ಮರ್ದಾಳ: ಇಲ್ಲಿನ ಪಾಲೆತ್ತಡ್ಕ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ವಿಜಯಬ್ಯಾಂಕ್ ಪ್ರಾಯೋಜಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇವರು 1 ಲಕ್ಷ ರೂ.ವೆಚ್ಚದಲ್ಲಿ ಅಳವಡಿಸಿದ್ದ ಸ್ಮಾರ್ಟ್ಕ್ಲಾಸ್ ತರಗತಿಯನ್ನು ಸುಮಾರು 32 ಸಾವಿರ ರೂ.ವೆಚ್ಚದಲ್ಲಿ ನವೀಕರಿಸಿ ಪುನರ್ ಆರಂಭಿಸಲಾಯಿತು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮೂಲಕ ಶಾಲೆಗೆ ಸ್ಮಾರ್ಟ್ಕ್ಲಾಸ್ ತರಗತಿ ಒದಗಿಸಿಕೊಟ್ಟ ಪ್ರತಿಷ್ಠಾನದ ಕಾರ್ಯದರ್ಶಿ, ಸ್ಥಳೀಯ ನಿವಾಸಿ ರಾಜೇಂದ್ರ ರೈ ಬೆಳ್ಳಿಪ್ಪಾಡಿ, ಇದಕ್ಕೆ ಸಹಕಾರ ನೀಡಿದ ವಿಜಯ ಗ್ರಾಮಾಭಿವೃದ್ಧಿ ಸಮಿತಿ ಮರ್ದಾಳ ಇದರ ಕಾರ್ಯದರ್ಶಿ ಶಿವಪ್ರಸಾದ್ ಕೈಕುರೆ, ಬ್ಯಾಂಕ್ ಆಫ್ ಬರೋಡದ ಮರ್ದಾಳ ಶಾಖಾ ಪ್ರಬಂಧಕ ವಿಶಾಕ್, ಸೆಲ್ಕೋ ಸಂಸ್ಥೆಯ ಅಧಿಕಾರಿಗಳನ್ನು ಹಾಗೂ ಶಾಲೆಗೆ ನಿರಂತರ ಸಹಕಾರ ನೀಡುತ್ತಿರುವ ದಾನಿಗಳನ್ನು ಅಭಿನಂದಿಸುವ ನಿಟ್ಟಿನಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಿ ಗೌರವಿಸಲು ಶಾಲಾಭಿವೃದ್ಧಿ ಸಮಿತಿಯು ತೀರ್ಮಾನಿಸಿದೆ ಎಂದು ಎಸ್ಡಿಎಂಸಿ ಅಧ್ಯಕ್ಷರು ಈ ಸಂದರ್ಭದಲ್ಲಿ ತಿಳಿಸಿದರು. ಎಸ್ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.