ಸವಣೂರು : ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ಎ.22ರಿಂದ ಎ.24ರವರೆಗೆ ಶ್ರೀಧರ್ಮರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ವರ್ಷಾವಧಿ ಜಾತ್ರೋತ್ಸವ ನಡೆಯಲಿದ್ದು,ಇದರ ಆಮಂತ್ರಣ ಬಿಡುಗಡೆ ದೈವಸ್ಥಾನದ ಆವರಣದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ಗೌರವಾಧ್ಯಕ್ಷ ,ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು,ಪಾಲ್ತಾಡು ವಿನೋದ್ ರೈ ,ಪಾಲ್ತಾಡಿ ಗುತ್ತಿನಮನೆ,ಆಡಳಿತ ಸಮಿತಿ
ಅಧ್ಯಕ್ಷ ವಿನಯಚಂದ್ರ ಕೆಳಗಿನಮನೆ,ಉಪಾಧ್ಯಕ್ಷರಾದ ವಿಠಲ ಶೆಟ್ಟಿ ಗುತ್ತಿನಮನೆ,ದಿವಾಕರ ಬಂಗೇರ,ಪದ್ಮಪ್ರಸಾದ್, ಕಲಾಯಿ,ಪ್ರವೀಣ್ ರೈ ನಡುಕೂಟೇಲು,ಕಾರ್ಯದರ್ಶಿ ಜಯರಾಮ ಗೌಡ ದೊಡ್ಡಮನೆ,ಜತೆ ಕಾರ್ಯದರ್ಶಿ,ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ತಾರಾನಾಥ ಬೊಳಿಯಾಲ,ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿ ಗಣೇಶ್ ಅಮೆಚ್ಚೋಡು ,ದೈವಸ್ಥಾನಕ್ಕೆ ಸಂಬಂಧಪಟ್ಟ ಆರು ಮನೆಯ ಪ್ರಮುಖರು ಸೇರಿದಂತೆ ಹಲವರು ಉಪಸ್ಥಿತರಿದ್ದರು.