ಇಳಂತಿಳ ಗ್ರಾ.ಪಂ. ಅಧ್ಯಕ್ಷರ ಪದಚ್ಯುತಿ- ಹಂಗಾಮಿ ಅಧ್ಯಕ್ಷರಾಗಿ ಸವಿತಾ

0

ಉಪ್ಪಿನಂಗಡಿ: ಅವಿಶ್ವಾಸ ಮಂಡನೆಯ ಮೂಲಕ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಪದಚ್ಯುತಗೊಳಿಸಿ ಗಮನ ಸೆಳೆದ ಇಳಂತಿಲ ಗ್ರಾಮ ಪಂಚಾಯತ್‌ನಲ್ಲಿ ಉಪಾಧ್ಯಕ್ಷರಾದ ಸವಿತಾ. ಎಚ್ ಅವರನ್ನು ಹಂಗಾಮಿ ಗ್ರಾಮ ಪಂಚಾಯತ್ ಅಧ್ಯಕ್ಷರನ್ನಾಗಿ ಆಯ್ಕೆಗೊಳಿಸಿ ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.

ಒಟ್ಟು 14 ಸದಸ್ಯ ಬಲದ ಇಳಂತಿಲ ಗ್ರಾಮ ಪಂಚಾಯತ್‌ನಲ್ಲಿ ಹನ್ನೆರಡು ಮಂದಿ ಬಿಜೆಪಿ ಬೆಂಬಲಿತ ಸದಸ್ಯರೇ ಇದ್ದರೂ ಕಳೆದ ಕೆಲ ದಿನಗಳ ಹಿಂದೆ ಗ್ರಾಮ ಪಂಚಾಯತ್‌ನ ಒಂಬತ್ತು ಸದಸ್ಯರು ಅಧ್ಯಕ್ಷ ತಿಮ್ಮಪ್ಪ ಗೌಡ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ ಪುತ್ತೂರು ಸಹಾಯಕ ಕಮಿಶನರ್‌ಗೆ ಮನವಿ ಸಲ್ಲಿಸಿದ್ದರು. ಈ ಕಾರಣದಿಂದ ಸಹಾಯಕ ಕಮಿಷನರ್ ಮಾ.18ರಂದು ಅವಿಶ್ವಾಸ ಕುರಿತಂತೆ ವಿಶೇಷ ಸಭೆ ಕರೆದಿದ್ದು, ಈ ವೇಳೆ ಒಟ್ಟು 14 ಸದಸ್ಯರ ಪೈಕಿ 12 ಮಂದಿ ಸದಸ್ಯರು ಅವಿಶ್ವಾಸ ಮಂಡನೆಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಅಧ್ಯಕ್ಷ ತಿಮ್ಮಪ್ಪ ಗೌಡರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿದ್ದರು.
ಈ ಪ್ರಕಿಯೆಯ ಆಧಾರದಲ್ಲಿ ಸಹಾಯಕ ಕಮಿಶನರ್ ಹೊರಡಿಸಿದ ಅಧಿಸೂಚನೆಯಂತೆ ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರು ಗ್ರಾಮ ಪಂಚಾಯತ್ ಆಡಳಿತಕ್ಕೆ ಅಧ್ಯಕ್ಷ ಸ್ಥಾನಕ್ಕೆ ಕ್ರಮಬದ್ದ ಆಯ್ಕೆಯಾಗುವ ವರೆಗೆ ಅಧ್ಯಕ್ಷ ಸ್ಥಾನವನ್ನು ಉಪಾಧ್ಯಕ್ಷರೇ ನಿರ್ವಹಿಸುವುದೆಂದು ಮಾ.19ರ ಜ್ಞಾಪನಾ ಪತ್ರದಲ್ಲಿ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here