ಪುತ್ತೂರು: ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ ಆಯೋಜಿಸಿದ 2024-25 ಸಾಲಿನ 2ನೇ ಹಂತದ ಒಲಿಂಪಿಯಾಡ್ ಪರೀಕ್ಷೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿರುವರು.
ವಿಜ್ಞಾನ ಪರೀಕ್ಷೆಯಲ್ಲಿ 3ನೇ ತರಗತಿಯ ಜಿಷ್ಣು ತಿಲಕ್ ಭಟ್ ( ತಿಲಕರಾಜ ಎಂ. ಮತ್ತು ಡಾ. ನಿವೇದಿತಾ ವಿ. ರಾಮಕುಂಜ ದಂಪತಿ ಪುತ್ರ ) ಝೋನಲ್ ಎಕ್ಸಲೆನ್ಸ್ ಪ್ರಮಾಣಪತ್ರ, 4ನೇ ತರಗತಿಯ ಸ್ವಸ್ತಿ ಎಂ. ಭಟ್ ( ಸತ್ಯಶಂಕರ ಎಂ. ಮತ್ತು ಅಶ್ವಿನಿ ಎಂ.ದಂಪತಿ ಪುತ್ರಿ )ಝೋನಲ್ ಎಕ್ಸಲೆನ್ಸ್ ಪ್ರಮಾಣಪತ್ರ, ಬೆಳ್ಳಿ ಪದಕ ಮತ್ತು ರೂ. 2500, ಹಾಗೂ 8ನೇ ತರಗತಿಯ ಅರುಷಿ ಎಸ್. ಪುತ್ತೂರಾಯ ( ಡಾ. ಸುರೇಶ್ ಪುತ್ತೂರಾಯ ಮತ್ತು ಡಾ.ಆಶಾ ಜ್ಯೋತಿ ಕೆ. ದಂಪತಿ ಪುತ್ರಿ ), ಕಂಚಿನ ಪದಕ, ಝೋನಲ್ ಎಕ್ಸಲೆನ್ಸ್ ಪ್ರಮಾಣಪತ್ರ, ರೂ. 1000 ನಗದು ಬಹುಮಾನ ಪಡೆದಿರುತ್ತಾರೆ.
ಹಾಗೆಯೇ ಗಣಿತ ಪರೀಕ್ಷೆಯಲ್ಲಿ 3ನೇ ತರಗತಿಯ ಗಾನ್ವಿ ಕೆ.ಎಸ್ (ಶಶಿಕಾಂತ್ ಕೆ. ಮತ್ತು ಅಶ್ವಿನಿ ಕೆ. ದಂಪತಿ ಪುತ್ರಿ) ಝೋನಲ್ ಎಕ್ಸಲೆನ್ಸ್ ಪ್ರಮಾಣಪತ್ರವನ್ನು ಪಡೆದಿರುತ್ತಾರೆ.
ಪರೀಕ್ಷೆಯ ಮೇಲ್ವಿಚಾರಣೆಯನ್ನು ಪ್ರಾಥಮಿಕ ವಿಭಾಗದ ಸಂಯೋಜಕಿ ಶ್ರೀದೇವಿ ಕೆ. ಹೆಗ್ಡೆ ಹಾಗೂ ಗಣಿತ ಪರೀಕ್ಷೆಯ ತರಬೇತಿಯನ್ನು ಡಾ.ನಿವೇದಿತಾ ವಿ. ರಾಮಕುಂಜ ಮತ್ತು 3ನೇ ತರಗತಿಯ ವಿಜ್ಞಾನ ತರಬೇತಿಯನ್ನು ಶಾಲಾ ಶಿಕ್ಷಕಿ ಭುವನ ವಿಮಲೇಶ್ ಇವರು ನೀಡಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.