಲರವರು 64 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ, ಪ್ರಥಮ ಬಿಸಿಎಯ ಚಮೀಶರವರು 74ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ, ದ್ವಿತೀಯ ಬಿಸಿಎಯ ವರ್ಷಾರವರು 71ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ, ಪ್ರಥಮ ಬಿಕಾಂನ ಪ್ರಥ್ವಿರವರು 87+ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ, ಪ್ರಥಮ ಬಿಎಸ್ಸಿಯ ದೃಶ್ಯರವರು 55ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ, ದ್ವಿತೀಯ ಬಿಎಸ್ಸಿಯ ಚೈತ್ರಿಕಾರವರು 49ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ, ದ್ವಿತೀಯ ಬಿಎಸ್ಸಿಯ ಶಿವಾನಿ ಮಾಚಯ್ಯರವರು 49ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ, ದ್ವಿತೀಯ ಬಿಎಸ್ಸಿಯ ಸ್ಪಂದನಾರವರು 45ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ.


ಪುರುಷರ ವಿಭಾಗದಲ್ಲಿ ಅಂತಿಮ ಬಿಕಾಂನ ಶಬರೀಶ್ ರೈರವರು 89 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ, ಅಂತಿಮ ಬಿಕಾಂನ ಯತೀಶ್ ರವರು 89 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ, ದ್ವಿತೀಯ ಬಿಎಯ ರಂಜಿತ್ ಕುಮಾರ್ ರವರು 109ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ, ರಿತೇಶ್ ರವರು 67ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ವಿಜೇತರಾಗಿದ್ದಾರೆ. ಈ ಕ್ರೀಡಾಪಟುಗಳಿಗೆ ಅಶ್ವಥ್ ಕೆ.ಎಸ್ ಹಾಗೂ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಡಾ|ಎಲ್ಯಾಸ್ ಪಿಂಟೊರವರು ತರಬೇತಿಯನ್ನು ನೀಡಿರುತ್ತಾರೆ. ಕ್ರೀಡಾಪಟುಗಳ ಸಾಧನೆಗೆ ಕಾಲೇಜಿನ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್, ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊರವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

ಸ್ಪಂದನಾರವರಿಗೆ ಉತ್ತಮ ಲಿಪ್ಟರ್ ಅವಾರ್ಡ್..
45ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ವಿಜೇತರಾಗಿರುವ ದ್ವಿತೀಯ ಬಿಎಸ್ಸಿಯ ಸ್ಪಂದನಾರವರು “ಉತ್ತಮ ಲಿಪ್ಟರ್” ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇದೇ ಸ್ಪಂದನಾರವರು ಆಂಧ್ರಪ್ರದೇಶದ ಗುಂಟೂರು ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ನಡೆದಿರುವ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ವೈಟ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ(45ಕೆ.ಜಿ ವಿಭಾಗ) ಗಳಿಸಿ ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾನಿಲಯದ ವೈಟ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದರು. ಸ್ಪಂದನಾರವರು ಪುಣಚ ನಿವಾಸಿ ದೇವಪ್ಪ ಗೌಡ ಹಾಗೂ ಜಯಶೀಲ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here