ಪುಣಚ ಕಲ್ಲಾಜೆಯಲ್ಲಿ ಕಲ್ಲಾಲ್ತ ಗುಳಿಗ, ಕುಪ್ಪೆ ಪಂಜುರ್ಲಿ ದೈವಗಳ ಪ್ರತಿಷ್ಠೆ

0


ಪುಣಚ: ಪುಣಚ ಗ್ರಾಮದ ಕಲ್ಲಾಜೆಯಲ್ಲಿ ಬೈಲುಗುತ್ತು ಜಯಕರ ರೈ ಕಲ್ಲಾಜೆ ಎಂಬವರ ಜಾಗದಲ್ಲಿ ನೂತನವಾಗಿ ನಿರ್ಮಿಸಿರುವ ಕಲ್ಲಾಲ್ತ ಗುಳಿಗ ಹಾಗೂ ಕುಪ್ಪೆ ಪಂಜುರ್ಲಿ ದೈವಗಳ ಪ್ರತಿಷ್ಠೆ ಮಾ.20ರಂದು ನಡೆಯಿತು.


ಬೆಳಿಗ್ಗೆ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿಯವರ ನೇತೃತ್ವದಲ್ಲಿ ಮಹಾಗಣಪತಿ ಹೋಮ,‌ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ನಡೆದು ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು.
ಬೈಲುಗುತ್ತು ಕುಟುಂಬದ ಯಜಮಾನ ಜಗನ್ನಾಥ ರೈ ಸೇರಿದಂತೆ ಬೈಲುಗುತ್ತು ಕುಟುಂಬಸ್ಥರು, ಬಂಧುಗಳು ಸ್ಥಳೀಯರು, ಗ್ರಾಮಸ್ಥರು ಪಾಲ್ಗೊಂಡರು.


ಜಯಕರ ರೈಯವರ ಅಳಿಯ ಯಶಸ್ವಿ ರೈ ಬೈಲುಗುತ್ತು, ಪುತ್ರಿ ಸಾದನ-ಯಶಸ್ವಿ ರೈ ಭಕ್ತಾದಿಗಳನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here