ಪುತ್ತೂರು: ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಆಗಿ ಪುತ್ತೂರು ತಾಲೂಕಿನ ಬೆದ್ರುಮಾರ್ ಡಾ. ಸಂದೀಪ್ ರೈ ಮಾ.7 ರಂದು ಅಧಿಕಾರ ಸ್ಚೀಕರಿಸಿದರು.
ಬೆದ್ರುಮಾರ್ ಸದಾಶಿವ ರೈ ಮತ್ತು ರತ್ನ ಎಸ್. ರೈಯವರ ಪುತ್ರರಾಗಿರುವ ಇವರು ಎಂಬುಬಿಎಸ್ ಪದವಿಯನ್ನು ಬೆಂಗಳೂರಿನ ಪ್ರತಿಷ್ಠಿತ KIMS ಲ್ಲಿ, ಎಂ.ಎಸ್. ಮತ್ತು ಎಂ.ಸಿ.ಎಚ್ ಉನ್ನತ ಪದವಿಯನ್ನು ಮಂಗಳೂರಿನ ಕೆಎಂಸಿ ಯಲ್ಲಿ ಪಡೆದುಕೊಂಡಿದ್ದಾರೆ.

ಕಡಮಜಲು ಸುಭಾಸ್ ರೈ ದಂಪತಿ ದೇಹದಾನಕ್ಕೆ ಪ್ರೇರಣೆ
ಡಾ. ಸಂದೀಪ್ ರೈಯವರು ಪುತ್ತೂರಿನ ಹಲವು ಗ್ರಾಮಗಳಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಕೆ.ಎಸ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಮೂಲಕ ಮಾಡಿಸಿ, ಸ್ವತಃ ಆರ್ಥಿಕವಾಗಿ ಹಿಂದುಳಿದವರಿಗೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆಯನ್ನು ನೀಡಿಕೊಂಡು ಬಂದಿರುತ್ತಾರೆ.
ಕಡಮಜಲು ಸುಭಾಸ್ ರೈ ಮತ್ತು ಪ್ರೀತಿ ಎಸ್. ರೈಯವರು ತಮ್ಮ ಮರಣೋತ್ತರ ದೇಹವನ್ನು ಕೆ.ಎಸ್. ಹೆಗ್ಡೆ ಮೆಮೋರಿಯಲ್ ಮೆಡಿಕಲ್ ಕಾಲೇಜಿಗೆ ದಾನ ಮಾಡಲಿದ್ದು, ಇದಕ್ಕೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿದವರು ಡಾ. ಸಂದೀಪ್ ರೈಯವರು. ಡಾ. ಸಂದೀಪ್ ರೈಯವರು ಪತ್ನಿ ಸುಹಾನಾ ರೈ, ಪುತ್ರಿ ಸಾಣ್ಯ ರೈ, ಪುತ್ರ ಬೆಂಗಳೂರಿನಲ್ಲಿ ಆರ್ಕಿಟೆಕ್ ಇಂಜಿನಿಯರ್ ಆಗಿರುವ ಸಹನ್ ರೈ ಜೊತೆ ಸುಖೀ ಸಂಸಾರಿಯಾಗಿದ್ದಾರೆ.