ಅಕ್ಷಯ ಕಾಲೇಜು: ರಕ್ಷಕ ಶಿಕ್ಷಕ ಸಂಘದ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ರಕ್ಷಕ ಶಿಕ್ಷಕ ಸಂಘದ ಸಭೆಯ ಉದ್ಘಾಟನಾ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

 ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದ, ಪುತ್ತೂರು ಟೌನ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖರ್ ಶೆಟ್ಟಿ, ಸೋಲು ಗೆಲುವಿನ ಪಯಣದಲ್ಲಿ ಮಕ್ಕಳನ್ನು ಸೋಲಲು ಬಿಡಿ, ಸೋತ ನಂತರ ಗೆಲುವು ಪಡೆದುಕೊಳ್ಳುವುದು ಗೆಲುವಿನ ಪ್ರಥಮ ದಾರಿಯಾಗಿರುತ್ತದೆ. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿ ಮಾಡಿ ಎಂದರು.

ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು,ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಕಾಲೇಜು ಆಡಳಿತ ಮಂಡಳಿ, ಸಿಬ್ಬಂದಿ ವರ್ಗದ ಪಾತ್ರ ಎಷ್ಟಿದೆಯೋ ಅಷ್ಟೇ ಮಹತ್ವವಾದ ಪಾತ್ರ ಪೋಷಕರದ್ದು ಆಗಿರುತ್ತದೆ ಎಂದರು.

ಈ ಶೈಕ್ಷಣಿಕ ಸಾಲಿನ ರಕ್ಷಕ ಶಿಕ್ಷಕ ಸಭೆಯ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಶ್ರೀಧರ್ ಶೆಟ್ಟಿ, ಉಪಾಧ್ಯಕ್ಷರಾಗಿ ತನುಜಾ, ಕಾರ್ಯದರ್ಶಿಯಾಗಿ ರಾಕೇಶ್ ವಾಣಿಜ್ಯ ವಿಭಾಗದ ಉಪನ್ಯಾಸಕರು, ಜೊತೆ ಕಾರ್ಯದರ್ಶಿಯಾಗಿ ಪುಷ್ಪಲತಾ ಹಾಗೂ ಜಾನ್ ಡಿಸೋಜಾ, ಕೋಶಾಧಿಕಾರಿಯಾಗಿ ರಶ್ಮಿ ಆಂಗ್ಲ ವಿಭಾಗದ ಮುಖ್ಯಸ್ಥರು, ಸದಸ್ಯರುಗಳಾಗಿ ಉಮೇಶ್ ನಾಯ್ಕ್, ಜಯಶ್ರೀ, ಪದ್ಮನಾಭ, ಸರಸ್ವತಿ, ಸುಚೇತ ರೈ, ವಾಸು ನಾಯ್ಕ, ರಾಧಾಕೃಷ್ಣ, ಚರಣ್ ಕುಮಾರ್, ಪ್ರಫುಲ್ಲ, ಜಯರಾಮ್ ಯುಬಿ ಆಯ್ಕೆಯಾದರು.

ವೇದಿಕೆಯಲ್ಲಿ ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಟಿಎ ಹಾಗೂ ಉಪ ಪ್ರಾಂಶುಪಾಲರಾದ ಶ್ರೀ ರಕ್ಷಣಾ ಟಿ ಆರ್ ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನು ಹಾಡಿದರು. ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿಯಾದ ಶ್ರೀ ರಾಕೇಶ್ ‌ಸ್ವಾಗತಿಸಿ, ಕೋಶಾಧಿಕಾರಿಯದ ಶ್ರೀಮತಿ ರಶ್ಮಿ ವಂದಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂಪತ್ ಕೆ ಪಕ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು .ಇಂಗ್ಲಿಷ್ ಉಪನ್ಯಾಸಕಿಯಾದ ಶ್ರೀಮತಿ ದೀಪ್ತಿ ಎ.ಸಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here