CBSE ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ!!
ಪುತ್ತೂರು: ಶಾಲಾ ಶಿಕ್ಷಣದಲ್ಲಿ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಗುರುಕುಲ ಆಧಾರಿತ ‘ಪಂಚಮುಖಿ’ ಶಿಕ್ಷಣವನ್ನು ಸುಮಾರು 20 ವರ್ಷಗಳಿಂದ ನೀಡುತ್ತಾ ಬಂದಿರುವ ವಿಶ್ವಖ್ಯಾತಿಯ ‘”ರಾಷ್ಟ್ರೋತ್ಥಾನ ಪರಿಷತ್ತು”, ಪುತ್ತೂರಿನ ನೆಹರು ನಗರದಲ್ಲಿರುವ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ್ನು (CBSE) ಗುರುತಿಸಿ, ಶೈಕ್ಷಣಿಕ ಒಪ್ಪಂದಕ್ಕೆ ಮುಂದಾಗಿದೆ.
ಈ ಒಪ್ಪಂದದ ವೈಶಿಷ್ಟ್ಯಗಳು
● ಶಾಲಾ ಶಿಕ್ಷಣದಲ್ಲಿ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಗುರುಕುಲ ಆಧಾರಿತ ‘ಪಂಚಮುಖಿ’ ಶಿಕ್ಷಣ
● ಮಕ್ಕಳ ಬೌದ್ಧಿಕ, ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ವಿಕಾಸಕ್ಕೆ ಸಮಗ್ರ ಶಿಕ್ಷಣ
● ರಾಷ್ಟ್ರ ಚಿಂತನೆ, ದೇಶಭಕ್ತಿ ಹಾಗೂ ಮಾನವೀಯ ಮೌಲ್ಯಗಳ ಕಲಿಕೆ
● ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ಹಾಗೂ ಭಾರತೀಯ ಸಂಸ್ಕಾರದ ಬಗ್ಗೆ ಪ್ರತ್ಯೇಕ ಪಠ್ಯದ ಮೂಲಕ ಶಿಕ್ಷಣ
ಈ ವಿಶೇಷ ಶಿಕ್ಷಣ ಯೋಜನೆಯಡಿಯಲ್ಲಿ ಬರುವ ಸರ್ವರೀತಿಯ, ಅತ್ಯುನ್ನತ ಮಟ್ಟದ ತರಬೇತಿಯನ್ನು ರಾಷ್ಟ್ರೋತ್ಥಾನ ಪರಿಷತ್ತಿನ ಅಂಗಸಂಸ್ಥೆಯಾದ ‘ಸಂವಿತ್ ಸಂಶೋಧನಾ ಪ್ರತಿಷ್ಠಾನ’ದ ಸಮರ್ಥ ತರಬೇತುದಾರರ ಮೂಲಕ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಎಲ್ಲಾ ಶಿಕ್ಷಕರಿಗೆ ನೀಡಲಾಗುವುದು.
ಈ ನೂತನ ‘ಪಂಚಮುಖಿ’ ಶಿಕ್ಷಣ ಯೋಜನೆಯನ್ನು ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ(CBSE), ಇದೇ 2025-26 ನೇ ಶೈಕ್ಷಣಿಕ ವರ್ಷದಿಂದ ಅನುಷ್ಠಾನಕ್ಕೆ ತರಲಾಗುವುದು ಎಂಬುದಾಗಿ ಶಾಲಾ ಪ್ರಕಟಣೆ ತಿಳಿಸಿದೆ.