ಇರ್ವತ್ತೂರು ಪದವು: ಹಳೆ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ ಸಮಾರಂಭ

0

ಇರ್ವತ್ತೂರು ಪದವು: ಎಸ್.ಪಿ.ಫ್ಯಾಮಿಲಿ ಇರ್ವತ್ತೂರು ಪದವು ಇದರ ವತಿಯಿಂದ ಬೃಹತ್ ಇಫ್ತಾರ್ ಕೂಟ ಬದ್ರಿಯಾ ಜುಮಾ ಮಸೀದಿ ಇರ್ವತ್ತೂರು ಪದವು ವಠಾರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಹನ್ನೊಂದು ವರುಷಗಳ ಕಾಲ ಸುದೀರ್ಘ ನಿಸ್ವಾರ್ಥ ಸೇವೆ ಹಾಗೂ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದೀನೀ ಭೋದನೆಗೈದ ಖತೀಬರಾದ ಉಮರ್ ಮದನಿ ಹಾಗೂ ಹತ್ತು ವರ್ಷಗಳ ಕಾಲ ಗಣನೀಯ ಸೇವೆಗೈದು ಎಲ್ಲರ ಮನ ಗೆದ್ದ ರಫೀಕ್ ಮದನಿ ಇವರಿಗೆ ಮದ್ರಸ್ಸತ್ತುಲ್ ದೀನಿಯ್ಯ ಹಳೆ ವಿದ್ಯಾರ್ಥಿಗಳಾದ ಮೊಹಮ್ಮದ್ ಶಹದ್, ಮೊಹಮ್ಮದ್ ಇರ್ಫಾನ್, ಮೊಹಮ್ಮದ್ ಇಫಾಝ್, ಮೊಹಮ್ಮದ್ ಅಲ್ತಾಫ್ ಅವರು ಶಾಲು ಹೊದಿಸಿ ಗೌರವಿಸಿ, ಕಿರು ಕಾಣಿಕೆ ನೀಡುವುದರ ಮೂಲಕ ಇಬ್ಬರನ್ನು ಬೀಳ್ಕೊಟ್ಟರು. ಈ ಸಮಯದಲ್ಲಿ ಮಾಜಿ ಅಧ್ಯಕ್ಷ ಎಸ್.ಪಿ.ಮೊಹಮ್ಮದ್ ರಫೀಕ್ ಮತ್ತು ಸ್ಥಳೀಯ ಹಿರಿಯರಾದ ಹಂಝತ್ ಆಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here