ನೆಲ್ಯಾಡಿ: ಕಳೆದ 16 ವರ್ಷಗಳಿಂದ ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಶ್ರೇಷ್ಠ ಸೇವೆ ನೀಡುತ್ತಿರುವ ನೆಲ್ಯಾಡಿಯ ಐಐಸಿಟಿ ವಿದ್ಯಾಸಂಸ್ಥೆ ಇನ್ನೊಂದು ಹೆಮ್ಮೆಯ ಸಾಧನೆ ಕಂಡಿದೆ. 2025-26ನೇ ಸಾಲಿನ ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ನೆಲ್ಯಾಡಿಯ ಐಐಸಿಟಿ ಸಂಸ್ಥೆಯಲ್ಲಿ ತರಬೇತಿ ಪಡೆದ ಇಬ್ಬರು ವಿದ್ಯಾರ್ಥಿಗಳ ತನುಷ್ ಆಯ್ಕೆಯಾಗಿದ್ದಾರೆ.
ತನುಷ್ ಶಿಬಾಜೆ ಪೆರ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಸತೀಶ ಎಂ.ಕೆ ಹಾಗೂ ಸೀತಾ ದಂಪತಿ ಪುತ್ರ. ಐಐಸಿಟಿ ವಿದ್ಯಾಸಂಸ್ಥೆ ಕಂಪ್ಯೂಟರ್ ತರಬೇತಿ, ನರ್ಸರಿ ಟೀಚರ್ ಟ್ರೈನಿಂಗ್, ಟ್ಯೂಷನ್, ನವೋದಯ ಕೋಚಿಂಗ್, ಅಬಾಕಸ್ ಮತ್ತು ಇತರ ಶೈಕ್ಷಣಿಕ ತರಬೇತಿಗಳನ್ನು ನೀಡುತ್ತಿದೆ. ನವೋದಯ ಕೋಚಿಂಗ್ ಪ್ರಾರಂಭವಾಗಿದ್ದು ಆಸಕ್ತ ವಿದ್ಯಾರ್ಥಿಗಳು 9448409912 ನಂಬರಿಗೆ ಸಂಪರ್ಕಿಸಿ ಪ್ರವೇಶ ಪಡೆಯಬಹುದು ಎಂದು ವಿದ್ಯಾಸಂಸ್ಥೆ ಪ್ರಕಟಣೆ ತಿಳಿಸಿದೆ.