ಇರ್ವತ್ತೂರು ಪದವು: ಯಶಸ್ವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೌರವಯುತ ಬೀಳ್ಕೊಡುಗೆ ಸಮಾರಂಭ

0

ಇರ್ವತ್ತೂರು ಪದವು: ಎಸ್.ಪಿ.ಕ್ವಾಟೇಜ್ ನಲ್ಲಿ ಯಶಸ್ವಿ ಚಾರಿಟೇಬಲ್ ಟ್ರಸ್ಟ್ (ರಿ) ಇದರ ವತಿಯಿಂದ ಬದ್ರಿಯಾ ಜುಮಾ ಮಸೀದಿ ಇರ್ವತ್ತೂರು ಪದವು ಇಲ್ಲಿ ಗಣನೀಯ ಸೇವೆ ಸಲ್ಲಿಸಿ ದೀನಿ ವಿದ್ಯಾಭ್ಯಾಸ ಮೂಲಕ ಉತ್ತಮ ರೀತಿಯಲ್ಲಿ ಕಾರ್ಯ ಪ್ರವೃತ್ತರಾದ ಮದ್ರಸ ಅಧ್ಯಾಪಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಹನ್ನೊಂದು ವರುಷಗಳ ಕಾಲ ಸುದೀರ್ಘ ಹಾಗೂ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದೀನೀ ಭೋದನೆಗೈದ ಖತೀಬರಾದ ಉಮರ್ ಮದನಿ ಹಾಗೂ ಹತ್ತು ವರ್ಷಗಳ ಕಾಲ ಗಣನೀಯ ಸೇವೆಗೈದ ರಫೀಕ್ ಮದನಿ 4 ವರುಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಸ್ಥಳೀಯ ಬುರೂಜ್ ಸಂಸ್ಥೆಯ ಸದರ್ ಆದ ಸಿದ್ದೀಕ್ ಸಖಾಫಿ ಇವರಿಗೆ ಅವರ ಅನುಪಸ್ಥಿತಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಅಬೂಬಕ್ಕರ್ ಟಿ.ಎಸ್.ಎನ್ ಅಧ್ಯಕ್ಷತೆ ಯನ್ನು ಮಾಜಿ ಕಾರ್ಯದರ್ಶಿ ಎಸ್.ಅಬ್ದುಲ್ ರಹಿಮಾನ್, ಸ್ಥಳೀಯ ನೇತಾರ ಅಬ್ದುಲ್ ರಹಿಮಾನ್ ಯಾನೆ ಖಲೀಲ್ ಬಾಯ್ ,ಬದ್ರೀಯಾ ಜುಮಾ ಮಸೀದಿ ಆಡಳಿತ ಕಮಿಟಿ ಸದಸ್ಯ ಹಾಗೂ ಮೂಡುಪಡುಕೋಡಿಯ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಇಬ್ರಾಹಿಂ ಮೇಸ್ತ್ರಿ, ಪೈರೋಝ್ ಬಿ.ಎಸ್.ನಗರ ಉಪಸ್ಥಿತರಿದ್ದರು.

ಟ್ರಸ್ಟ್ ಅಧ್ಯಕ್ಷರಾದ ಎಸ್.ಪಿ.ಮೊಹಮ್ಮದ್ ರಫೀಕ್ ಮಾತನಾಡಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಮೂರು ಮಹಾನ್ ವ್ಯಕ್ತಿಗಳು ನಮ್ಮೂರ ಮದ್ರಸ ಬಿಟ್ಟು ಹೋಗುವುದರ ಬಗ್ಗೆ ನೆನೆಸಿಕೊಳ್ಳುತ್ತಾ ಬೇಸರ ವ್ಯಕ್ತ ಪಡಿಸಿ ಭಾವುಕರಾದರು. ಶಾಲು ಹೊದಿಸಿ, ಕಿರು ಕಾಣಿಕೆ ನೀಡುವುದರ ಮೂಲಕ ಗೌರವಿಸಲಾಯಿತು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಕಲಾಬಾಗಿಲುರವರು ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here