ರೋಟರಿ ಕ್ಲಬ್ ಪುತ್ತೂರು ಯುವಕ್ಕೆ ರೋಟರಿ ಗವರ್ನರ್ ಭೇಟಿ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮ
ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವಕ್ಕೆ ರೋಟರಿ ಗವರ್ನರ್ ಭೇಟಿ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಶ್ರೀ ಮಹಮ್ಮಾಯ ದೇವಸ್ಥಾನದ ಆವರಣದಲ್ಲಿ ಕುಡಿಯುವ ಶುದ್ಧ ನೀರಿನ ಘಟಕವನ್ನು ಉದ್ಘಾಟಿಸಲಾಯಿತು.
ರೋಟರಿ ಜಲಸಿರಿ ಯೋಜನೆಯಡಿ ರೋಟರಿ ಗವರ್ನರ್ ವಿಕ್ರಮ್ ದತ್ತ ಉದ್ಘಾಟಿಸಿದರು.
ರೋಟರಿ ಗವರ್ನರ್ ವಿಕ್ರಮ್ ದತ್ತ ಮಾತನಾಡಿ, ಬಿಸಿಲ ಧಗೆ ಹಿನ್ನೆಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿರುವುದು ತುಂಬಾ ಸಂತೋಷದ ವಿಚಾರ. ಇನ್ನಷ್ಟು ಉತ್ತಮ ಕೊಡುಗೆಗಳು ನಿಮ್ಮ ಕ್ಲಬ್ ನಿಂದ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ, ಕಾರ್ಯದರ್ಶಿ ವಚನಾ ಜಯರಾಂ, ಕೋಶಾಧಿಕಾರಿ ಅಭೀಷ್, ಅಸಿಸ್ಟೆಂಟ್ ಗವರ್ನರ್ ಡಾ. ಹರ್ಷ ಕುಮಾರ್ ರೈ ಮಾಡಾವು, ಝೋನಲ್ ಲೆಫ್ಟಿನೆಂಟ್ ಪೀಟರ್ ವಿಲ್ಸನ್ ಪ್ರಭಾಕರ್, ಪೂರ್ವಾಧ್ಯಕ್ಷ ಪಶುಪತಿ ಶರ್ಮಾ, ನಿಯೋಜಿತ ಅಧ್ಯಕ್ಷ ಕುಸುಮಾರಾಜ್, ಸ್ಥಾಪಕಾಧ್ಯಕ್ಷ ರತ್ನಾಕರ್ ರೈ, arch klump society ಸದಸ್ಯ ವಿಶ್ವಾಸ್ ಶೆಣೈ, ಪೂರ್ವಾಧ್ಯಕ್ಷರಾದ ಚೇತನ್, ಉಮೇಶ್ ನಾಯಕ್ ಪುತ್ತೂರು, ನರಸಿಂಹ ಪೈ ಮೊದಲಾದವರು ಉಪಸ್ಥಿತರಿದ್ದರು.