ಪುತ್ತೂರು: ಸಂಪ್ಯ ಠಾಣೆ ವ್ಯಾಪ್ತಿಯ ಸಂಪ್ಯದಮೂಲೆಯಲ್ಲಿ ಮಹಿಳೆ ಹಾಗೂ ಆಕೆಯ ಸಹೋದರನ ಮೇಲೆ ವ್ಯಕ್ತಿಯೊಬ್ಬರು ತಲ್ವಾರ್ ಬೀಸಿ ಹಲ್ಲೆಗೆ ಮುಂದಾಗಿರುವ ಆರೋಪದ ಕುರಿತಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಪ್ಯದ ಮೂಲೆ ನಿವಾಸಿ ರೇಖನಾಥ ರೈ ಹಾಗೂ ಅವರ ಸಹೋದರಿ ಪುಷ್ಪಾವತಿ ರೈ ಅವರು ಜಾಗದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸ್ಥಳೀಯರಾದ ಹಸೈನಾರ್ ಎಂಬವರು ಬಂದು ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಅವರು ಹಲ್ಲೆಯಿಂದ ತಪ್ಪಿಸಿಕೊಂಡಿದ್ದಾರೆನ್ನಲಾಗಿದೆ. ಘಟನೆ ಕುರಿತಂತೆ ಪುಷ್ಪಾವತಿ ಎಂಬವರು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಹಸೈನಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಸೈನಾರ್ ಆಸ್ಪತ್ರೆಯಲ್ಲಿ ದಾಖಲು:
ಹಲ್ಲೆ ನಡೆದ ಸಂದರ್ಭ ಹಸೈನಾರ್ ಅವರ ಮೇಲೆ ರೇಖನಾಥ ರೈ ಮತ್ತು ಪುಷ್ಪಾವತಿ ಅವರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿ ಹಸೈನಾರ್ ಅವರು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.