ಲಯನ್ಸ್ ಕ್ಲಬ್ ವತಿಯಿಂದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ

0

ಸ್ವಚ್ಚತೆಗೆ ಜಾಗೃತಿಯೇ ಅಗತ್ಯ – ಈಶ್ವರ ಭಟ್ ಪಂಜಿಗುಡ್ಡೆ



ಪುತ್ತೂರು: ಸಿಸಿ ಕ್ಯಾಮರಾ, ನಾಗಸನ್ನಿಧಿ ಫಲಕಕ್ಕೆ ಭಯ ಪಟ್ಟು ಬೇರೆ ಕಡೆ ಕಸ ಹಾಕುವವರಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಸ್ವಚ್ಚತೆ ಕಾಪಾಡಿದರೆ ಎಲ್ಲವು ಸ್ವಚ್ಛತೆಯಾಗುತ್ತದೆ ಎಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಹೇಳಿದರು.


ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆ ಮತ್ತು ವಠಾರದಲ್ಲಿ ಲಯನ್ಸ್ ಕ್ಲಬ್ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು ಮತ್ತು ಲಯನ್ಸ್ ಕ್ರೌನ್ ವತಿಯಿಂದ ಜಂಟಿಯಾಗಿ ನಡೆದ ಸ್ವಚ್ಛತಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ರಸ್ತೆ ಬದಿಯಲ್ಲಿ ಬಂದು ಕಸ ಹಾಕಿ ಹೋಗುವರ ಕುರಿತು ನಗರಸಭೆಗೆ ದೂರು ನೀಡಬೇಕು. ಲಯನ್ಸ್ ಕ್ಲಬ್ ವತಿಯಿಂದ ಸ್ವಚ್ಛತೆ ನಡೆಯುತ್ತಿರುವುದು ಸಂತೋಷ ಆಗಿದೆ. ಜಾತ್ರೆ ಮುಗಿದ ಬಳಿಕವೂ ಸ್ವಚ್ಚತೆ ಮಾಡಿದರೆ ಇನ್ನಷ್ಟು ಸಂತೋಷ ಆಗುತ್ತದೆ ಎಂದ ಅವರು ದೇವಸ್ಥಾನದಲ್ಲಿ ಅಧ್ಯಕ್ಷ ಸದಸ್ಯರು ಇರುವುದು ಒಂದು ವ್ಯವಸ್ಥೆಗಾಗಿ ಮಾತ್ರ. ನಾವೆಲ್ಲ ದೇವರ ಚಾಕ್ರಿಯವರಾಗಿ ಕೆಲಸ ಮಾಡುವವರು. ನಿಮ್ಮೆಲ್ಲರ ಸಹಕಾರ ಬೇಕು ಎಂದರು.

ಲಯನ್ಸ್ ಕ್ಲಬ್‌ನ ಅಧ್ಯಕ್ಷೇ ಪ್ರೇಮಲತಾ ರಾವ್, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ್ ಸುವರ್ಣ, ನಗರಸಭೆ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ರಮೇಶ್ ರೈ ನೆಲ್ಲಿಕಟ್ಟೆ, ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು ಇದರ ಅಧ್ಯಕ್ಷೆ ವೇದಾವತಿ, ಲಯನ್ಸ್ ಕ್ಲಬ್ ಕ್ರೌನ್ ಇದರ ಅಧ್ಯಕ್ಷೆ ವಿಲ್ಮ, ಲಯನ್ಸ್ ಜಿಲ್ಲಾ ಸ್ವಚ್ಛ ಭಾರತ್ ಇದರ ಆಯೋಜಕಿ ಜಯಶ್ರೀ ಎಸ್ ಶೆಟ್ಟಿ, ಕ್ಲಬ್‌ನ ಪದಾಧಿಕಾರಿಗಳಾದ ಸುಧಾಕರ್ ನಾೖಕ್ ಕೆ.ಪಿ, ನಾರಾಯಣ ಗೌಡ, ಶಾರದ ಕೇಶವ್, ನಯನಾ ವಿ ರೈ, ಚಂದ್ರಪ್ರಭ, ಚಂದ್ರಶೇಖರ್ ಗೌಡ, ಅಜಿತ್ ಕುಮಾರ್ ಶೆಟ್ಟಿ, ಪ್ರಶಾಂತ್ ಕುಮಾರ್, ಶಿವಪ್ರಸಾದ್ ಶೆಟ್ಟಿ, ವಿಜಯ ಲಿಂಗಪ್ಪ, ವಿಶ್ವನಾಥ ಗೌಡ, ಗೌರಿ ಬನ್ನೂರು, ಕೇಶವ ಪೂಜಾರಿ, ಚಂದ್ರಶೇಖರ್, ರವಿಪ್ರಸಾದ್, ಸುಪ್ರಿತ್ ಕಣ್ಣರಾಯ, ಅಬೂಬಕ್ಕರ್ ಮುಲಾರ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here