ಯಶಸ್ವಿ 23ನೇ ವರ್ಷಕ್ಕೆ ಪಾದಾರ್ಪಣೆ – ಪದ್ಮವಿದ್ಯಾ ಸರ್ವೀಸ್ ಸ್ಟೇಷನ್‌ನಲ್ಲಿ ಧಾರ್ಮಿಕ ವಿಧಿ-ವಿಧಾನ

0

ಉಪ್ಪಿನಂಗಡಿ: ಇಲ್ಲಿನ ಬೊಳ್ಳಾರ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಪದ್ಮವಿದ್ಯಾ ಸರ್ವೀಸ್ ಸ್ಟೇಷನ್‌ನ 23ನೇ ವರ್ಷದ ಪಾದಾರ್ಪಣೆ ಪ್ರಯುಕ್ತ ಮಾ.21ರಂದು ಸರ್ವೀಸ್ ಸ್ಟೇಷನ್‌ನಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು.
ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಸರ್ವೀಸ್ ಸ್ಟೇಷನ್‌ನ ಮಾಲಕರಾದ ಎಂ. ವಜ್ರಕುಮಾರ್ ಜೈನ್ ಮತ್ತು ವಿದ್ಯಾಧರ ಜೈನ್, ಪೆಟ್ರೋಲ್, ಡೀಸೆಲ್, ಸರ್ವೋ ಆಯಿಲ್, ಕಂಪ್ಯೂಟರೀಕೃತ ಗಾಳಿ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಗ್ರಾಹಕರಿಗೆ ವಿಶ್ರಾಂತಿ ವ್ಯವಸ್ಥೆ, ಮಾರುತಿ ಸುಜುಕಿಯವರ ಅಧಿಕೃತ ಮಾರಾಟ ಮತ್ತು ಸೇವಾ ಕೇಂದ್ರ ಮಾಂಡೋವಿ ಮೋಟಾರ‍್ಸ್, ಭಾರತ್ ಮಾರ್ಬಲ್, ಗ್ರಾನೈಟ್ ಮತ್ತ ಟೈಲ್ಸ್ ಸೇರಿದಂತೆ 22 ವರ್ಷಗಳಿಂದ ಉತ್ತಮ ಸೇವಾ ಸೌಲಭ್ಯಗಳನ್ನು ನೀಡುತ್ತಿರುವ ಪದ್ಮವಿದ್ಯಾ ಸರ್ವೀಸ್ ಸ್ಟೇಷನ್ ಗ್ರಾಹಕರ ಸಹಕಾರದಿಂದ ಯಶಸ್ವಿಯಾಗಿ ಮುನ್ನೆಡೆಯುತ್ತಿದ್ದು, ಈಗ 23ನೇ ವರ್ಷಕ್ಕೆ ಕಾಲಿಟ್ಟಿದೆ. ಶೀಘ್ರದಲ್ಲೇ ಇಲ್ಲಿ ಸಿಎನ್‌ಜಿ ಗ್ಯಾಸ್ ಸ್ಟೇಷನ್, ಎಲೆಕ್ಟ್ರಿಕ್ ವಾಹನಗಳ ಚಾರ್ಚಿಂಗ್ ಸ್ಟೇಶನ್ ಶುಭಾರಂಭಗೊಳ್ಳಲಿದ್ದು, ಇದರ ಕಾಮಗಾರಿಗಳು ನಡೆಯುತ್ತಿವೆ. ಇನ್ನು ಮುಂದೆಯೂ ಗ್ರಾಹಕರು ನಮ್ಮ ಸಂಸ್ಥೆಗೆ ಇದೇ ರೀತಿ ಸಹಕಾರ ನೀಡಬೇಕೆಂದು ಕೋರಿದರು.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಕರುಣಾಕರ ಸುವರ್ಣ, ಉಪ್ಪಿನಂಗಡಿ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪಾಧ್ಯಕ್ಷರಾದ ವಾರಿಸೇನ ಜೈನ್ ಕೋಡಿಯಾಡಿಗುತ್ತು, ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಉಪಾಧ್ಯಕ್ಷ ದಯಾನಂದ ಸರೋಳಿ, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಸುರೇಶ್ ಅತ್ರೆಮಜಲು, ಸಾಮಾಜಿಕ ಕಾರ್ಯಕರ್ತ ಜಯಂತ ಪೊರೋಳಿ, ಆದಿತ್ಯ ಸಮೂಹ ಸಂಸ್ಥೆಗಳ ವಿಕ್ರಂ, ಬಿಜೆಪಿ ಪ್ರಮುಖ ಮೋಹನ್ ಪಕಳ, ಉದ್ಯಮಿಗಳಾದ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಯು. ರಾಮ, ಅನಂತರಾಯ ಕಿಣಿ, ಮಹೇಂದ್ರವರ್ಮ, ಶಾಂತರಾಮ ಭಟ್ ಕಾಂಚನ, ಉದಯಕುಮಾರ್ ಉದಯಗಿರಿ, ಬನಾರಿ ರಾಮಪ್ರಸಾದ್, ಸ್ವರ್ಣೇಶ್, ನವೀನ್ ಬೋರ್‌ವೆಲ್ಸ್‌ನ ಮಾಲಕರಾದ ಸಂಗೋಟಿಯನ್, ಶ್ರೀ ಸ್ವರ್ಣ ಭೂಮಿ ಮಾಲಕ ಬಾಲು, ಮಾಂಡೋವಿ ಮೋಟಾರ‍್ಸ್‌ನ ವ್ಯವಸ್ಥಾಪಕ ಚಂದ್ರಶೇಖರ ಸನಿಲ್, ಅನಿಲ್ ಜೈನ್, ಅಭಯ ಜೈನ್, ಲೋಕೇಶ್ ಜೈನ್, ವಿನುತ್ ಕುಮಾರ್ ಜೈನ್, ಉಪ್ಪಿನಂಗಡಿ ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗ, ಪದ್ಮವಿದ್ಯಾ ಸರ್ವೀಸ್ ಸ್ಟೇಷನ್‌ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಶುಭ ಹಾರೈಸಿದರು.

LEAVE A REPLY

Please enter your comment!
Please enter your name here