ಪುತ್ತೂರು: ದಿ ಪುತ್ತೂರು ಕ್ಲಬ್ ಮಕ್ಕಳಿಗೆ, ಸಾರ್ವಜನಿಕರಿಗೆ ಮತ್ತು ಕ್ಲಬ್ ಸದಸ್ಯರಿಗೆ ಬೇಸಿಗೆ ಶಿಬಿರವನ್ನು ಆರಂಭಿಸಿದ್ದು ಮಾ.26ರಂದು ಈಜು ಶಿಬಿರವನ್ನು ಉದ್ಘಾಟಿಸಲಾಯಿತು .
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ದಿ ಪುತ್ತೂರು ಕ್ಲಬ್ ಅಧ್ಯಕ್ಷ ಡಾ.ದೀಪಕ್ ರೈ ಅವರು ಈಜು ಶಿಬಿರ ಮಕ್ಕಳಿಗೆ ಮತ್ತು ಸ್ತ್ರೀಯರಿಗಿದ್ದು ಈಗಾಗಲೇ 15 ಮಂದಿಯ ಬ್ಯಾಚ್ ಆರಂಭಗೊಳ್ಳುತ್ತಿದೆ. ಒಂದು ತಿಂಗಳ ಈ ಶಿಬಿರದಲ್ಲಿ ಎಲ್ಲರಿಗೂ ಅವಕಾಶವಿದೆ. ಮಹಿಳೆಯರಿಗೆ ಪ್ರತ್ಯೇಕವಾಗಿ ಮಹಿಳೆಯರೆ ತರಬೇತಿ ನೀಡುತ್ತಾರೆ ಎಂದವರು ಹೇಳಿದರು. ಈ ಸಂದರ್ಭ ಕ್ಲಬ್‌ನ ಕಾರ್ಯದರ್ಶಿ ವಿಶ್ವಾಸ್ ಶೆಣೈ, ನಿರ್ದೇಶಕರಾದ ಪ್ರಶಾಂತ್ ಶೆಣೈ, ಬೂಡಿಯಾರ್ ರಾಧಾಕೃಷ್ಣ ರೈ, ಶಿವರಾಮ ಆಳ್ವ, ನಿತಿನ್ ಪಕಳ, ಚಂದ್ರಶೇಖರ್ ಮತ್ತು ಮಕ್ಕಳ ಪೊಷಕರು ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.